ಪ್ರೀತ್ಸೇ...ಪ್ರೀತ್ಸೇ... ಬೈಕ್‌ನಿಂದ ಜಿಗಿದ ಯುವತಿ 

ಪ್ರೀತ್ಸೇ...ಪ್ರೀತ್ಸೇ...  ಬೈಕ್‌ನಿಂದ ಜಿಗಿದ ಯುವತಿ 

  .  ಪ್ರೀತ್ಸೇ...ಪ್ರೀತ್ಸೇ...  ಬೈಕ್‌ನಿಂದ ಜಿಗಿದ ಯುವತಿ  .
ಬಾಗಲಕೋಟೆ : 
ಓರ್ವ ಯುವತಿಯನ್ನು ಬಲವಂತದಿ0ದ ಬೈಕ್ ಮೇಲೆ ಕೊಂಡೊಯ್ಯುತ್ತಿದ್ದ ಯುವಕನ ದುಸ್ಸಾಹಸ ವಿಫಲವಾಗು ಆತ ಬೈಕ್ ಮೇಲೆ ಪರಾರಿಯಾಗಿದ್ದಾನೆ.
 ಯುವತಿ ಸಾಕಷ್ಟು ಪ್ರತಿರೋಧ ಮಾಡುವ ಜೊತೆಗೆ ಯುವಕನಿಗೆ ಚಪ್ಪಲಿ ಸೇವೆಯನ್ನು ಬೈಕ್‌ನಿಂದಲೇ ಮಾಡಿದ್ದಾಳೆ. ಆದರೂ ಆತ ಬಸ್ ನಿಲ್ದಾಣದ ಮಾರ್ಗದಿಂದ ಕರೆದುಕೊಂಡು ಹೊರಟಾಗಿ ಮುಂದೆ ಅಲ್ಪ ದೂರದ ವೀರಮಣಿ ಭವನದ ಮುಂದೆ ಬೈಕ್ ಮೇಲಿಂದ ಈ ಯುವತಿ ಜಿಗಿದಿದ್ದಾಳೆ. ಈ ಘಟನೆಯನ್ನು ಕಂಡು ಸಾಕಷ್ಟು ಜನ ಅಲ್ಲಿ ನೆರೆದು ವಿಚಾರಿಸಿದರು. ಯುವತಿಗೆ ದೂರು ದಾಖಲಿಸು ಎಂದು ಹೇಳಿದರೂ ಅವಳು ಹಿಂದೆ ಮುಂದೆ ಮಾಡಿದಳಂv.ೆ ಇಬ್ಬರೂ ಸರಕಾರಿ ನೌಕರಿ  ಮಾಡುತ್ತಿದ್ದಾರೆ ಸುಮಾರು ನಾಲ್ಕು ವರ್ಷಗಳಿಂದ ಇದು ನಡೆಯುತ್ತಿದೆ ಎಂಬ ವಿಷಯ ತಿಳಿದುಬಂದಿದೆ. 
ಇಬ್ಬರಲ್ಲಿನ ಒಡನಾಟದಿಂದ ಆಗಾಗ ಇಂತಹ ಘಟನೆಗಳು ನಡೆಯುವ ಹಾಗೇ ಆಗಿದ್ದು ಇದೊಂದು ತಲೆನೋವಿನ ಸಂಗತಿಯಾಗಿದೆ ಎಂದು ಪೊಲೀಸ ಮೂಲಗಳು ತಿಳಿಸಿವೆ.