ಮರಣ ಮೃದಂಗ ಬಾರಿಸುತ್ತಿರುವ ಕೋವಿಡ್: ಸೂತಕದ ಕೋಟೆ 

* ಜಿಲ್ಲೆಯಲ್ಲಿ ೨೯ಕ್ಕೇರಿದ ಸಾವಿನ ಸಂಖ್ಯೆ  * ಕೊನೆ ಹಂತದಲ್ಲಿ ಬರುತ್ತಿರುವ ಸೋಂಕಿತರು  * ಹೈರಾಣಾದ ವೈದ್ಯರು             

ಮರಣ ಮೃದಂಗ ಬಾರಿಸುತ್ತಿರುವ ಕೋವಿಡ್: ಸೂತಕದ ಕೋಟೆ 

ನಾಡನುಡಿ ವಿಶೇಷ 
ಬಾಗಲಕೋಟೆ ಜು.೧೭: 
ಆತಂಕತುAಬಿಸುವ ಆಂಬುಲೆನ್ಸ್ ವಾಹನಗಳ ಸದ್ದು, ಸದ್ದಿಲ್ಲದೇ ಹೊರಬರುವ ಸಾವಿನ ಸುದ್ದಿ. ಅಳುವವರೂ ಇಲ್ಲ... ಸಾವಿಗೆ ಸಂತಾಪ ಸೂಚಿಸುವ ಸಂಬAಧಿಗಳಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಾವಿನ ಸರಣಿ ಜಿಲ್ಲೆಯಲ್ಲಿ ಸೂತಕದ ಕೋಟೆಯನ್ನಾಗಿಸಿದೆ. 
 ಇನ್ನೂ ನಿಲ್ಲದ ಕೋವಿಡ್ ಅರ್ಭಟ ಜಿಲ್ಲಾಡಳಿತ ಸಾಕಷ್ಟ ಪರಿಶ್ರಮ ವಹಿಸುತ್ತಿದ್ದರೂ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯ ಹಾಗೂ ಸಿಬ್ಬಂದಿ ವರ್ಗ ಸಾಕಷ್ಟು ಪರಿಶ್ರಮಪಡುತ್ತಿದ್ದರೂ ಶಂಕಿತರ ಪಟ್ಟಿಯೂ ನಿಂತಿಲ್ಲ. ಸೋಂಕಿತರೂ ಪಟ್ಟಿಗೂ ಇನ್ನೂ ವಿರಾಮ ಸಿಕ್ಕಿಲ್ಲ. ಹಬ್ಬಗಳ ಸಂಭ್ರಮ ಸಾಲು,ಸಾಲು ಸಾಲಾಗಿ ಬರಲಿವೆ ಆದರೆ ಈ ಬಾರಿ ಅದೆಲ್ಲದಕ್ಕೂ ವಿರಾಮ. ಯಾರೂ ಅರಾಮವಾಗಿಲ್ಲ. 
 ಮಾ.೩೧ರಿಂದ ಮೊದಲ ಸೋಂಕಿತನ ಪ್ರಕರಣ ವರದಿಯಾಗಿ ಏಪ್ರಿಲ್ ಮೊದಲ ವಾರದಲ್ಲಿ ಅಸುನೀಗಿದಾಗ ಕೇವಲ ಒಂದೇ ಸಾವಿನ ಪ್ರಕರಣಕ್ಕೆ ಇಡೀ ಜಿಲ್ಲೆ ನಡುಗಿ ಹೋಗಿತ್ತು. ಅದು ಹರಡದಿರಲಿ ಎಂದು ಸಾರ್ವಜನಿಕರೇ ಮುಳ್ಳುಬೇಲಿ ಹಾಕಿಕೊಂಡು ಕಾವಲು ಕಾಯ್ದರು. ೭೨ ದಿನಗಳ ಲಾಕ್‌ಡೌನ್ ನಿಯಂತ್ರಣಕ್ಕೆ ತಂದಿದೆ. ಬಾಗಲಕೋಟೆ ನಗರದಿಂದ ಕೇವಲ ೧೩ ಜನಕ್ಕೆ ಮಾತ್ರ ಸೋಂಕು ತಗುಲಿತ್ತು. ಈಗ ಎಲ್ಲರೂ ಗುಣಮುಖರು ಎಂದು ಜಿಲ್ಲಾಡಳಿತವೂ ನಿಟ್ಟುಸಿರು ಬಿಟ್ಟಿತ್ತು. ಜನ ನೆಮ್ಮಿಯಾಗಿದ್ದರು. ಆದರೆ ಜೂನ್ ಮರಣ ಮೃದಂಗ ಬಾರಿಸಿತು. ಮದುವೆ, ಅಂತಿಮಯಾತ್ರೆಗಳು ಸೋಂಕು ಹರಡುವ ಕೇಂದ್ರಗಳಾದವು. ಜನ ಎಚ್ಚರತಪ್ಪಿದರು. ಆಡಳಿತ ಮನವಿ ಮಾಡಿಕೊಂಡರೂ ಮದುವೆ, ಶವಸಂಸ್ಕಾರಕ್ಕೆ ನಿಯಂತ್ರಣ ಹಾಕಿದರೂ ಯಾರೂ ಪಾಲಿಸಲಿಲ್ಲ. ಈಗ ಬಾಗಲಕೋಟೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೬೦೦ ಗಡಿ ದಾಟುತ್ತಿದೆ. ಮೃತಪಟ್ಟವರ ಸಂಖ್ಯೆ ೨೯ಕ್ಕೆ ಏರಿದೆ. ಮರಣದ ಪ್ರಮಾಣ ಶೇ. ೪.೯ರಷ್ಟಿದೆ. ಇದು ಸಮಾಧಾನದ ಸಂಗತಿಯಲ್ಲ ಆದರೆ ಗುಣಮುಖರಾಗುತ್ತಿರುವವರ ಸಂಖ್ಯೆ ಶೇ.೫೫ರಷ್ಟಿದೆ ಇದು ಸಮಾಧಾನಕರ ಸಂಗತಿಯೂ ಹೌದು. 
         
