ಅಗ್ಗದ ಬೆಲೆಯಲ್ಲಿ ಐವಿಎಫ್ ಚಿಕಿತ್ಸೆ ಘೋಷಿಸಿದ ಕನೇರಿ ಮಠದ ಆಸ್ಪತ್ರೆ
ಬಾಗಲಕೋಟೆ:
ಅತ್ಯಂತ ಕಡಿಮೆ ಬೆಲೆಗೆ ಬಂಜೆತನ ನಿವಾರಣೆಯ ಚಿಕಿತ್ಸೆಯನ್ನು ಒದಗಿಸಲು ಮಹಾರಾಷ್ಟçದ ಕನ್ನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಜನನಿ ಐವಿಎಫ್ ಮತ್ತು ಟೆಸ್ಟ್ ಟ್ಯೂಬ್ ಬೇಬಿ ಕೇಂದ್ರವನ್ನು ಆರಂಭಿಸಿದೆ. ಈ ಘಟಕದಿಂದ ಜಿಲ್ಲೆಯಲ್ಲಿ ಜುಲೈ ೭ ಮತ್ತು ೮ ರಂದು ಮುಧೋಳ ಹಾಗೂ ಬಾಗಲಕೋಟೆಯಲ್ಲಿ ತಪಾಸಣಾ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಹಿರಿಯ ತಜ್ಞೆ ಡಾ.ವರ್ಷಾ ಪಾಟೀಲ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನೇರಿ ಮಠವು ಸಾಮಾಜಿಕ ಬದಲಾವಣೆಗಳನ್ನು ತರುವ ಕೆಲಸ ಮಾಡುತ್ತಿದೆ. ಶ್ರೀಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಅತೀ ಕಡಿಮೆ ಬೆಲೆಗೆ ಬಂಜೆತನ ನಿವಾರಣೆ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಬೇಕೆಂದರು. ಹೊರಗೆ ಆಸ್ಪತ್ರೆಗಳಲ್ಲಿ ೨.೫೦ ಲಕ್ಷ ರೂ.ಗಳಿಂದ ಬಂಜೆತನ ನಿವಾರಣೆಯ ಪ್ಯಾಕೇಜ್‌ಗಳು ಶುರುವಾಗುತ್ತವೆ. ನಮ್ಮಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ೭೫ ಸಾವಿರ ರೂ.ಗಳಲ್ಲಿ ಸಂಪೂರ್ಣ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜನನಿ ಕೇಂದ್ರದಲ್ಲಿ ದೊರೆಯುವ ಸೇವೆ, ಸೌಲಭ್ಯಗಳ ಕುರಿತಾಗಿ ಸಂತಾನ ಭಾಗ್ಯವಿಲ್ಲದೆ ಪರಿತಪಿಸುತ್ತಿರುವ ದಂಪತಿಗಳಿಗೆ ಮಾಹಿತಿ ನೀಡಲು ಹಾಗೂ ಪ್ರತ್ಯೇಕವಾಗಿ ಸಂದರ್ಶನಕ್ಕಾಗಿ ಜುಲೈ ೭ ರಂದು ಜಿಲ್ಲೆಯ ಮುಧೋಳದ ಉದಪುಡಿ ಆಸ್ಪತ್ರೆ ಹಾಗೂ ಜು.೮ ರಂದು ಬಾಗಲಕೋಟೆಯ ಶಂಕುತಲಾ ಆಸ್ಪತ್ರೆಯಲ್ಲಿ ಬೆಳಿಗ್ಗೆ ೯ ಗಂಟೆಯಿAದ ಸಂಜೆ ೪ರ ವರೆಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹೃದ್ಯೋಗ ತಜ್ಞ ಡಾ. ಗಣೇಶ ಇಂಗಳೆ ಮಾತನಾಡಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಭಿನ್ನ ಪರೀಕ್ಷೆಗಳೊಂದಿಗೆ ಹೃದ್ರೋಗಿಗಳಿಗೆ ಒಂದೇ ಸೂರಿನಡಿ ಸೇವೆಗಳನ್ನು ಒದಗಿಸಲು ಉದ್ದೇಶದಿಂದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಕರೋನರಿ ಆಂಜಿಯೋಗ್ರಫಿ, ಕರೋನರಿ ಆಂಜಿಯೋಪ್ಲಾಸ್ಟಿ, ಪೆರಿಫೆರಲ್ ಇಂಟರ್ವೆನ್ಪನ್-ರೀನಲ್ ಆಂಜಿಯೋಗ್ರಫಿ, ರೀನಲ್ ಆಂಜೀಯೋಪ್ಲಾಸ್ಟಿ, ಪರ್ಮನೆಂಟ್ ಪೇಸ್ ಮೇಕರ್ ಅಳವಡಿಕೆ ಚಿಕಿತ್ಸೆ ನೀಡ ಲಾಗುತ್ತದೆ ಎಂದು ತಿಳಿಸಿದರು.
ರಚನಾತ್ಮಕ ಹೃದಯದ ಮಧ್ಯಸ್ಥಿಕೆಗೆ ಅಗತ್ಯವಾದ ಚಿಕಿತ್ಸೆಯನ್ನು ಸಹ ಒದಗಿಸಲಾಗುತ್ತದೆ. ಇದಲ್ಲದೆ, ಎಎಸ್‌ಡಿ, ಪಿಡಿಎ, ವಿಎಸ್‌ಡಿ, ಚಿಕಿತ್ಸೆ ಮತ್ತು ಹೃದಯ ಶಸ್ತç ಚಿಕಿತ್ಸೆಯನ್ನು ಸಹ ಮಾಡಲಾಗುತ್ತದೆ. ಸಿದ್ಧಗಿರಿ ಆಸ್ಪತ್ರೆಯ ಲಾಭವಿಲ್ಲ ನಷ್ಟವಿಲ್ಲ ತತ್ವದ ಪ್ರಕಾರ ಈ ಎಲ್ಲ ಚಿಕಿತ್ಸೆಯನ್ನು ಉಚಿತವಾಗಿ, ಸಾಧಾರಣ ಮತ್ತು ಪಾರದರ್ಶಕವಾಗಿ ನೀಡಲಾಗುತ್ತದೆ. ಹೃದಯ ಕಾಯಿಲೆಗೆ ಚಿಕಿತ್ಸೆ ನೀಡಲು ಸಿದ್ಧಗಿರಿ ಹೃದ್ರೋಗ ಇಲಾಖೆ ಭರವಸೆಯ ಬೆಳಕಾಗಿ ಇರುತ್ತದೆ. ಅಗತ್ಯವಿರುವ ರೋಗಿಗಳು ಈ ಸೇವೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಂಕರಾರೂಢ ಸ್ವಾಮೀಜಿ, ಶಿವಶರಣಾನಂದ ಸ್ವಾಮೀಜಿ, ಚನ್ನಯ್ಯ ಸ್ವಾಮೀಜಿ, ಅನುರಾಧ ಶಿಂಧೆ ಇತರರಿದ್ದರು.