ಶಿವಾಜಿ ಪ್ರತಿಮೆ ತೆರವು ಪ್ರಕರಣ: ಹಿಂಜಾವೇ ಮುಖಂಡನ ಮೇಲೆ ಪ್ರಕರಣ ದಾಖಲು 

ಶಿವಾಜಿ ಪ್ರತಿಮೆ ತೆರವು ಪ್ರಕರಣ: ಹಿಂಜಾವೇ ಮುಖಂಡನ ಮೇಲೆ ಪ್ರಕರಣ ದಾಖಲು 


ಬಾಗಲಕೋಟೆ: ಶಿವಾಜಿ ಪ್ರತಿಮೆ ತೆರವು ಪ್ರತಿಭಟಿಸಿ ನಗರದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಯೋಜ ಶ್ರೀಕಾಂತ ಹೊಸಕೆರೆ ಅವರ ಮೇಲೆ ಪೊಲೀಸರು ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. 


 ಮೂಲತಃ ಕೊಪ್ಪಳ ಜಿಲ್ಲೆಯವರಾದ ಶ್ರೀಕಾಂತ ಹೊಸಕೆರೆ, ಅವರು ಆ.೧೯ರ ಶನಿವಾರ ನಗರದ ಹೊಳೆ ಆಂಜನೇಯ ದೇವಸ್ಥಾನದ ಬಳಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯ ವಕ್ತಾರರಾಗಿ ಭಾಷಣ ಮಾಡಿದ್ದರು. ಅವರ ಮೇಲೆ ಶಹರ ಠಾಣೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
 ಯಾವ ಗುಜರಾತ್‌ನಲ್ಲಿ ಹಿಂದೂಗಳ ವಿರಾಟ ದರ್ಶನವಾಯಿತೋ, ಯಾವ ಮುಜಾಫರ್ ನಗರದಲ್ಲಿ ವಿರಾಟರೂಪ ಶಕ್ತಿ ಪ್ರದರ್ಶನವಾಯಿತೂ, ಹಿಂದೂಗಳಿಗೆ ಮಂತ್ರಗಳು ಗೊತ್ತು, ತಂತ್ರಗಳು ಗೊತ್ತು ಶಸ್ತç ಹಿಡಿಯುವುದು ಗೊತ್ತು ಎಂಬ ಹೇಳಿಕೆಯನ್ನು ನೀಡಿ ಪ್ರಚೋದನೆ ನೀಡಿದ್ದು, ಇದನ್ನು ಟ್ವಿಟ್ಟರ್‌ನಲ್ಲಿ ಹಿಂದುತ್ವ ವಾಚ್ ಆನ್ ಎಕ್ಸ್ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ ಎಂದು ದೂರಿ ಸೆಕ್ಷನ್ ೨೯೫ ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.