ಬಾಗಲಕೋಟೆ ಜಿಲ್ಲೆಯಲ್ಲಿದ್ದಾರಂತೆ 380 ನಕಲಿ ವೈದ್ಯರು..!

ಬಾಗಲಕೋಟೆ ಜಿಲ್ಲೆಯಲ್ಲಿದ್ದಾರಂತೆ 380 ನಕಲಿ ವೈದ್ಯರು..!

ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದಿರುವ ಭ್ರೂಣಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗರಿಣಿಸಿರುವ ಎಸ್ಪಿ ಅಮರನಾಥ ರೆಡ್ಡಿ ಅವರು ಜಿಲ್ಲೆಯಲ್ಲಿ ೩೪೮ ಜನ ನಕಲಿ ವೈದ್ಯರು ಇರುವ ಮಾಹಿತಿ ಪಡೆದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ. 


ಎಸ್ಸೆಸ್ಸೆಲ್ಸಿ , ಪಿಯುಸಿ, ಬಿಎ, ಬಿಕಾಂ, ಟಿಸಿಎಚ್, ಐಟಿಐ ಓದಿದವರು ನಕಲಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದರು.ಜಿಲ್ಲೆಯ ಜಮಖಂಡಿ  ತಾಲ್ಲೂಕಿನ ಸಾವಳಗಿ ವ್ಯಾಪ್ತಿಯಲ್ಲಿ ೬೦ ಜನ ನಕಲಿ ವೈದ್ಯರು, ಬೀಳಗಿ ಠಾಣೆ ವ್ಯಾಪ್ತಿಯಲ್ಲಿ ೩೯, ಮುಧೋಳ ಠಾಣೆ ವ್ಯಾಪ್ತಿಯಲ್ಲಿ ೩೭, ಕಲಾದಗಿ ಠಾಣೆ ವ್ಯಾಪ್ತಿಯಲ್ಲಿ ೨೯ ಹಾಗೂ ಜಿಲ್ಲೆಯಲ್ಲಿ

೫೦ ಕ್ಕೂ ಹೆಚ್ಚು ಬಿಎಎಂಎಸ್ ವೈದ್ಯರಿಂದ ಅಲೋಪಥಿ ಚಿಕಿತ್ಸೆ ನೀಡುತ್ತಿರುವುದು  ವರದಿಯಾಗಿದೆ.

ಈಗ ನಕಲಿ ವೈದ್ಯರ ಮೇಲೆ ದಾಳಿಯಾಗಿ ಎಫ್ ಐಆರ್ ದಾಖಲಾಗುವ ಸಾಧ್ಯತೆಯಿದೆ‌.