ಮೈಮರೆತ ಜನ, ನಿದ್ರೆಗೆ ಜಾರಿದ ಆಡಳಿತ..?
* ನ್ಯಾಯಬೆಲೆ ಅಂಗಡಿ, ಸರ್ಕಾರಿ ಕಚೇರಿಗಳಲ್ಲೇ ಸಾಮಾಜಿಕ ಅಂತರ ಉಲ್ಲಂಘನೆ * ಕೋವಿಡ್ ಆಸ್ಪತ್ರೆ ಮುಂಭಾಗವೇ ಜನಜಾತ್ರೆ
ನಾಡನುಡಿ ವಿಶೇಷ
ಬಾಗಲಕೋಟೆ ಜು.೧೮:
ಜಿಲ್ಲಾದ್ಯಂತ ಸಾಮಾಜಿಕ ಅಂತರ ಸೇರಿ ಇತರ ಉಲ್ಲಂಘನೆ ಪ್ರಕರಣಗಳನ್ನು ಗುರುತಿಸಿ ತಪ್ಪಿಸ್ಥರನ್ನು ಕಾನೂನು ಕ್ರಮದ ಮೂಲಕ ಶಿಕ್ಷಿಸಲು ಜಿಲ್ಲಾಡಳಿತ ರಚಿಸಿರುವ ೩೬ ಫ್ಲೆöÊಯಿಂಗ್ ಸ್ಕಾ÷್ವಡ್ಸ್ ಎಲ್ಲಿವೆ ಎಂಬ ಪ್ರಶ್ನೆ ಉದ್ಭವಿಸಿದೆ. ಸಭೆ, ಸಮಾರಂಭಗಳು ಸೇರಿ ಕೋವಿಡ್ ಸಂದರ್ಭದಲ್ಲಿ ಎದುರಾಗುವ ನಿಯಮಗಳ ಉಲ್ಲಂಘನೆಯನ್ನು ಗುರುತಿಸಿ ಅದನ್ನು ತಡೆಯುವ ಉದ್ದೇಶದಿಂದಾಗಿ ಈ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಅಷ್ಟಾಗಿ ಉಲ್ಲಂಘನೆ ಪ್ರಕರಣಗಳು ವರದಿಯಾಗಿಲ್ಲವಾದರೂ ನ್ಯಾಯಬೆಲೆ ಅಂಗಡಿಗಳು, ಸರ್ಕಾರಿ ಕಚೇರಿಗಳಲ್ಲೇ ಸಾಮಾಜಿಕ ಅಂತರ ಮರೆತು ಜನ ವರ್ತಿಸುತ್ತಿರುವುದು ಕಂಡು ಬಂದಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯ ಕೂಗಳತೆಯ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲೇ ಜನ ನೂರಾರು ಸಂಖ್ಯೆಯಲ್ಲಿ ಸೇರಿದ್ದು, ಆರೋಗ್ಯ ಸೇತು ಆಪ್‌ನಲ್ಲಿ ಅತೀ ಅಪಾಯಕಾರಿ ಸ್ಥಳ ಎಂದು ತೋರಿಸಲ್ಪಡುವ ಪ್ರದೇಶದಲ್ಲೇ ಹೀಗಾದರೆ ಜಿಲ್ಲಾದ್ಯಂತ ಉಲ್ಲಂಘನೆಯಾಗುತ್ತಿರುವ ಪ್ರಕರಣಗಳೆಷ್ಟು ಎಂಬ ಪ್ರಶ್ನೆ ಉದ್ಭವಿಸಿದೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ನಡುವೆ ಸಾವಿನ ಸಂಖ್ಯೆಯೂ ಹೆಚ್ಚಾಗಿರುವುದು ಜನರನ್ನು ಆತಂಕಗೊಳಿಸಿದೆ. ಹಾಲಿಗೆ ವಿಷ ಬೆರೆಸಿದಂತೆ ಅನೇಕರು ಕೋವಿಡ್ ಆತಂಕದಿAದ ನಿಯಮಗಳನ್ನು ಪಾಲಿಸಿ ದೂರ ಉಳಿದರೂ ಕೆಲವರು ಮಾಡುವ ತಪ್ಪಿನಿಂದಾಗಿ ಇತರರೂ ಸಹ ಸೋಂಕು ತಗುಲಿಸಿಕೊಂಡು ಪಶ್ಚಾತಾಪಪಡುವ ಸ್ಥಿತಿಯಿದೆ. ಜಿಲ್ಲಾದ್ಯಂತ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಪಾಲನೆಗೆ ಸಂಬAಧಿಸಿದAತೆ ನಿಯಮಗಳನ್ನು ಬಿಗಿಗೊಳಿಸುವ ಅವಶ್ಯಕತೆಯಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಉಲ್ಲಂಘನೆ
