ಹೊಂಚು ಹಾಕಿ ಸ್ವಂತ ಅಜ್ಜಿಯನ್ನೆ ಕೊಲೆಗೈದ ಮೊಮ್ಮಗ..!

ಹೊಂಚು ಹಾಕಿ ಸ್ವಂತ ಅಜ್ಜಿಯನ್ನೆ ಕೊಲೆಗೈದ ಮೊಮ್ಮಗ..!

ಬಾಗಲಕೋಟೆ
ಲೋಕಾಪುರ ಪೊಲೀಸ ಠಾಣಾ ವ್ಯಾಪ್ತಿಯ ಜಕ್ಕೂರ ಕ್ರಾಸ್ ಬಳಿ ಇತ್ತೀಚೆಗೆ ವೃದ್ಧೆ ಹೊರಟಿದ್ದ ಗಾಡಿಗೆ  ಕಾರು ಗುದ್ದಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಪೊಲೀಸರ ತನಿಖೆಯಲ್ಲಿ ಅದು ಅಪಘಾತವಲ್ಲ ಪೂರ್ವನಿಯೋಜಿತ ಕೊಲೆ ಎಂಬುದು ಬಯಲಾಗಿದೆ. ವೃದ್ಧೆಯನ್ನು ಆಕೆಯ ಮೊಮ್ಮನಗನೇ ಕೊಲೆ ಮಾಡಿದ್ದನ್ನು ಪೊಲೀಸರು ಬಯಲು ಮಾಡಿದ್ದಾರೆ. 

ಆ.೨೦ರಂದು ಲೋಕಾಪುರ-ಖಜ್ಜಿಡೋಣಿ ಮಾರ್ಗದ ಜಕ್ಕೂರ ಕ್ರಾಸ್ ಬಳಿ ಪುತ್ರ  ಶ್ರೀಧರ ಜತೆಗೆ ತಾಯವ್ವ ದುಂಡಪ್ಪ ಅರಕೇರಿ(೬೮) ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಕಾರು ತಂದು ಢಿಕ್ಕಿ ಹೊಡೆಸಲಾಗಿತ್ತು. ಗಾಡಿ ಮೇಲಿಂದ ನಿದ್ದ ತಾಯವ್ವ ಮೃತಪಟ್ಟಿದ್ದಳು.

ಬೈಕ್ ಓಡಿಸುತ್ತಿದ್ದ ಶ್ರೀಧರ ಹುಟ್ಟಿನಿಂದ ಮೂಗನಾಗಿದ್ದು, ಕೈ ಸನ್ನೆ ಮೂಲಕವೇ ಪೊಲೀಸರಿಗೆ ಘಟನೆ ವಿವರ ತಿಳಿಸಿದ್ದ. ಪ್ರಕರಣದ ಬಗ್ಗೆ ಅನುಮಾನಗೊಂಡು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದರು.


ಈ ಸಂದರ್ಭದಲ್ಲಿ ಆಕೆಯ ಮೊಮ್ಮಗ ದುಂಡಪ್ಪ ಶ್ರೀಕಾಂತ ಅರಕೇರಿ ಆರೋಪಿ ಎಂಬುದು ಪತ್ತೆಯಾಗಿದೆ. ಈತ ತಾಯವ್ವಳ ಮೊದಲ ಮಗನ ಪುತ್ರ.

ತಾಯವ್ವಳಿಗೆ ಸೇರಿದ ಹೊಲದಲ್ಲಿನ ಕೊಳವೆಬಾವಿ  ಕೇಬಲನ್ನು ದುಂಡಪ್ಪ ಕಳ್ಳತನ ಮಾಡಿದ್ದ ಈ ಬಗ್ಗೆ ತಾಯವ್ವ ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರು ನೀಡಿದಕ್ಕೆ ಸಿಟ್ಟಾಗಿದ್ದ ದುಂಡಪ್ಪ ಕೊಲೆಗೆ ಸಂಚು ರೂಪಿಸಿದ್ದ. ಚಿಕ್ಕಪ್ಪ ಶ್ರೀಧರ ಹಾಗೂ ಅಜ್ಜಿ ಬೈಕಗ್ ಮೇಲೆ ಹೊರಟಾಗ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆಸಿದ್ದ. ಪೊಲೀಸರು ಈಗ ಆರೋಪಿ ದುಂಡಪ್ಪ ಹಾಗೂ ಅದಕ್ಕೆ ಸಾಥ್ ನೀಡಿದ ನಿಂಗಪ್ಪ ನೀಲನ್ನವರ ಎಂಬಾತನನ್ನು ವಶಕ್ಕೆ ಪಡಿಸಿದ್ದಾರೆ.