KPSC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಕಿಂಗಪಿನ್ ಗೆ ಬೀಳಗಿ ಲಿಂಕ್

KPSC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಕಿಂಗಪಿನ್ ಗೆ ಬೀಳಗಿ ಲಿಂಕ್

ಬಾಗಲಕೋಟೆ ಜ ೨೪: ಕರ್ನಾಟಕ ಲೋಕಸೇವಾ ಆಯೋಗದ ಎಫ.ಡಿ.ಎ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಿಂಗಪಿನ್ ಎಂದು ಸಂಶಯಿಸಲಾಗಿರುವ ವ್ಯಕ್ತಿಯನ್ನು ಪೋಲಿಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.

     ಬೀಳಗಿ ತಾಲೂಕು ಬೂದಿಹಾಳ ಎಸ್.ಜಿ.ಗ್ರಾಮದ ರಾಮಪ್ಪ ಅಶೋಕ ಹೆರಕಲ್ ಎಂಬಾತನನ್ನು ತಡರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
     ಕೆ.ಪಿ.ಎಸ್.ಸಿಯ ರಹಸ್ಯ ದಾಖಲೆ ವಿಭಾಗದ ಪ್ರಥಮ ದರ್ಜೆ ಸಹಾಯಕನಾಗಿರುವ ರಾಮಪ್ಪ ಪ್ರಶ್ನೆ ಪತ್ರಿಕೆಗಳನ್ನು ಹೊರತಂದು ಹಣಕ್ಕೆ ಮಾರಿರುವ ಅನುಮಾನ ಇದೆ.
   ಬೆಂಗಳೂರು ಸಿಸಿಬಿ ಪೋಲಿಸರು ನೀಡಿರುವ ಸುಳಿವು ಆಧರಿಸಿ ಪೋಲಿಸರು ಬೂದಿಹಾಳ ಎಸ್.ಜಿ ಯ ಅವನ ನಿವಾಸದ ಮೇಲೆ ದಾಳಿಮಾಡಿದ್ದರು ಆದರೆ ಆತ ಅಲ್ಲಿರಲಿಲ್ಲ ಆತನ ಸಹೋದರರನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಜಮಖಂಡಿ ತಾಲೂಕಿನ ಚಿಕ್ಕ ಪಡಸಲಗಿಯಲ್ಲಿದ್ದ ಮಾಹಿತಿ ಸಿಕ್ಕು ಆತನನ್ನು ವಶಕ್ಕೆ  ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ.
  ಪೋಲಿಸರು ಇನ್ನೂ ಇದನ್ನು ಖಚಿತಪಡಿಸಿಲ್ಲ ನಿರಾಕರಿಸಿಯೂ ಇಲ್ಲ ವಿಚಾರಣೆ ನಂತರವೆ ವಿಷಯ ಖಚಿತವಾಗಲಿದೆ

Nadanudi-ನಾಡನುಡಿ ಪೇಜ್ ಲೈಕ್ ಮಾಡಿ ಪೋಸ್ಟ ಶೇರ್ ಮಾಡಿ....