ಇಳಕಲ್ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ರಾಜೀನಾಮೆ
ಪಕ್ಷದ ಒಳಒಪ್ಪಂದದಂತೆ ಇಳಕಲ್ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಾಗಲಕೋಟೆ :ಜಿಲ್ಲೆಯ ಇಳಕಲ್ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮಂಜುನಾಥ ಶೆಟ್ಟರ ಮತ್ತು ಜಿ ಎಚ್ ಗುಳೇದ ರಾಜೀನಾಮೆಯನ್ನು ಸೋಮವಾರದಂದು ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಅವರಿಗೆ ಅರ್ಪಿಸಿದರು .
ಪಕ್ಷದ ಒಳ ಒಪ್ಪಂದದ ಪ್ರಕಾರ ತಮಗೆ ನೀಡಿದ ಅವಧಿ ಮುಗಿದ ಕಾರಣ ಇಬ್ಬರೂ ರಾಜಿನಾಮೆ ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು ಈ ಸಮಯದಲ್ಲಿ ಸದಸ್ಯರಾದ ಸೂಗುರೇಶ ನಾಗಲೋಟಿ ವಿಜಯ ಗಿರಡ್ಡಿ, ಹುಸೇನಸಾಬ ಬಾಗವಾನ ಚಂದ್ರಶೇಖರ ಏಕಬೋಟೆ , ರಾಘವೇಂದ್ರ ಸೂರೆ , ಬಸವರಾಜ ಗೋನಾಳ ಮಹಾಂತೇಶ ಕಂಪ್ಲಿ ವಿಠ್ಠಲ ಜಕ್ಕಾ ಮತ್ತಿತರರು ಉಪಸ್ಥಿತರಿದ್ದರು