ಬಾಗಲಕೋಟೆಗೆ ಇನ್ನೊಂದು ಕೈಗಾರಿಕಾ ಎಸ್ಟೇಟ್: ಸ್ಥಳ ಗುರುತಿಸಲು ಜಗದೀಶ ಶೆಟ್ಟರ್ ಸೂಚನೆ
ಹೊಸದಾಗಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಜಮೀನು ಗುರುತಿಸಿ ಪ್ರಸ್ತಾವನೆ ಕಳುಹಿಸಿದಲ್ಲಿ ಶೀಘ್ರದಲ್ಲಿಯೇ ಅನುಮತಿ ನೀಡಲಾಗುತ್ತದೆ ಎಂದರು ಸಚಿವ ಶೆಟ್ಟರ ತಿಳಿಸಿದರು.
ನಾಡನುಡಿ ನ್ಯೂಸ್
ಬಾಗಲಕೋಟೆ ಜು.೧೭:
ಉದ್ದಿಮೆ ಸ್ಥಾಪಿಸಲು ಮುಂದೆ ಬಂದವರಿಗೆ ಜಮೀನು, ನೀರು ಹಾಗೂ ಮೂಲಭೂತ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ /ಜಗದೀಶ ಶೆಟ್ಟರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಅಧಿಕಾರಿಗಳು ಹಾಗೂ ಕೈಗಾರಿಕೋದ್ಯಮಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಂಡವಾಳ ಹೂಡಿ ಉದ್ದಿಮೆ ಸ್ಥಾಪಿಸುವವರಿಗೆ ಎಲ್ಲ ರೀತಿಯ ಸೌಲಭ್ಯ ನೀಡಲಾಗುತ್ತಿದೆ. ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಕಾಯ್ದೆಗೆ ಸಾಕಷ್ಟು ತಿದ್ದುಪಡಿ ತರುವ ಕೆಲಸ ಮಾಡಲಾಗುತ್ತಿದ್ದು, ಈ ತಿದ್ದುಪಡಿ ಕಾಯ್ದೆಯಿಂದ ಕೈಗಾರಿಕೆ ಸ್ಥಾಪಿಸುವ ಉದ್ದಿಮೆದಾರರಿಗೆ ಬಹಳಷ್ಟು ಅವಕಾಶ ದೊರೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಹೊಸದಾಗಿ ಕೈಗಾರಿಕೆ ಸ್ಥಾಪನೆಗೆ ಮುಂದೆ ಬಂದಲ್ಲಿ ಸುಲಭವಾಗಿ ಎಲ್ಲ ರೀತಿಯ ಅನುಮತಿ ದೊರೆಯಲಿವೆ. ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ದಿ ಪಡಿಸಬೇಕು. ಜಾಗ ಇಲ್ಲದಿದ್ದರೆ ಜಮೀನು ಗುರುತಿಸಿ ಅಭಿವೃದ್ದಿ ಪಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ಈ ಹಿಂದೆ ಕೃಷಿ ಜಮೀನನ್ನು ಕೃಷಿಯೇತರ ಮಾಡಲು ೬ ತಿಂಗಳ ಸಮಯ ತೆಗೆದುಕೊಳ್ಳುತ್ತಿತ್ತು. ಈ ತಿದ್ದುಪಡಿ ಕಾಯ್ದೆಯಿಂದ ಜಮೀನು ಪಡೆಯಲು ಸರಳೀಕರಣಗೊಳಿಸಲಾಗಿದೆ. ಕೈಗಾರಿಕೆಗಳ ಅಭಿವೃಧ್ದಿಗೆ ಎಲ್ಲವೂ ಸರಳೀಕರಣವಾಗಬೇಕೆಂಬುದು ಪ್ರಧಾನಮಂತ್ರಿಗಳ ಉದ್ದೇಶವಾಗಿದೆ ಎಂದರು.
