ಮುಂದವರಿದ ಪ್ರವಾಹದ ಅಟ್ಟಹಾಸ: ಐದು ವರ್ಷದ ಬಾಲಕಿ ಶವವಾಗಿ ಪತ್ತೆ 

ಮುಂದವರಿದ ಪ್ರವಾಹದ ಅಟ್ಟಹಾಸ: ಐದು ವರ್ಷದ ಬಾಲಕಿ ಶವವಾಗಿ ಪತ್ತೆ 

 
ಬಾಗಲಕೋಟೆ: 
ಜಿಲ್ಲೆಯಲ್ಲಿ ಕೃಷ್ಣಾ ನದಿಯಿಂದ ಉಂಟಾಗಿರುವ ಪ್ರವಾಹದಲ್ಲಿ ಜಮಖಂಡಿ ತಾಲೂಕಿನ ಆಲಗೂರಿನಲ್ಲಿ ರೈತನೋರ್ವ ನಾಪತ್ತೆಯಾಗಿರುವ ಪ್ರಕರಣದ ಬೆನ್ನಲ್ಲೇ ಅದೇ ತಾಲೂಕಿನ ಕಡಕೊಳದಲ್ಲಿ ಹಿನ್ನೀರಿನಲ್ಲಿ ನಾಪತ್ತೆಯಾಗಿದ್ದ ೫ ವರ್ಷದ ಬಾಲಿ ಶವವಾಗಿ ಪತ್ತೆಯಾಗಿದ್ದಾಳೆ. 
  ಸಮೃದ್ಧಿ ಸಿದ್ದಪ್ಪ ತಿಮ್ಮಪ್ಪನವರ(೫) ಮೃತ ಬಾಲಕಿ. ರವಿವಾರ ಬೆಳಗ್ಗೆ ೧೧ ಗಂಟೆಗೆ ಗ್ರಾಮದಲ್ಲಿ ಆವರಿಸಿದ್ದ ಹಿನ್ನೀರಿನ ಬಳಿ ಈಕೆ ಆಟ ಆಡುತ್ತ ತೆರಳಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಂತರ ಅಗ್ನಿ ಶಾಮಕದಳದ ಸಿಬ್ಬಂದಿ ಮುಳುಗು ತಜ್ಞರೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದರು. ಸಂಜೆ ೭ ಗಂಟೆಯವರೆಗೆ ಕಾರ್ಯಾಚರಣೆ ನಡೆಸಿದಾಗ ಬಾಲಕಿಯ ಮೃತದೇಹ ಸಿಕ್ಕಿದೆ. ಮೃತ ಸಮೃದ್ಧಿಯ ಕುಟುಂಬಸ್ಥರ ಆಕ್ರಂದ ಮುಗಿಲುಮುಟ್ಟಿದೆ. ಇಡೀ ಗ್ರಾಮ ಘಟನೆಯಿಂದಾಗಿ ದುಖ ಮಡುವಿನಲ್ಲಿ ಮುಳುಗಿದ್ದು, ಕುಟುಂಬಸ್ಥರ ಆಕ್ರಂದನ ಸಂಕಟ ಮೂಡಿಸುವಂತ್ತಿದೆ. ಜಮಖಂಡಿ ಗ್ರಾಮಾಂತರ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಇನ್ನೊಂದೆಡೆ ಆಲಗೂರಿನಲ್ಲಿ ಮೇವು ತರಲು ತೆರಳಿ ನಾಪತ್ತೆಯಾಗಿರುವ ೬೫ ವರ್ಷದ ರೈತ ಸಿದ್ದಪ್ಪ ಆಡೊಳ್ಳಿಗಾಗಿ ಹುಡುಕಾಟವೂ ತೀವ್ರಗೊಂಡಿದೆ.