ಬಾಗಲಕೋಟೆ: ಮತ್ತೆ ಜೀವ ಪಡೆದ ಮೂರ್ತಿ ಪ್ರತಿಷ್ಠಾಪನೆ..!

ಬಾಗಲಕೋಟೆ: ಮತ್ತೆ ಜೀವ ಪಡೆದ ಮೂರ್ತಿ ಪ್ರತಿಷ್ಠಾಪನೆ..!
ಬಾಗಲಕೋಟೆ :
 ಐತಿಹಾಸಿಕ ಬಾದಾಮಿ ನಗರವನ್ನು ಅಂದಗೊಳಿಸಲು ಹಾಗೂ ಗತವೈಭವ ಮರುಕಳುಹಿಸುವ ಕಾರ್ಯವಾಗಬೇಕಿದ್ದು, ಈ ದಿಶೆಯಲ್ಲಿ ಚಾಲುಕ್ಯರ ಪ್ರಸಿದ್ದ ರಾಜ ಇಮ್ಮಡಿ ಪುಲಕೇಶಿ ಹಾಗೂ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗಳು ನಿರ್ಮಾಣಗೊಂಡಿವೆ. ಅವುಗಳನ್ನು ಪ್ರತಿಷ್ಠಾಪಿಸಲು ಶೀಘ್ರದಲ್ಲಿಯೇ ಸ್ಥಳ ಗುರುತಿಸುವ ಕಾರ್ಯವಾಗಬೇಕೆಂದು ಸಂಸದ ಪಿ.ಸಿ.ಗದ್ದಿಗೌಡರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಬುಧವಾರ ಜಿಲ್ಲಾ ಅಭಿವೃದ್ದಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯ ತ್ರೆöÊಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹೃದಯ ಯೋಜನೆಯಡಿ ಪುಲಕೇಶಿಯ ಎಡರು ಪುತ್ಥಳಿ ಹಾಗೂ ಬಸವೇಶ್ವರರ ಒಂದು ಪುತ್ಥಳಿ ತಯಾರಾಗಿದ್ದು, ಅವುಗಳನ್ನು ಸ್ಥಾಪನಾ ಮಾಡುವ ಕಾರ್ಯ ವಿಳಂಭವಾಗಿದೆ. ಆದ್ದರಿಂದ ಸ್ಥಳೀಯ ಅಧಿಕಾರಿಗಳು ಪ್ರವಾಸಿಗರಿಕೆ, ಸಾರ್ವಜನಿರಿಗೆ ಕಾಣುವ ರೀತಿಯಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಪುತ್ಥಳಿಗಳ ಪ್ರತಿಷ್ಠಾಪನೆ ಕಾರ್ಯ ಕೂಡಲೇ ಆಗಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಪಾರಂಪರಿಕ ಐಹೊಳೆಯಲ್ಲಿ ದುರ್ಗಾದೇವಾಲಯ ಹಾಗೂ ಹುಚ್ಚಿಮಲ್ಲಿ ಗುಡಿ ಪುನಶ್ಛೇತನಗೊಳಿಸುವ ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಉಳಿದ ಐತಿಹಾಸಿಕ ಅಭಿವೃದ್ದಿಗೆ ಕೈಗೊಂಡ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ತಿಳಿಸಿದರು. ಬೆಳಗಾವಿ ಹುನಗುಂದ ರಾಯಚೂರು ರಾಷ್ಟಿçÃಯ ಹೆದ್ದಾರಿಯನ್ನು ಮೂರು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಮೂರು ಹಂತಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೇ ಹೆಸ್ಕಾಂ, ಕೆಪಿಟಿಸಿಎಲ್ ಹಾಗೂ ಎಲ್‌ಐಎನ್‌ಟಿ ಅವರಿಗೆ ಈ ಕುರಿತು ಪತ್ರ ಬರೆಯಾಗಿದೆ ಎಂದು ರಾಷ್ಟಿçÃಯ ಹೆದ್ದಾರಿ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಸಭೆಗೆ ತಿಳಿಸಿದರು.
ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲಿಸಿದಾಗ ಆರ್ಥಿಕ ಪ್ರಗತಿ ಕಡಿಮೆಯಾಗಿದ್ದು, ಜನವರಿ ಅಂತ್ಯಕ್ಕೆ ಆರ್ಥಿಕ ಪ್ರತಿ ತೋರಿಸದಿದ್ದರೆ ಸಂಬAಧಿಸಿದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ವಹಿಸಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿಯೂ ಸಹ ಆರ್ಥಿಕ ಪ್ರಗತಿಯಲ್ಲಿ ಬಹಳ ಕಡಿಮೆ ಪ್ರಗತಿಹೊಂದಿದ್ದು, ಅನುದಾನ ಭರಿಸಲು ಕ್ರಮವಹಿಸಬೇಕು. ತೋಟಗಾರಿಕೆ ಬೆಳೆ ಪ್ರದೇಶ ಹೆಚ್ಚಿಸಲು ಕ್ರವಹಿಸಲು ತಿಳಿಸಿದ ಸಂಸದರು ಕೇಂದ್ರ ಪುರಸ್ಕೃತಿ ಪ್ರತಿಯೊಂದು ಯೋಜನೆಗಳು ಜನರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಲು ತಿಳಿಸಿದರು.
ಜೆ.ಜೆ.ಎಂ ಯೋಜನೆಯಡಿ ಒಟ್ಟು ನಾಲ್ಕು ಹಂತಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ೭ ಗ್ರಾಮಗಳನ್ನು ಹೊರತುಪಡಿಸಿ ಉಳಿದ ಎಲ್ಲ ಗ್ರಾಮಗಳಲ್ಲಿ ಈ ಯೋಜನೆ ಕಾಮಗಾರಿಗಳು ಪೂರ್ಣಗೊಂಡಿವೆ. ಬಾದಾಮಿ ಹಾಗೂ ಹುನಗುಂದ ತಾಲೂಕಿನ ೭ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಕೈಗೊಳ್ಳಲು ಗ್ರಾಮಸ್ಥರ ಮನವೊಲಿಸಲು ತಿಳಿಸಿದರು. ಅಲ್ಲದೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪುನಶ್ಚೇತನ ಕಾಮಗಾರಿಗಳ ಮಾಹಿತಿಯನ್ನು ಸಹ ಪಡೆದರು. 
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ೨೦೨೦-೨೧ನೇ ಸಾಲಿನ ಬ್ಯಾಚ್-೨ರಲ್ಲಿ ಒಟ್ಟು ೨೪ ರಸ್ತೆ ಹಾಗೂ ೧೦ ಸೇತುವೆ ಕಾಮಗಾರಿಗಳು ಮಂಜೂರಾಗಿದ್ದು, ಡಿಸೆಂಬರ ಅಂತ್ಯಕ್ಕೆ ೧೫ ರಸ್ತೆ ಹಾಗೂ ೩ ಸೇತುವೆ ಕಾಮಗಾರಿಗಳು ಪೂರ್ಣಗೊಂಡಿರುತ್ತದೆ. ೨೦೨೨-೨೩ರಲ್ಲಿ ೧೦ ರಸ್ತೆ ಹಾಗೂ ೨ ಸೇತುವೆ ಕಾಮಗಾರಿಗಳು ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಗೊAಡಿವೆ. ಡಿಸೆಂಬರ ಅಂತ್ಯಕ್ಕೆ ೨೨.೧೫ ಕಿ.ಮೀ ಹಾಗೂ ಕಳೆದ ಸಾಲಿನಲ್ಲಿ ೧೧೩.೧೨ ಕಿ.ಮೀ ಸೇರಿ ಒಟ್ಟು ೧೩೫.೩೭ ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ವಿವಿಧ ಇಲಾಖೆಯ ಕೇಂದ್ರ ಪುರಸ್ಕೃತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಉಪ ಕಾರ್ಯದರ್ಶಿ ಅಮರೇಶ ನಾಯಕ, ರಾಜ್ಯ ನಾಮನಿರ್ದೇಶಿತ ಸದಸ್ಯ ಯಲ್ಲಪ್ಪ ಬೆಂಡಿಗೇರಿ ಸೇರಿದಂತೆ ಜಿ.ಪಂ ಮುಖ್ಯ ಯೋಜನಾಧಿಕಾರಿ ಪುನಿತ್, ಯೋಜನಾಧಿಕಾರಿ ಎನ್.ವಾಯ್.ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.