  ದಿಢೀರ್ ಹೆಚ್ಚಳಗೊಂಡ ಸಾವಿನ ಸಂಖ್ಯೆ
 ಏಪ್ರಿಲ್ ಮೊದಲ ವಾರದಲ್ಲಿ ವೃದ್ಧ ಸಾವನ್ನಪ್ಪಿದ ನಂತರ ಮುಂದಿನ ಎರಡು ತಿಂಗಳು ಯಾವುದೇ ಸಾವು ವರದಿ ಆಗಿರಲಿಲ್ಲ. ಆದರೆ ಜೂ.೧೫ರ ನಂತರ ಜಿಲ್ಲೆಯಲ್ಲಿ ದಿಢೀರ್ ಸಾವಿನ ಸಂಖ್ಯೆ ಹೆಚ್ಚಳಗೊಳ್ಳಲು ಆರಂಭಿಸಿತು. ಜಿಲ್ಲೆಯಲ್ಲಿ ಮೃತಪಟ್ಟಿರುವ ಬಹುತೇಕ ೨೮ ಮಂದಿ ಸಾವನ್ನಪ್ಪಿದ್ದು, ಜೂನ್ ಹಾಗೂ ಜುಲೈ ತಿಂಗಳಿನಲ್ಲಿ. ಅಲ್ಪಾವಧಿ ಸಮಯದಲ್ಲಿ ಹೆಚ್ಚು ಸಾವುಗಳು ಸಂಭವಿಸುತ್ತಿರುವುದು ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ. ಕೆಲವೊಮ್ಮೆ ಒಂದೇ ದಿನ ನಾಲ್ಕಾರು ಸಾವುಗಳು ಸಂಭವಿಸಿರುವ ದಿನವೂ ಇದ್ದು, ಶುಕ್ರವಾರ ಕೂಡ ೪ ಸಾವುಗಳು ಸಂಭವಿಸಿವೆ. ಸಾವಿನ ಪ್ರಕರಣದಲ್ಲಿ ಬಹುತೇಕರು ಕೊನೆ ಹಂತದಲ್ಲಿ ಆಸ್ಪತ್ರೆಗೆ ಬಂದಿರುವುದು ಕೂಡ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಕೆಲವರು ಆಸ್ಪತ್ರೆಗೆ ಬರಲು ಹೆದರಿ. ಮನೆಯಲ್ಲೇ ಮಲಗಿದ್ದಾರೆ. ಪರಿಸ್ಥಿತಿ ಗಂಭೀರವಾದ ನಂತರ ಆಸ್ಪತ್ರೆಗೆ ಬಂದಿದ್ದಾರೆ. ಕೆಲವರಂತೂ ಆಕ್ಸಿಜನ್ ಹಂತ ತಲುಪಿದಾಗ ಆಸ್ಪತ್ರೆಗೆ ಬಂದಿರುವ ಉದಾಹರಣೆಗಳಿವೆ. ಒಂದೇ ಮನೆಯಲ್ಲಿ ಇಬ್ಬರು ಸಹೋದರರು ಅಗಲಿರುವುದು. ಅತ್ಯಂತ ಆತಂಕದ ಕ್ಷಣ ಇವೆಲ್ಲವೂ ಜನರನ್ನು ಆತಂಕಕ್ಕೀಡು ಮಾಡಿದೆ.ಜನ ಸಹಕಾರ ನೀಡದೇ 


 ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ದ್ಟಟಣೆ ಅವರ ಆರೈಕೆ ಮಾಡುತ್ತಿರುವ ಸಿಬ್ಬಂದಿಯನ್ನು ಹೈರಾಣಾಗಿಸಿದೆ. ಸುಮಾರು ೨೩೦ಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಅವರಿಗಾಗಿ ಊಟ,ಉಪಹಾರದ ಮೆನು ನಿಗದಿಪಡಿಸಿ ಹೊಟೇಲ್‌ಗೆ ಗುತ್ತಿಗೆ ನೀಡಲಾಗಿದೆ. ಆದರೆ ಸೀಮಿತವಾಗಿರುವ ಆಹಾರವನ್ನು ಸೇವಿಸಬೇಕಾಗಿರುವ ಕೆಲವರು ಇನ್ನೊಬ್ಬರಿಗೆ ಹೋಗದಂತೆ ಕೇಳಿ ಪಡೆಯುತ್ತಿರುವುದು ಕೆಲವರಿಗೆ ಆಹಾರ ಸಿಗದಂತಾಗುತ್ತಿದೆ. ಇಷ್ಟಿದ್ದೂ ಅಲ್ಲಿದ್ದವರೇ ಕೆಲವರು ಆಸ್ಪತ್ರೆ ಬಗ್ಗೆ ವಿಡಿಯೋಗಳನ್ನು ಹೊರಗೆ ಕಳುಹಿಸುತ್ತಿರುವುದು ತಲೆನೋವಾಗಿದೆ. ನಾವು ಕಷ್ಟಪಟ್ಟು ಬದುಕನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದರೂ ಅಪಪ್ರಚಾರ ಮಾಡುವವರು ವಾಸ್ತವವನ್ನು ಅರಿಯಬೇಕೆಂದು ಹೇಳುತ್ತಿದ್ದಾರೆ. 
 ಶೌಚಾಲಯದ ಬಾಗಿಲಿಗೆ ಮೊಳೆಬಡಿಬೇಕಿದೆ. ಆದರೆ ಯಾವೊಬ್ಬರ ಕಾರ್ಪೆಂಟರ್ ಅಲ್ಲಿಗೆ ತೆರಳಲು ಸಿದ್ಧರಾಗುತ್ತಿಲ್ಲ. ಕೊನೆಗೆ ಸಿಬ್ಬಂದಿಯೇ ಅದನ್ನು ಸರಿಪಡಿಸುವ ಹೊತ್ತಿಗೆ ವಿಡಿಯೋ ಮಾಡಿ ಹೊರಗೆ ಬಿಟ್ಟಿದ್ದಾರೆ. ಇದೆಲ್ಲದಕ್ಕೂ ಕಡಿವಾಣ ಯಾರು ಹಾಕಬೇಕೆಂಬುದು ನೊಂದುನುಡಿಯುತ್ತಿದ್ದಾರೆ. ಅವರು ಇಲ್ಲೊಮ್ಮೆ ಬಂದು ಕೆಲಸ ಮಾಡಲಿ. ಆಗ ಪರಿಸ್ಥಿತಿ ಅರ್ಥವಾಗುತ್ತದೆ ಎಂಬುದು ಅಲ್ಲಿನ ಸಿಬ್ಬಂದಿಯ ಮನದಾಳದ ಮಾತು.  