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಜಿಲ್ಲಾ ಕೇಂದ್ರಸ್ಥಾನ ನವನಗರದಲ್ಲಿ ಹೊಸ ಕೈಗಾರಿಕಾ ಪ್ರದೇಶವನ್ನು ಮಾಡಲು ಜಮೀನು ಇರುವುದಿಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಗುರುತಿಸಬೇಕಾಗಿದೆ. ೨೦೦ ರಿಂದ ೩೦೦ ಎಕರೆ ಜಮೀನು ಗುರುತಿಸಿ ಆ ಜಮೀನನ್ನು ಅಭಿವೃದ್ದಿಪಡಿಸಿದರೆ ಉದ್ದಿಮೆದಾರರು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುತ್ತಾರೆ ಎಂದು ತಿಳಿಸಿದಾಗ ಹೊಸದಾಗಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಜಮೀನು ಗುರುತಿಸಿ ಪ್ರಸ್ತಾವನೆ ಕಳುಹಿಸಿದಲ್ಲಿ ಶೀಘ್ರದಲ್ಲಿಯೇ ಅನುಮತಿ ನೀಡಲಾಗುತ್ತದೆ ಎಂದರು ಸಚಿವ ಶೆಟ್ಟರ ತಿಳಿಸಿದರು.
ನವನಗರದ ಆಗ್ರೋಟೆಕ್ ಪಾರ್ಕಗಾಗಿ ೧೦೦ ಎಕರೆ ಜಮೀನನ್ನು ನೀಡಲಾಗಿತ್ತು. ಆ ಜಮೀನಿನಲ್ಲಿ ಕೇವಲ ಕೋಲ್ಡ ಸ್ಟೋರೇಜ ಮಾತ್ರ ಮಾಡಿದ್ದಾರೆ ಉಳಿದ ಪ್ರದೇಶವನ್ನು ಅಭಿವೃಧ್ದಿ ಪಡಿಸಿರುವುದಿಲ್ಲ. ಬೇರೆಯವರಿಗೆ ಮನಸಾ ಇಚ್ಚೆಯಿಂದ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಕೈಗಾರಿಕಾ ಪ್ರದೇಶ ಅಭಿವೃದ್ದಿಗಾಗಿ ೨೦೦೫ ರಲ್ಲಿ ಅನುಮೋದನೆ ನೀಡಿ ಆರು ವರ್ಷಗಳ ಕಾಲಾವದಿಯಲ್ಲಿ ಅಭಿವೃದ್ದಿಪಡಿಸಲು ತಿಳಿಸಿಲಾಗಿತ್ತು. ಆದರೆ ಯಾವುದೇ ರೀತಿಯ ಅಭಿವೃದ್ದಿಯಾಗಿರುವದಿಲ್ಲ. ಕಾಲಾವಕಾಶ ಕೇಳಿದ ಹಿನ್ನಲೆಯಲ್ಲಿ ಎರಡು ಬಾರಿ ಅವಕಾಶ ಕಲ್ಪಿಸಲಾದರೂ ಸಹ ಅಭಿವೃದ್ದಿಗೊಳ್ಳದೇ ಇರುವ ಬಗ್ಗೆ ಸಮಗ್ರ ವಿವರಣೆ ನೀಡಿದಲ್ಲಿ ಕ್ರಮಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಇಲಕಲ್ಲ ತಾಲೂಕಿ ಬಲಕುಂದಿಯಲ್ಲಿ ೯೪ ಎಕರೆ ಪ್ರದೇಶವನ್ನು ಕೈಗಾರಿಕೆ ಸ್ಥಾಪನೆಗೆ ಅಭಿವೃದ್ದಿ ಪಡಿಸಲಾಗುತ್ತಿದೆ. ಕೆಲವೊಂದು ಮೂಲಭೂತ ಸೌಲಭ್ಯಗಳ ಬಾಕಿ ಇದ್ದು, ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಂದ ಗ್ರಾನೈಟ್ ಮತ್ತು ಟೆಕ್ಸ್ಟೈಲ್ ಉದ್ದಿಮೆಗಳ ಸ್ಥಾಪನೆಗೆ ಅರ್ಜಿಗಳು ಬಂದಿರುವುದಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಅಭಿವೃದ್ದಿ ಅಧಿಕಾರಿ ಲಕ್ಷಿö್ಮÃಷ ಸಭೆಗೆ ತಿಳಿಸಿದರು.
ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲಕ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯಶವಂತ ಗುರುಕಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗAಗಪ್ಪ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಅರುಣ ಕಟ್ಟಿ, ಜಿಲ್ಲಾ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಅಬಿವೃದ್ದಿ ಅಧಿಕಾರಿ ಶಿವಾನಂದ ಹೂಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.