ಕ್ಷಣಾರ್ಧದಲ್ಲಿ ಸುದ್ದಿ ನೀಡುವ ನಾಡನುಡಿ ನ್ಯೂಸ್ ಪೋರ್ಟಲ್ ಲೋಕಾರ್ಪಣೆ
ಡಿಜಿಟಲ್ ರೂಪದಲ್ಲಿ ತೆರೆದಿಕೊಂಡಿರುವ ನಾಡನುಡಿ ನ್ಯೂಸ್ ಪೋರ್ಟಲ್ ಅನ್ನು ಡಿಸಿಎಂ ಗೋವಿಂದ ಕಾರಜೋಳ, ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಲೋಕಾರ್ಪಣೆಗೊಳಿಸಿದರು.
ನಾಡನುಡಿ ನ್ಯೂಸ್
ಬಾಗಲಕೋಟೆ:
ಪತ್ರಿಕೋದ್ಯಮದಲ್ಲಿ ಸುದೀರ್ಘ ನಲವತ್ತು ವರ್ಷಗಳ ಅನುಭವ ಹೊಂದಿರುವ ನಾಡನುಡಿ ಇದೀಗ ಡಿಜಿಟಲ್ ಅವತರಣಿಕೆಯಲ್ಲಿ ಓದುಗರ ಕೈ ತಲುಪಲು ಅಣಿಯಾಗಿದ್ದು, ನೂತನ ವೆಬ್ ಸೈಟ್ ಅನ್ನು ಶನಿವಾರ ಸಂಜೆ ಡಿಸಿಎಂ ಗೋವಿಂದ ಕಾರಜೋಳ , ಶಾಸಕ ಡಾ.ವೀರಣ್ಣ ಚರಂತಿಮಠ ಲೋಕಾರ್ಪಣೆಗೊಳಿಸಿದರು.
ಅತ್ಯಾಕರ್ಷಕವಾಗಿರುವ ನೂತನ ವೆಬ್ ಸೈಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪತ್ರಿಕೆಯೊಂದು ಬದಲಾವಣೆಯಲ್ಲಿ ತೆರೆದುಕೊಳ್ಳುತ್ತಿರುವುದು ಉತ್ತಮ. ಅಪ್ಡೇಟ್ ಆಗದಿದ್ದರೆ ಔಟ್ ಡೇಟೆಡ್ ಆಗುತ್ತೆವೆ ಎಂಬ ಮಾತಿದೆ. ವಿಶ್ವಾರ್ಹ ಸುದ್ದಿಗಳ ಮೂಲಕ ಮನೆ ಮಾತಾಗಿರುವ ನಾಡನುಡಿ ಮತ್ತಷ್ಟು ಯಶಸ್ಸುಗಳಿಸಲಿ ಎಂದು ಹಾರೈಸಿದರು.
ಪತ್ರಿಕೆ ಸಂಪಾದಕ ರಾಮ ಮನಗೂಳಿ, ಭಾಸ್ಕರ ಮನಗೂಳಿ ಮತ್ತಿತರರು ಉಪಸ್ಥಿತರಿದ್ದರು.