ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ :ಬಿಜೆಪಿಯಲ್ಲಿ ಮುಂದವರಿದ ಚರ್ಚೆ, ಕಾಂಗ್ರೆಸ್ ಗುಂಪಿನಿಂದ ಸರನಾಯಕ ಅಂತಿಮ

ಬಾಗಲಕೋಟೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಪ್ರಕ್ರಿಯೆಗಳು ಆರಂಭಗೊಂಡಿವೆ.

ಡಿಸಿಸಿ ಬ್ಯಾಂಕ್  ಅಧ್ಯಕ್ಷರ ಆಯ್ಕೆ :ಬಿಜೆಪಿಯಲ್ಲಿ ಮುಂದವರಿದ ಚರ್ಚೆ, ಕಾಂಗ್ರೆಸ್ ಗುಂಪಿನಿಂದ ಸರನಾಯಕ ಅಂತಿಮ

ಬಾಗಲಕೋಟೆ: 
ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು,ನಿರ್ದೇಶಕ ಅಜಯಕುಮಾರ ಸರನಾಯಕ ಅವರು ಕಾಂಗ್ರೆಸ್ ಗುಂಪಿನಿಂದ ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತವಾಗಿದೆ‌.

ನಾಮಪತ್ರ  ಸಲ್ಲಿಕೆಗೆ ಮಧ್ಯಾಹ್ನ ೧೨ ಗಂಟೆಯಿಂದ ಅವಕಾಶವಿದ್ದು, ಈವರೆಗೆ ಬಿಜೆಪಿ ಗುಂಪಿನಲ್ಲಿ ಯಾರನ್ನ ಕಣಕ್ಕಿಳಿಸಬೇಕೆಂಬ ಬಗ್ಗೆ ಇನ್ನೂ ಚರ್ಚೆ ನಡೆದಿದ್ದು, ಯಾರೂ ಅಭ್ಯರ್ಥಿ ಆಗಲಿದ್ದಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.

ಈ ಕುರಿತು ಸೋಮವಾರ ರಾತ್ರಿ ಇಡಿ ಚರ್ಚೆ ನಡೆದಿದ್ದು, ಅಭ್ಯರ್ಥಿ ಯಾರಾಗಲಿದ್ದಾರೆ, ಏನೆಂಬುದನ್ನು ಕಾಯ್ದು ನೋಡಬೇಕಿದೆ.

ಇನ್ನು ಚುನಾವಣೆ ನಡೆದರೂ ಫಲಿತಾಂಶ ಪ್ರಕಟಗೊಳಿಸದಂತೆ ಹೈಕೋರ್ಟ್ ಆದೇಶವಿದ್ದು, ಮಧ್ಯಾಹ್ನ ಮೂರು ಗಂಟೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಸಹಜವಾಗಿಯೇ ಚುನಾವಣೆ ಬಗ್ಗೆ ತೀವ್ರ ಕುತೂಹಲ ಮೂಡಿದೆ.