ಮುಸ್ಲಿಂರ ಒಲೈಕೆಯಿಂದ ಅಧಿಕಾರ ಕಳೆದುಕೊಂಡ ಸಿದ್ದು: ಈಶ್ವರಪ್ಪ ವ್ಯಂಗ್ಯ

ಮುಸ್ಲಿಂರ ಒಲೈಕೆಯಿಂದ ಅಧಿಕಾರ ಕಳೆದುಕೊಂಡ ಸಿದ್ದು: ಈಶ್ವರಪ್ಪ ವ್ಯಂಗ್ಯ

ಬಾಗಲಕೋಟೆ:
ಮುಸ್ಲಿಂರನ್ನು‌ ಸಂತೃಪ್ತಿಗೊಳಿಸಲು ಹೋಗಿಯೇ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ನೆಗದುಬಿದ್ದೋಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂರ ಒಲೈಕಯಿಂದಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಸೋತಿದ್ದಾರೆ‌. ಮುಸ್ಲಿಂರಿಗೆ ನ್ಯಾಯ ಕೊಡುವ ವಿಚಾರದಲ್ಲಿ ಆಕ್ಷೇಪವಿಲ್ಲ ಅದರ ಹೆಸರಿನಲ್ಲಿ ಒಲೈಕೆ‌ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ರಾಷ್ಟ್ರೀಯತೆಯನ್ನು ಒಪ್ಪುವ ಮುಸ್ಲಿಂರಿಗೆ ನಾವು ನಮಸ್ಕಾರ ವನ್ನೂ ಮಾಡುತ್ತೇವೆ ಅಂತೆಯೇ ರಾಷ್ಟ್ರದ್ರೋಹಿಗಳನ್ನು ವಿರೋಧಿಸುತ್ತೇವೆ. ಆದರೆ ಕಾಂಗ್ರೆಸ್ ‌ಪ್ರತಿ ವಿಚಾರದಲ್ಲೂ ಅವರ ಒಲೈಕೆ ಮಾಡುತ್ತ ಹಿಂದೂ-ಮುಸ್ಲಿಂರ ಮಧ್ಯೆ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಇಷ್ಟೆಲ್ಲ ಒಲೈಕೆ ನಂತರ ಮುಸ್ಲಿಂ ಸಮುದಾಯ ಕಾಂಗ್ರೆಸ್ ಜತೆಗಿಲ್ಲ ಸಿ.ಎಂ.ಇಬ್ರಾಹಿಂ ಬಾಯಿಗೆ ಬಂದಂತೆ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿದ್ದಾರೆ. ಜಮೀರ್ ಅಹ್ಮದ್ ಖಾನ್ ಕೂಡ ದೂರವಾಗಿದ್ದಾರೆ. ಮುಸ್ಲಿಂರು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಕೇವಲ ಪ್ರಾದೇಶಿಕ ಪಕ್ಷವಾಗಿ ಈಗ ಉಳಿದಿದೆ ಎಂದರು.

ಮಹದಾಯಿ ವಿಚಾರವಾಗಿ‌ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ ಅವರಿಗೆ ಶಕ್ತಿ‌ ಇದ್ದರೆ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿ ಭರವಸೆ ಕೊಟ್ಟು ನೀರು ಯಾಕೆ ಕೊಡಲಿ ಎಂಬುದನ್ನು ಅವರನ್ನು ಕೇಳಿ ನೋಡಲಿ ಎಂದರು.

ಹಿಂದೆ ಸಿದ್ದರಾಮಯ್ಯ, ಎಚ್.ಕೆ.ಪಾಟೀಲ, ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಅವರನ್ನು ಅವರ ಅಧಿಕಾರದ ಸಂದರ್ಭದಲ್ಲಿ ಭೇಟಿ ಮಾಡಿ ಮಹದಾಯಿ ನೀರು ಕೊಡಲಿದ್ದಾರೆ ಎಂದು ಹೇಳಿದರು, ಮುಂದೆ ಗೋವಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಒಂದು ಹನಿ‌ ನೀರನ್ನೂ ಕೊಡಲ್ಲ ಎಂದಿದ್ದರು.ಕಾಂಗ್ರೆಸ್ ಇಬ್ಬಗೆ ನೀತಿ ಅನುಸರಿಸುವುದನ್ನು ಬಿಡಬೇಕು ಎಂದು ಹೇಳಿದರು.