ಸ್ವಾಮೀಜಿಗಳೇ ಮುಖ್ಯಮಂತ್ರಿನ ಆಯ್ಕೆ ಮಾಡೋದು ಗೊತ್ತಿಲ್ಲ...!

  ಸ್ವಾಮೀಜಿಗಳೇ ಮುಖ್ಯಮಂತ್ರಿನ ಆಯ್ಕೆ ಮಾಡೋದು ಗೊತ್ತಿಲ್ಲ...!

            
ಬಾಗಲಕೋಟೆ: ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲು ಪ್ರಜಾಪ್ರಭುತ್ವದಲ್ಲಿ ಅದರದೆಯಾದ ವ್ಯವಸ್ಥೆಯಿದ್ದು, ಸ್ವಾಮೀಜಿಗಳು ಸಿಎಂ ಆಯ್ಕೆ ಮಾಡುವುದು ತಮಗೆ ತಿಳಿದಿಲ್ಲ ಎಂದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವ್ಯಂಗ್ಯವಾಡಿದ್ದಾರೆ. 


 ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ ಅವರನ್ನು ಸಿಎಂ ಮಾಡಬೇಕೆಂದು ಸ್ವಾಮೀಜಿ ಹೇಳಿರುವ ವಿಚಾರಕ್ಕೆ ಸಂಬAಧಿಸಿದAತೆ ಜಿಲ್ಲೆಯ ಜಮಖಂಡಿಯ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಸಚಿವ ತಿಮ್ಮಾಪುರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಪ್ರಜಾಪ್ರಭುತ್ವದಲ್ಲಿ ಸಿಎಂ ಆಯ್ಕೆಗೆ ಒಂದು ವ್ಯವಸ್ಥೆಯಿದೆ ಆದರೆ ಸ್ವಾಮೀಜಿಗಳು ಆಯ್ಕೆ ಮಾಡುತ್ತಾರೆ ಎಂಬುದು ಈಗಷ್ಟೇ ನೀವು ಹೇಳಿದ ಮೇಲೆ ತಿಳಿದಿದೆ ಎಂದು ವ್ಯಂಗ್ಯವಾಡಿದರು. ಡಿಸಿಎಂ ಹುದ್ದೆ ಸೃಷ್ಟಿ ಸೃಷ್ಟಿ ಮಾಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಆ ಬಗ್ಗೆ ಪ್ರತಿಕ್ರಿಯಿಸಲಾರೆ ಎಂದರು.