ಬೈಕ್ ಮುಖಾಮುಖಿ ಢಿಕ್ಕಿ: ವೈದ್ಯೆ, ಟೆಕ್ಕಿ ಸೇರಿ ಮೂವರ ಸಾವು..!
ಬಾಗಲಕೋಟೆ: ಎರಡು ಬೈಕಗಳು ಮುಖಾಮುಖಿ ಢಿಕ್ಕಿ ಹೊಡೆದು ಮೂವರು ಸಾವನ್ನಪ್ಪಿರುವ ಘಟನೆ ನವನಗರದಲ್ಲಿ ನಡೆದಿದೆ.
ಮೃತರನ್ನು ರಜನಿ ವಂದಕುದರಿ(೩೪), ಶೃತಿ ವಂದಕುದರಿ(೩೨) ಹಾಗೂ ಅಭಿಷೇಕ ಧೋತ್ರಿ(೨೦) ಎಂದು ಗುರುತಿಸಲಾಗಿದೆ.
ಶೃತಿ ವಂದಕುದರಿ ಬಾಗಲಕೋಟೆ ಬಸವೇಶ್ವರ ದಂತ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದು, ರಜನಿ ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿತ್ತಿದ್ದರು, ಅವರು ಸ್ಕೂಟಿ ವಾಹನದಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಆರ್೧೫ ಬೈಕ್ ನಲ್ಲಿ ಬಂದ ಯುವಕರು ಢಿಕ್ಕಿ ಹೊಡೆದಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸಂದೀಪ ಹುಲಸಗೇರಿ ಎಂಬಾತನಿಗೂ ತೀವ್ರತರ ಗಾಯಗಳಾಗಿದ್ದು, ಹಿಂಬದಿ ಕುಳಿತಿದ್ದ ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಂಚಾರಿ ವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.