ವಿಶ್ವದ ಅದ್ಭುತಗಳನ್ನು ನಾಚಿಸುವಂತೆ ತಲೆಎತ್ತಲಿದೆ ಭವ್ಯ ಮಂದಿರ

ಮರ್ಯಾದೆ ಪುರುಷೋತ್ತಮ, ಹಿಂದೂಗಳ ಆರಾಧ್ಯ ದೈವ, ಭಾರತದ ನೈತಿಕದ ಪ್ರತೀಕ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಕಾಲ ಸನ್ನಿಹಿತವಾಗಿದೆ. ಆ.೫ ರಂದು ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಮೂರು ದಶಕಗಳ ಕಾಲ ಪ್ರಮುಖ ರಾಜಕೀಯ ವಿವಾದವಾಗಿಯೂ ಕಾಣಿಸಿಕೊಂಡಿದ್ದ ರಾಮಮಂದಿರ ವಿಚಾರಕ್ಕೆ ಸಂಬ0ಧಿಸಿದ0ತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಮಾನ ನೀಡಿ ಬಾಬರಿ ಮಸೀದಿಯ ವಿವಾದಿತ ಸ್ಥಳವೂ ರಾಮಲಲ್ಲಾಗೆ ಸೇರಿದ್ದು ಎಂಬ ತೀರ್ಪು ನೀಡಿದೆ. ಮಸೀದಿಗಾಗಿ ಮತ್ತೊಂದು ಕಡೆ ಜಾಗವನ್ನೂ ನೀಡುವಂತೆ ಅದು ಸೂಚಿಸಿದೆ. ಹೊಸದಾಗಿ ನಿರ್ಮಾಣಗೊಳ್ಳಲಿರುವ ಮಂದಿರ ಏನೆಲ್ಲ ವಿಶೇಷತೆಗಳನ್ನು ಹೊಂದಿದೆ ಎಂಬುದರ ಪೂರ್ಣಪಾಠವನ್ನು ನಾಡನುಡಿ ತಂಡ ನಿಮ್ಮ ಮುಂದೆ ಕಟ್ಟಿಕಟ್ಟಿದೆ. 

ವಿಶ್ವದ ಅದ್ಭುತಗಳನ್ನು ನಾಚಿಸುವಂತೆ ತಲೆಎತ್ತಲಿದೆ ಭವ್ಯ ಮಂದಿರ

 ಜಗದ ಅದ್ಭುತಗಳನ್ನು ನಾಚಿಸುವಂತೆ ಸರಯೂ ನದಿಯ ತಟದಲ್ಲಿ ಭವ್ಯ ಮಂದಿರ ತಲೆಎತ್ತಲಿದೆ. ಮೂರು ಮಹಡಿ, ಮ್ಯೂಸಿಯಂ, ರಾಮಕಥಾಪುಂಜ, ನಕ್ಷತ್ರ ವಾಟಿಕಾ ಸೇರಿ ಹಲವು ಸೌಂದರ್ಯಗಳೊ0ದಿಗೆ ಮಂದಿರ ಮೈದರಳಿಯಲಿದೆ. 
 ಉದ್ದೇಶಿತ ರಆಮಮಂದಿರ ೧೦ ಎಕರೆ ಪ್ರದೇಶದ ಕಲಾಸೃಷ್ಠಿಯಾಗಿದ್ದು, ಉಳಿದ ೫೭ ಎಕರೆಯಲ್ಲಿ ರಾಮದಗುಲದ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ದೇಗುಲ ಸಂಕೀರ್ಣದಲ್ಲಿ ರಚನೆಗೊಳ್ಳುವ ನಕ್ಷತ್ರ ವಾಟಿಕಾ ಭಕ್ತಿ ಲೋಕವನ್ನು ಬೆರಗುಗೊಳಿಸಲಿದೆ. 