            
           ಪ್ರತಿಕೂಲ ಹವಾಮಾನ 
 ಆರೋಗ್ಯ ಸೇವೆಗೆ ಹವಾಮಾನವೂ ಅಡ್ಡಿಯಾಗಿದೆ. ನಿರಂತರ ಮಳೆ, ಮೋಡ ಕವಿದ ವಾತಾವರಣ ಪ್ರತಿಕೂಲವಾಗಿದ್ದು, ಪ್ರತಿವರ್ಷ ಇಂಥ ಸಂದರ್ಭದಲ್ಲಿ ಏದುಸಿರು, ಕಫ, ನ್ಯೂಮೊನಿಯಾ, ಸಾರಿ,ಐಎಲ್‌ಐ ಸಮಸ್ಯೆ ಇಟ್ಟುಕೊಂಡು ಖಾಸಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದವರು ಹಲವರು.ಕೆಲವರಿಗೆ ಗುಣಮುಖರಾಗದೆ ಅಸುನೀಗಿದ ಸಂದರ್ಭಗಳಿವೆ. ಈಗ ಎಲ್ಲರೂ ಕೋವಿಡ್ ಆಸ್ಪತ್ರೆಗೆ ದಾಖಲಾಗುತ್ತಿರುವುದು. ಒಂದೇ ಸ್ಥಳದಲ್ಲಿ ಸಾವಿನ ಸಂಖ್ಯೆ ಏರುತ್ತಿರುವುದು. ಆತಂಕ ಮೂಡಿಸಿದರೂ ಒಟ್ಟು ಲೆಕ್ಕಾಚಾರದಲ್ಲಿ ವ್ಯತ್ಯಾಸವಿಲ್ಲ ಎನ್ನುತ್ತವೆ ವೈದ್ಯಕೀಯ ಮೂಲಗಳು. 

   
         ಸಹೋದರರ ಸೇರಿ ಒಂದೇ ದಿನ ನಾಲ್ಕು ಸಾವು
 ಶುಕ್ರವಾರ ಬಾಗಲಕೋಟೆಯ ಇಬ್ಬರು ಸಹೋದರರು ಸೇರಿ ಒಟ್ಟು ನಾಲ್ವರು ಕೋವಿಡ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ನಗರದ ರೈಲು ನಿಲ್ದಾಣ ಬಳಿಯ ೪೨ ವರ್ಷದ ಅಣ್ಣ ಹಾಗೂ ೩೯ ವರ್ಷ ತಮ್ಮ ಇಬ್ಬರೂ ಅಸುನೀಗಿದ್ದಾರೆ. ಇಬ್ಬರೂ ಕೈ ಮೀರಿದಮೇಲೆಯೇ ಆಸ್ಪತ್ರೆಗೆ ಬಂದಿದ್ದಾರೆ. ೩೯ ವರ್ಷದ ವ್ಯಕ್ತಿ ಅತ್ಯಂತ ಸ್ಥೂಲಕಾಯದವರಾಗಿದ್ದು, ಅವರನ್ನು ಉಳಿಸಿಕೊಳ್ಳಲು ವೈದ್ಯರು ಹರಸಾಹಸಪಟ್ಟಿದ್ದಾರೆ. ಅಗತ್ಯವಾಗಿದ್ದ ದುಬಾರಿ ಬೆಲೆಯ ಚುಚ್ಚುಮದ್ದನ್ನು ಬೆಂಗಳೂರಿನಿAದ ತರಿಸುವುದಕ್ಕೂ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅನುಮತಿ ನೀಡಿದ್ದರೂ ಆದರೂ ಫಲಕಾರಿ ಆಗಿಲ್ಲ. 


      
          ಗುಂಪು ಸೇರುವುದಕ್ಕೆ ಬಿದ್ದಿಲ್ಲ ಬ್ರೇಕ್ 
 ಇಷ್ಟೆಲ್ಲ ಅನಾಹುತಗಳು ಸಂಭವಿಸುತ್ತಿದ್ದರೂ ಗುಂಪುಗುAಪಾಗಿ ಜನ ಸೇರಬೇಡಿ ಎಂದು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಮನವಿ ಮಾಡಿದರೂ ಜನ ಗಂಭೀರವಾಗಿ ಪರಿಗಣಿಸಿಲ್ಲ. ಶ್ರಾವಣದ ಆರಂಭಕ್ಕೆ ದೇವಸ್ಥಾನಗಳಿಗೆ ಬರುವ ಜನಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಸಾಮೂಹಿಕ ಪ್ರಾರ್ಥನೆಗಳಲ್ಲೂ ಸಹ ಹೆಚ್ಚು ಜನ ಸೇರುತ್ತಿದ್ದಾರೆ.