ಜನರಿಂದ ಬಂದ‌‌ ಚಿನ್ನದ ಕಿರೀಟ ಸರ್ಕಾರಕ್ಕೆ ಸಮರ್ಪಿಸಿದ ಡಿಸಿಎಂ‌ ಕಾರಜೋಳ

* ಐದು ಸರ್ಕಾರಿ ಶಾಲೆಗಳು ದತ್ತು. * ಮೂಲಸೌಕರ್ಯ ಅಭಿವೃದ್ಧಿಪಡಿಸುವ ಗುರಿ.

ಜನರಿಂದ ಬಂದ‌‌ ಚಿನ್ನದ ಕಿರೀಟ ಸರ್ಕಾರಕ್ಕೆ ಸಮರ್ಪಿಸಿದ ಡಿಸಿಎಂ‌ ಕಾರಜೋಳ

ನಾಡನುಡಿ ನ್ಯೂಸ್

ಬಾಗಲಕೋಟೆ:

ಸ್ವಗ್ರಾಮ ವಿಜಯಪುರ ಜಿಲ್ಲೆ ಕಾರಜೋಳ ಗ್ರಾಮಸ್ಥರು ಸನ್ಮಾನದ ವೇಳೆ ತಮಗೆತೊಡಸಿದ ಏಳು ತೊಲೆ ಚಿನ್ನದ ಕಿರೀಟವನ್ನು ಸರ್ಕಾರಕ್ಕೆ ನೀಡುವುದಾಗಿ ಡಿಸಿಎಂ ಗೋವಿಂದ ಕಾರಜೋಳ ಘೋಷಿಸಿದ್ದಾರೆ.

(ವಿಜಯಪುರದಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮದ ಚಿತ್ರ)

ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಕಾರಜೋಳ ಅವರು, ಜನರಿಂದ ಬಂದಿದ್ದು, ಜನರಿಗೆ ತಲುಪಬೇಕು ಎಂಬುದು ನನ್ನಾಸೆ ಅದಕ್ಕಾಗಿ ಸರ್ಕಾರಕ್ಕೆ ಅರ್ಪಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳು ಇದನ್ನು ಸ್ವೀಕರಿಸಬೇಕೆಂದು ಭಾವುಕರಾಗಿ ಮಾತನಾಡಿದ ಅವರು ಜನರ ಪ್ರೀತಿಯನ್ನು ನೆನೆದರು. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಂ.ಬಿ.ಪಾಟೀಲ ಹಾಗೂ ಶಿವಾನಂದ ಪಾಟೀಲ ಅವರನ್ನೂ ಗ್ರಾಮದಲ್ಲಿ ಸನ್ಮಾನಿಸಲಾಗಿತ್ತು.

(ಸರ್ಕಾರಿ ಶಾಲೆಯ ಸಾಂದರ್ಭಿಕ ಚಿತ್ರ)

ಐದು ಶಾಲೆ ದತ್ತಕ್ಕೆ:
ಇದಲ್ಲದೇ ಸರ್ಕಾರಿ ಶಾಲೆಗಳ ದತ್ತು ಅಭಿಯಾನದ ಕಾರ್ಯಕ್ರಮದಲ್ಲಿ ತಾವು ಪ್ರತಿನಿಧಿಸುವ 
ಶಿರೋಳ, ಬೆಳಗಲಿ, ಮುಗುಳಖೋಡ, ನಾಗರಾಳ, ಇಂಗಳಗಿ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ದತ್ತುಪಡೆಯುವುದಾಗಿ ಅವರು ಘೋಷಿಸಿದರು.
ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಶಾಸಕರು, ಅಧಿಕಾರಿಗಳಿಗಾಗಿ ಈ ಅಭಿಯಾನ ರೂಪಿಸಲಾಗಿದೆ.