ಜಿಲ್ಲೆಯಲ್ಲಿ ಅಂದಾಜು ಶೇ.74.63 ರಷ್ಟು ಮತದಾನ

ಜಿಲ್ಲೆಯಲ್ಲಿ ಅಂದಾಜು ಶೇ.74.63 ರಷ್ಟು ಮತದಾನ



ಬಾಗಲಕೋಟೆ: ಜಿಲ್ಲೆಯಾದ್ಯಂತ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನವಾಗಿದ್ದು, ಸಂಜೆ 6 ಗಂಟೆ ಸುಮಾರಿಗೆ ಅಂದಾಜು ಶೇ.74.61 ರಷ್ಟು ಮತದಾನವಾದ ವರದಿಯಾಗಿದೆ.
          ಮುಧೋಳ ಮೀಸಲು ಕ್ಷೇತ್ರದಲ್ಲಿ ಶೇ.77 ರಷ್ಟು ಮತದಾನವಾದರೆ, ತೇರದಾಳ ಮತಕ್ಷೇತ್ರದಲ್ಲಿ ಶೇ.78.25 ರಷ್ಟು, ಜಮಖಂಡಿ ಕ್ಷೇತ್ರದಲ್ಲಿ ಶೇ.74.51 ರಷ್ಟು, ಬೀಳಗಿ ಕ್ಷೇತ್ರದಲ್ಲಿ ಶೇ.78.01 ರಷ್ಟು, ಬಾದಾಮಿ ಮತಕ್ಷೇತ್ರದಲ್ಲಿ ಶೇ.73 ರಷ್ಟು, ಬಾಗಲಕೋಟೆ ಮತಕ್ಷೇತ್ರದಲ್ಲಿ ಶೇ.69.18 ರಷ್ಟು ಹಾಗೂ ಹುನಗುಂದ ಮತಕ್ಷೇತ್ರದಲ್ಲಿ 73 ರಷ್ಟು ಮತದಾನವಾದ ವರದಿಯಾಗಿದೆ.