ಕೋಟೆನಗರಿಯ ಮೆರಗು ಹೆಚ್ಚಿಸಿದ ನವರಾತ್ರಿ ರಂಗು

ಒಂಬತ್ತು ದಿನಗಳ ನಗರದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ರಂಗು ಮೇಳೈಸಿತು. ದೇಗುಲಗಳಲ್ಲಿ ವಿಶೇಷ ಪೂಜೆ, ದಾಂಡಿಯಾ ರಾಸ್ ಗಳು ಜರುಗಿ. ಜನರ ಉತ್ಸಾಹ ಹೆಚ್ಚುವಂತೆ ಮಾಡಿತು. ಈ ಕುರಿತಾದ ರೌಂಡಪ್ ಇಲ್ಲಿದೆ ಓದಿ

ಕೋಟೆನಗರಿಯ ಮೆರಗು ಹೆಚ್ಚಿಸಿದ ನವರಾತ್ರಿ ರಂಗು


ಬಾಗಲಕೋಟೆ:
 ಕಳೆದ ಎರಡ್ಮೂರು ವರ್ಷಗಳ ಕಾಲ ಕೇವಲ ಕೋವಿಡ್ ಕರಾಳತೆಯನ್ನು ಕಂಡಿದ್ದ ಕೋಟೆನಗರಿಯಲ್ಲಿ ಈ ಬಾರಿ ಸಾಂಸ್ಕೃತಿಕ ರಂಗು ಅನಾವರಣಗೊಂಡಿದೆ. ಅದ್ಧೂರಿ ನವರಾತ್ರಿ ಆಚರಣೆಗೆ ಬಾಗಲಕೋಟೆ ಸಾಕ್ಷಿಯಾಗಿದ್ದು, ಜನರ ಸಂಭ್ರಮದಿಂದ ಹಬ್ಬ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

(ಮಿರ್ಜಿಗಲ್ಲಿಯಲ್ಲಿ 56ಬಗೆಯ ತಿನಿಸುವ ಚಪನ್ ಬೋಗ್‌ ನೈವೇದ್ಯ)

ಹಳೆ ಬಾಗಲಕೋಟೆಯ ವೆಂಕಟಪೇಟೆ, ಹೊಸಪೇಟೆಯ ವೆಂಕಟೇಶ್ವರ ದೇವಸ್ಥಾನ, ಕಿಲ್ಲಾ,‌ಎಂಜಿ ರಸ್ತೆ ಅಂಬಾಭವಾನಿ ದೇಗುಲ, ನವನಗರ ವೆಂಕಟೇಶ ದೇವಸ್ಥಾನಗಳಲ್ಲಿ ದೇವರಿಗೆ ದಿನಕ್ಕೊಂದು ರೂಪಾಲಂಕಾರ ಮಾಡಲಾಗಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

(ವೆಂಕಟಪೇಟೆಯ ವೆಂಕಪ್ಪನಿಗೆ ರೂಪಾಲಂಕಾರ ಮಾಡಿರುವ ಚಿತ್ರ)

ಮಿರ್ಜಿಗಲ್ಲಿ, ನವನಗರ ಸೇರಿ ಹಲವೆಡೆ ಸಾರ್ವಜನಿಕ ದೇವಿ ಪ್ರತಿಷ್ಠಾಪಿಸಲಾಗಿದ್ದು, ದುರ್ಗಾಷ್ಟಮಿ ದಿನವಾದ ಸೋಮವಾರ ವಿವಿಧ ಖಾದ್ಯಗಳನ್ನು ಮಿಶ್ರಿಸಿ ತಯಾರಿಸುವ ಚಪನ್ ಬೋಗ್ ಸಂಭ್ರಮ ಜೋರಾಗಿತ್ತು.

( ವಿದ್ಯಾಗಿರಿಯ ಸಾಯಿ ಮಂದಿರದಲ್ಲಿ ನಡೆದ ದಂಡಿಯಾ ರಾಸ್ ಕಾರ್ಯಕ್ರಮದಲ್ಲಿ ಮಹಿಳೆಯರು ಸೆಲ್ಫಿಗೆ ಪೋಸ್ ನೀಡಿದ್ದು ಹೀಗೆ)

ದಾಂಡಿಯಾ ರಾಸ್ ಗಳಲ್ಲೂ ಜನಜಂಗುಳಿ:
ನವನಗರ, ವಿದ್ಯಾಗಿರಿ, ಬಾಗಲಕೋಟೆ ನಗರದ ವಿವಿಧೆಡೆ ಆಯೋಜನೆಗೊಂಡಿರುವ ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು, ಯುವಕರು ಹೆಜ್ಜೆ ‌ಹಾಕಿ ಸಂಭ್ರಮಿಸುತ್ತಿದ್ದಾರೆ. ನಿತ್ಯ ದೇವಿಗೆ ಪೂಜೆ ಸಲ್ಲಿಸಿದ ನಂತರ ದಾಂಡಿಯಾ ರಾಸ್ ಕಾರ್ಯಕ್ರಮಗಳು ನಡೆಯುತ್ತಿವೆ.

(ತುಳಜಾಪುರದ ಶ್ರೀಅಂಬಾಭವಾನಿದೇವಿ ರೂಪದಲ್ಲಿ ಎಂಜಿ ರಸ್ತೆ ಅಂಬಾಭವಾನಿ)

ನವನಗರದ ಕಾಳಿದಾಸ ಮೈದಾನ, ಸೆಕ್ಟರ್ ನಂ.೨೯ ಕೋರಮ್ಮ ದೇವಸ್ಥಾನ, ವಿದ್ಯಾಗಿರಿಯ  ಸಾಯಿಮಂದಿರ, ಫುಡ್ ಜಂಕ್ಷನ್, ಬಾಗಲಕೋಟೆಯ ದೀಪಂ ಕಾಲೊನಿ, ಮಿರ್ಜಿಗಲ್ಲಿಗಳಲ್ಲಿ ದಾಂಡಿಯಾ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರಗುತ್ತಿವೆ.