ಮೊಸಳೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭ..!

ಮುರನಾಳ ಪುನರ್ವಸತಿ ಕೇಂದ್ರದ ಕೆರೆಯಲ್ಲಿ ಕಾಣಿಸಿಕೊಂಡಿರುವ ಮೊಸಳೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ.

ಮೊಸಳೆ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭ..!

ಬಾಗಲಕೋಟೆ:
ಮುರನಾಳ ಪುನರ್ವಸತಿ ಕೇಂದ್ರದ ಕೆರೆಯಲ್ಲಿ ಕಾಣಿಸಿಕೊಂಡಿರುವ ಮೊಸಳೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಆರಂಭಿಸಿದೆ‌.


ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮೊಸಳೆ ಪತ್ತೆ ಕಾರ್ಯ ಶುರು ಮಾಡಿದ್ದು, ಸಂಜೆ ೫ರ ವೇಳೆಗೆ ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಯಿತು.

ಕೆರೆಯಲ್ಲಿ ಬೋಟ್ ಗಳ ಮೂಲಕ  ಮೊಸಳೆ ಹಿಡಿಯವ ಕಾರ್ಯಾಚರಣೆ ಆರಂಭವಾಗಿದ್ದು, ಪುಟ್ಟಿಯೊಂದನ್ನು ಬಿಟ್ಟು ಅದರ ಜತೆಗೆ ಬೃಹದಾಕಾರದ ಬಲಿಯನ್ನು ಬೀಸಲಾಗುತ್ತದೆ‌ ಆ ಮೂಲಕ ಮೊಸಳೆಯನ್ನು ಹಿಡಿಯುವ ಕಾರ್ಯಾಚರಣೆ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.