ಜಮೀನು ವಿಚಾರಕ್ಕೆ ಹೊಡೆದಾಟ : ನಾಲ್ವರ ಕಗ್ಗೊಲೆ
ಜಮೀನು ವಿಚಾರವಾಗಿ ನಡೆದ ಎರಡು ಕುಟುಂಬಗಳ ನಡುವಿನ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ನಡೆದಿದ್ದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಒಂದು ಕುಟುಂಬದ ನಾಲ್ವರು ಕೊಲೆಯಾಗಿರುವ ಘಟನೆ ಜಮಖಂಡಿ ತಾಲೂಕಿನ ಮದರಖಂಡಿಯಲ್ಲಿ ನಡೆದಿದೆ.
ಜಮೀನು ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ವೈಮನಸ್ಸು ಉಂಟಾಗಿತ್ತು. ಇಂದು ಏಕಾಏಕಿಯಾಗಿ ಬಂದ ತಂಡ ಮದರಖಂಡಿಯ ಹನುಮಂತ(38), ಮಲ್ಲಪ್ಪ(44),ಈಶ್ವರ(40), ಬಸವರಾಜ (36) ಅವರನ್ನು ಕೊಲೆ ಮಾಡಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.