ಯುಕೆಪಿ ಭೂಸ್ವಾಧೀನ ಅಧಿಕಾರಿ ಬಂಧನಕ್ಕೆ ಕೋರ್ಟ್ ಸೂಚನೆ
ನಾಡನುಡಿ ನ್ಯೂಸ್
ಬಾಗಲಕೋಟೆ:
ಬಾಗಲಕೋಟೆ ಸಿಮೆಂಟ್ ಫ್ಯಾಕ್ಟರಿಗೆ ೧೦ ಕೋಟಿ ರೂ.ಗಳ ಪರಿಹಾರ ಧನ ವಿತರಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ ನವನಗರದ ಯುಕೆಪಿ ವಿಶೇಷ ಭೂಸ್ವಾಧೀನ ಅಧಿಕಾರಿ ಬಂಧನಕ್ಕೆ ನ್ಯಾಯಲಯ ವಾರೆಂಟ್ ಜಾರಿಗೊಳಿಸಲು ಆದೇಶಿಸಿದೆ.
ಪರಿಹಾರಧನ ವಿತರಣೆಗೆ ನ್ಯಾಯಾಲಯ ಹಲವು ಬಾರಿ ಆದೇಶಿಸಿದ್ದರೂ ಹಣ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಬಂಧಿಸುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಕಾರ್ಖಾನೆ ಪರ ವಕೀಲ ಕೆ.ಎಸ್.ದೇಶಪಾಂಡೆ ತಿಳಿಸಿದ್ದಾರೆ.