ರಾಮಧ್ಯಾನಕ್ಕೆ ಉದ್ಯಾನವನ: ರಾಮದೇಗುಲ ಆವರಣದ ಸಮೀಪದಲ್ಲೇ ಶ್ರೀರಾಮ ಬದುಕಿನ ಆದರ್ಶಗಳನ್ನು ತಿಳಿಪಡಿಸುವ ರಾಮ್‌ಕಥಾ ಕುಂಜ್ ಪಾರ್ಕ್ ರೂಪತಳೆಯಲಿದೆ. ಇದರ ಪಕ್ಕದದಲ್ಲೇ ಉತ್ಖನನ ವೇಳೆ ದೊರೆತ ಶಿಲಾಕೃತಿಗಳನ್ನು ಒಳಗೊಂಡ ಮ್ಯೂಸಿಯಂ ಸೃಷ್ಠಿಯಾಗಲಿದೆ. ಗೋಶಾಲೆ, ಧರ್ಮಶಾಲೆಯಿಂದ ರಾಮಜನ್ಮಭೂಮಿ ಕಳೆಗಟ್ಟಲಿದೆ. ಆ.೫ರ ಭೂಮಿಪೂಜೆ ನಂತರ ದೇಗುಲ ಸಂಕೀರ್ಣದಲ್ಲಿ ಶೇಷಾವತಾರ ಸನ್ನಿಧಾನವನ್ನು ತಾತ್ಕಾಲಿಕವಾಗಿ ನಿರ್ಮಿಸಲು ಟ್ರಸ್ಟ್ಯೋಜಿಸಿದೆ. 

ನಕ್ಷತ್ರವಾಟಿಕಾ ಪ್ರಮುಖ ಆಕರ್ಷಣೆ: ಹಿಂದೂಗಳು ನಂಬಿಕೆಯ ೨೭ ನಕ್ಷತ್ರಗಳನ್ನು ಪ್ರತಿನಿಧೀಸುವ ಮರಗಳ ಸಮೂಹ, ಜನರು ತಮ್ಮ ಜನ್ಮನಕ್ಷತ್ರಗಳಿಗೆ ಅನುಗುಣವಾಗಿ ಆಯಾ ಮರದ ಕೆಳಗೆ ಕುಳಿತು ಶ್ರೀರಾಮನಿಗೆ ಪ್ರಾರ್ಥನೆ ಸಲ್ಲಿಸಬಹುದು. ಅಲ್ಲದೇ, ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾದ ಮರಗಳನ್ನೂ ಇದರ ಸಮೀಪವೇ ನೆಡಲು ರಆಮಜನ್ಮಭೂಮಿ ಟ್ರಸ್ಟ್ ಮುಂದಾಗಿದೆ. 

ಅಡಿಪಾಯದಲ್ಲಿ ದೇಗುಲ ವಿವರ: ರಾಮಮಂದಿರದ ಭೂಮಿ ಪೂಜೆಗೆ ತಾಮ್ರಫಲಕವನ್ನು ಸಿದ್ಧಪಡೊಇಸಲಾಗುತ್ತಿದೆ. ದೇಗುಲದ ಹೆಸರು, ಸ್ಥಳ, ನಕ್ಷತ್ರರಾಶಿ, ಕಾಲವನ್ನು ಸಂಸ್ಕೃತ ಭಾಷೆಯಲ್ಲಿ ತಾಮ್ರಫಕದ ಮೇಲೆ ಬರೆದು ಅಡಿಪಾಯದಲ್ಲಿ ಸ್ಥಾಪಿಸಲಾಗುತ್ತದೆ. 

ಫಾಲ್ಗು ನದಿ ಮರಳು; ಭೂಮಿಪೂಜೆಗೆ ಬಿಹಾರದ ಫಾಲ್ಗು ನದಿಯ ಮರಳನ್ನು ಬಳಲಸು ಟ್ರಸ್ಟ್ ನಿರ್ಧರಿಸಿದೆ. ಫಾಲ್ಗು ಹಿಂದೂಗಳ ಪಾಲಿಗೆ ಪವಿತ್ರ ನದಿ, ಭಗವಾನ್ ಶ್ರೀರಾಮನು ಸೀತೆ, ಲಕ್ಷö್ಮಣರೊಂದಿಗೆ ಇದೇ ನದಿಯ ದಡದಲ್ಲಿ ದಶರಥನಿಗೆ ಪಿಂಡಪ್ರದಾ ನೆರವೇರಿಸಿದ್ದ ಎಂದು ರಾಮಾಯಣ ಹೇಳುತ್ತದೆ. ಈಗಳೂ ಈ ತಾಣ ಪಿಂಡಪ್ರದಾನಕ್ಕೆ ಹೆಸರುವಾಸಿ. ಅಲ್ಲದೇ ಏಳು ಸಮುದ್ರಗಳು ಹಾಗೂ ದೇಶದ ಪ್ರಮುಖ ಧಾರ್ಮಿಕ ನದಿಗಳ ನೀರನ್ನು ಭೂಮಿಪೂಜೆಗೆ ಬಳಸಲು ನಿರ್ಧರಿಸಲಾಗಿದೆ.