ಗ್ರಾಮೀಣ, ನಗರಭಾಗದ ಹಿಂದುಳಿದ ಪ್ರದೇಶಗಳು,ಕೊಳಗೇರಿ ಪ್ರದೇಶಗಳಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ ಜನಸಂದಣಿ ಉಂಟಾಗುವುದು ಸಾಮಾನ್ಯ. ನವೆಂಬರ್‌ವರೆಗೆ ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಉಚಿತವಾಗಿ ಪಡಿತರ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದು, ಜೀವನಕ್ಕಿಂತ ಜೀವವೇ ಮುಖ್ಯ ಎಂಬ ಕಾರಣಕ್ಕಾಗಿ ಇಂಥದೊAದು ಮಹತ್ವದ ಘೋಷಣೆಯನ್ನು ಅವರು ಮಾಡಿದ್ದಾರೆ. ಜನ ಮನೆಯಲ್ಲಿ ಹೆಚ್ಚಾಗಿದ್ದು, ಜನಸಂದಣಿಯಿAದ ದೂರ ಉಳಿಯಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಇಂಥ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಆದರೆ ಮಾರುಕಟ್ಟೆ ಪ್ರದೇಶ ಸೇರಿದಂತೆ ಇತರೆಡೆಗಳಲ್ಲಿ ಸಾಮಾಜಿಕ ಅಂತರ ಮರತೆ ಹೋಗಿದ್ದು, ಕನಿಷ್ಠ ಪಕ್ಷ ಸಾಧ್ಯವಿರುವ ಕಡೆಗಳಲ್ಲಾದರೂ ನಿಯಮವನ್ನು ಪಾಲಿಸಬಹುದಾಗಿದೆ.
ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಪಾಲಿಸುವಂತೆ ಮಾಡುವುದು ಸವಾಲಿನ ಕೆಲಸವಲ್ಲವಾದರೂ ಈ ಬಗ್ಗೆ ಮಾರಾಟಗಾರರು ನಿರ್ಲಕ್ಷö್ಯ ತೋರುತ್ತಿದ್ದಾರೆ. ಕನಿಷ್ಠ ಪಕ್ಷ ಅಧಿಕಾರಿಗಳಾದರೂ ಸುತ್ತಾಡಿ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಬೇಕಿದ್ದು, ಅದು ಕೂಡ ಸಾಧ್ಯವಾಗಿಲ್ಲ.
ಸರ್ಕಾರಿ ಕಚೇರಿಗಳಲ್ಲೂ ಉಲ್ಲಂಘನೆ
ನಗರದ ಸರ್ಕಾರಿ ಕಚೇರಿಗಳನ್ನೊಮ್ಮೆ ಸುತ್ತಾಕಿದರೆ ಅಲ್ಲಿ ಕಾನೂನು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಆರ್‌ಟಿಒ ಕಚೇರಿ, ತಹಶೀಲ್ದಾರ್ ಕಚೇರಿ ಸೇರಿ ನೇರವಾಗಿ ಸಾರ್ವಜನಿಕ ಸೇವೆಗಳನ್ನು ಒದಗಿಸುವ ಕಚೇರಿಗಳಲ್ಲಿ ಇಂಥ ಉಲ್ಲಂಘನೆ ಪ್ರಕರಣಗಳು ಯಥೇಚ್ಛವಾಗಿ ಕಂಡು ಬರುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ಹಲವು ಬಾರಿ ವರದಿ ಪ್ರಕಟಗೊಂಡರೂ ಅಧಿಕಾರಿಗಳು ಎಚ್ಚೆತ್ತಿಲ್ಲ. ಸಾರ್ವಜನಿಕರಿಗೆ ಪ್ರಕಟಣೆ ಮೂಲಕವೇ ಎಚ್ಚರಿಕೆ ನೀಡಲಾಗುತ್ತಿದೆ ಆದರೆ ಜನ ಪಾಲಿಸುತ್ತಿಲ್ಲ ಎಂಬ ಹೇಳಿಕೆಗಳು ಅಧಿಕಾರಿವಲಯದಿಂದ ಬರುತ್ತಿವೆ.