ಸಿಎಂ ಆಪ್ತ ಎಂದು ಹೇಳಿಕೊಂಡು ವ್ಯಕ್ತಿಯಿಂದ ಬಾಗಲಕೋಟೆ DHOಗೆ ಮೋಸ..?
ಬಾಗಲಕೋಟೆ:
ಸಿದ್ದರಾಮಯ್ಯ ಆಪ್ತ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಬಾಗಲಕೋಟೆ ಡಿಎಚ್ಒ ಜಯಶ್ರೀ ಎಮ್ಮಿ ಅವರಿಗೆ ೭ ಲಕ್ಷ ರೂ.ಗಳ ಪಂಗನಾಮ ಹಾಕಿರೋದು ವರದಿ ಆಗಿದೆ.
ಬಾಗಲಕೋಟೆ ಡಿಎಚ್ಒ ಹುದ್ದೆಗೆ ಡಾ.ಜಯಶ್ರೀ ಎಮ್ಮಿ ಹಾಗೂ ಡಾ.ರಾಜಕುಮಾರ ಯರಗಲ್ಲ ನಡುವೆ ಜಿದ್ದಾಜಿದ್ದಿ ನಡೆದಿತ್ತು.ಜಯಶ್ರೀ ಎಮ್ಮಿ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಕದ ತಟ್ಟಿದ್ದರು.
ನಂತರ ಅವರು ಹಿರಿಯ ಅಧಿಕಾರಿಗಳನ್ನು ವಿಧಾನಸೌಧದಲ್ಲಿ ಭೇಟಿ ಮಾಡಲು ತೆರಳಿದ ವೇಳೆ ತನ್ನ ಹೆಸರು ರಾಮಯ್ಯ ತಾನು ಕೆಎಎಸ್ ಅಧಿಕಾರಿಯಾಗಿದ್ದು, ೫೦ ಸಾವಿರ ರೂ. ನೀಡಿದರೆ ಹುದ್ದೆ ಸಂಬಂಧ ಉಂಟಾಗಿರುವ ವಿವಾದ ಸರಿಪಡಿಸುವ ಭರವಸೆ ನೀಡಿದ್ದಾರೆ ಅದರಂತೆ ಜಯಶ್ರೀ ಎಮ್ಮಿ ಅವರು ಹಣ ನೀಡಿದ್ದು, ಮುಂದೆ ಆತ ನಿರಂತರ ಸಂಪರ್ಕದಲ್ಲಿ ಇದ್ದಿದ್ದರಿಂದ ಒಟ್ಟು ೭ ಲಕ್ಷ ರೂ.ಗಳನ್ನು ನೀಡಿದ್ದಾರೆ.
ಈಗ ಜಯಶ್ರೀ ಎಮ್ಮಿ ಅವರ ದೂರು ಆಧರಿಸಿ ಬೆಂಗಳೂರಿನ ಸಿಸಿಬಿ ಪೊಲೀಸರು ಮೋಸ ಮಾಡಿದ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ ಎಂದು ವರದಿ ಆಗಿದೆ.
ಈ ಬಗ್ಗೆ ಪ್ರತಿಕ್ರಿಯೆ ಕೋರಲು ಡಾ.ಜಯಶ್ರೀ ಎಮ್ಮಿ ಅವರಿಗೆ ಕರೆ ಮಾಡಿದರೆ ಅವರು ಸಂಪರ್ಕಕ್ಕೆ ಲಭ್ಯವಾಗುತ್ತಿಲ್ಲ