ಮೂಗರಾದರೂ ಒಂದುಗೂಡಿಸಿದ ಇನ್‌ಸ್ಟಾ: ರಾಜಸ್ಥಾನ ಯುವತಿಯನ್ನು ವರಸಿದ್ದ ಯುವಕನ ಮೂಕರೋದನೆ

ಮೂಗರಾದರೂ ಒಂದುಗೂಡಿಸಿದ ಇನ್‌ಸ್ಟಾ: ರಾಜಸ್ಥಾನ ಯುವತಿಯನ್ನು ವರಸಿದ್ದ ಯುವಕನ ಮೂಕರೋದನೆ
ಬಾಗಲಕೋಟೆ:ಇನ್‌ಸ್ಟಾçಗ್ರಾಂನಲ್ಲಿ ಅರಳಿದ ಪ್ರೀತಿ ರಾಜಸ್ಥಾನ ಮೂಲದ ಯುವತಿ ಹಾಗೂ ಜಿಲ್ಲೆಯ ಜಮಖಂಡಿ ತಾಲೂಕಿನ ನಾಗನೂರು ಗ್ರಾಮದ ಯುವಕನನ್ನು ಒಂದು ಗೂಡಿಸಿತ್ತು.ಇಬ್ಬರು ಮಾತುಬಾರದ ಮೂಕರಾದರೂ ಮನಸ್ಸು ಅವರನ್ನು ಬೆಸೆಯುವಂತೆ ಮಾಡಿತ್ತು. ಆದರೆ ಯುವತಿ ರಾಜಸ್ಥಾನಕ್ಕೆ ವಾಪಸ್ಸಾಗಿದ್ದು, ಇಬ್ಬರ ಮೂಕರೋಧನೆಗೆ ಈಗ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕಿದೆ 
ಹೌದು ಬಾಗಕೋಟೆ ಜಿಲ್ಲೆಯ ನಾಗನೂರಿನ ಸಿದ್ಧಾರ್ಥ ಹರಿಜನ ಹಾಗೂ ರಾಜಸ್ಥಾನದ ರಾಜಸಮಂಡ ಜಿಲ್ಲೆ ದಾಸಣಾ ಗ್ರಾಮದ ರೂದಿಯಾ ಕಂವರ್ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ೨೦೨೩ ಆಗಸ್ಟ್ ೨೭ರಂದು ಮದುವೆಯೂ ಆಗಿದ್ದರು. ಇಬ್ಬರು ಮೂಕರಾದರೂ ಮನಸ್ಸಿನ ಭಾಷೆ ಮೂಲಕ ಒಂದಾಗಿದ್ದರು. ಸಿದ್ಧಾರ್ಥನನ್ನು ನಂಬಿ ರಾಜಸ್ಥಾನದಿಂದ ಯುವತಿ ಬಂದಿದ್ದಳು ಇಬ್ಬರೂ ಶಾಸ್ತೊçÃಕ್ತವಾಗಿ ಮದುವೆ ಆಗಿದ್ದರು. ಆದರೆ ರಾಜಸ್ಥಾನದಲ್ಲಿ ಯುವತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದರ ಕಾರಣ ಪೊಲೀಸರು ಹಾಗೂ ಆಕೆಯ ಸಹೋದರ ಬಂದು  ಸೆಪ್ಟಂಬರ್ ತಿಂಗಳಿನಲ್ಲಿ ವಾಪಸ್ ಕರೆದುಕೊಂಡು ಹೋಗಿದ್ದಾರೆ.  
ಈಗ ಯುವಕ ಸಿದ್ಧಾರ್ಥ ಆಕೆಯನ್ನು ವಾಪಸ್ ಕರೆತರುವಂತೆ ವಕೀಲ ಎನ್.ಬಿ.ಗಸ್ತಿ ಅವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ.ಅಮರನಾಥ ರೆಡ್ಡಿ ಅವರ ಮೊರೆ ಹೋಗಿದ್ದಾರೆ. 
ಈ ಇಬ್ಬರೂ ಮೊದಲು ಬೇರೆ ಮದುವೆ ಆಗಿದ್ದರು ಎಂದು ಹೇಳಲಾಗಿದೆ. ಇನ್ನು ರೂದಿಯಾಳನ್ನು ಕರೆತಂದ ನಂತರ ಸಿದ್ಧಾರ್ಥ ಮದುವೆ ಆಗಿದ್ದರೂ ನೋಂದಣಿ ಮಾಡಿಸಿರಿಲಿಲ್ಲ ಕೇವಲ ಶಾಸ್ತೊçÃಕ್ತವಾಗಿ ಮದುವೆ ಆಗಿದ್ದರು. ಈಗ ರೂದಿಯಾ ನಿತ್ಯವೂ ಸಿದ್ಧಾರ್ಥನಿಗೆ ವಿಡಿಯೋ ಕಾಲ್ ಮಾಡಿ ನನ್ನನ್ನು ಕರೆದೊಯ್ದಿದ್ದರೆ ಆಕೆಯ ಕುಟುಂಬಸ್ಥರು ಆಕೆಯನ್ನು ಕೊಲ್ಲುತ್ತಾರೆ ಎಂದು ಹೇಳುತ್ತಿದ್ದಾಳೆ. ಹೀಗಾಗಿ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದಾಳೆ. ಎಸ್ಪಿ ಅಮರನಾಥ ರೆಡ್ಡಿ ಕಾನೂನಿನಲ್ಲಿರುವ ಅವಕಾಶಗಳನ್ನು ನೋಡಿಕೊಂಡು ಆಕೆಯನ್ನು ವಾಪಸ್ ಕರೆತರುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. 
ಈ ಕುರಿತು ಮಾಹಿತಿ ನೀಡಿದ ವಕೀಲ ಗಸ್ತಿ ಅವರು, ರಾಜಸ್ಥಾನದಲ್ಲಿ ಆಕೆಯ ಪಾಲಕರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಲ್ಲಿಯ ಪೊಲೀಸರು ಆಗಮಿಸಿ ಆಕೆಯನ್ನು ಕರೆದೊಯ್ದಿದ್ದಾರೆ. ಆದರೆ ಆಕೆ  ವಯಸ್ಕಳಾಗಿರುವುದರಿಂದ ಇಲ್ಲಿಯ ಪೊಲೀಸರು ಆಕೆ ಆಯ್ಕೆಯಂತೆ ಪತ್ರ ಪಡೆದು ಇಲ್ಲಿ ಇರಲು ಅವಕಾಶ ಮಾಡಿಕೊಡಬಹುದಿತ್ತು. ವಾಪಸ್ ಕಳುಹಿಸಿಕೊಟ್ಟಿದ್ದು, ಆಕಯೆನ್ನು ಕರೆತರಲು ಎಸ್ಪಿ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.