ಅಕ್ರಮ ತಡೆಗೆ ಸಾರ್ವಜನಿಕರು ಕೈ ಜೋಡಿಸಿ

ಅಕ್ರಮ ತಡೆಗೆ ಸಾರ್ವಜನಿಕರು ಕೈ ಜೋಡಿಸಿ


ಬಾಗಲಕೋಟೆ : ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಚುನಾವಣಾ ಆಯೋಗವು ಸಿ-ವಿಜಿಲ್ ಎಂಬ (ಆ್ಯಪ್) ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದು, ಸಾರ್ವಜನಿಕರು ಯಾವುದೇ ರೀತಿಯ ಚುನಾವಣಾ ಅಕ್ರಮಗಳ ವಿಡಿಯೋ ಚಿತ್ರಿಕರಣ ಮತ್ತು ಛಾಯಾಚಿತ್ರಗಳನ್ನು ಆ್ಯಪ್ ಮೂಲಕ ಆಯೋಗದ ಗಮನಕ್ಕೆ ತರಬಹುದಾಗಿದೆ. 
ಚುನಾವಣಾ ಸಂದರ್ಭದಲ್ಲಿ ಓಟಿಗಾಗಿ ಅಕ್ರಮ ನಡೆಸುವವರ ವಿರುದ್ದ ಸಿವಿಜಿಲ್ ಆ್ಯಪ್‌ನಲ್ಲಿ ಫೋಟೋ ಮತ್ತು ವಿಡಿಯೋ ಅಪಲೋಡ್ ಮಾಡಿ ದೂರು ನೀಡಬಹುದಾಗಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈ ಆ್ಯಪ್ ಹೆಚ್ಚು ಅನುಕೂಲವಾಗಲಿದೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಯಾವುದೇ ರೀತಿಯ ಅಕ್ರಮದಲ್ಲಿ ತೊಡಗುವ ಜೊತೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳಲ್ಲಿ ತೊಡಗಿದ್ದಲ್ಲಿ ಇಂತಹ ಚಟುವಟಿಕೆ ನಿಯಂತ್ರಿಸಲು ಸಾರ್ವಜನಿಕರು ಅಕ್ರಮ ನಡೆಸುವವರ ವಿಡಿಯೋ ಮತ್ತು ಚಿತ್ರ ತೆಗೆದು ಅಪಲೋಡ್ ಮಾಡಿದಲ್ಲಿ ನೇರವಾಗಿ ಚುನಾವಣಾ ಆಯೋUವೇ ಕ್ರಮ ಕೈಗೊಳ್ಳಲಿದೆ.
ಸಾರ್ವಜನಿಕರು ತಮ್ಮ ಸ್ಮಾರ್ಟ್ ಫೋನ್‌ನ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸರ್ಚ ಮಾಡಿದಲ್ಲಿ ಈ ಆ್ಯಪ್ ಲಭ್ಯವಾಗಲಿದ್ದು ಇನ್‌ಸ್ಟಾಲ್ ಮಾಡಿ, ತಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಹಾಗೂ ಮತಕ್ಷೇತ್ರದ ಹೆಸರು ನಮೂದಿಸಿದರೆ ಸಾಕು ಆ್ಯಪ್‌ನಲ್ಲಿ ಯಾವುದೇ ರೀತಿಯ ಚುನಾವಣಾ ಸಂದರ್ಭದಲ್ಲಿ ನಡೆಯುವ ಅಕ್ರಮಗಳಿದ್ದಲ್ಲಿ ವಿಡಿಯೋ ಮತ್ತು ಛಾಯಾಚಿತ್ರವನ್ನು ಅಪಲೋಡ್ ಮಾಡಿಕೊಳ್ಳಬಹುದಾಗಿದ್ದು, ಈ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿರುತ್ತದೆ. 
ದಾಖಲಾದ ದೂರುಗಳಿಗೆ ತಕ್ಷಣ ಕ್ರಮ ಕೈಗೊಳ್ಳಲಿದ್ದು, ೧೦೦ ನಿಮಿಷದಲ್ಲಿಯೇ ಅಧಿಕಾರಿಗಳಿಂದ ಉತ್ತರ ಸಹ ಸಿಗಲಿದೆ. ಚುನಾವಣಾ ಅಕ್ರಮಗಳ ತಡೆಗೆ ಸಾರ್ವಜನಿಕರ ಬಳಕೆಗೆ ಈ ಆ್ಯಪ್ ಹೆಚ್ಚಿನ ಅನುಕೂಲವಾಗಲಿದ್ದು, ಯಾವುದೇ ರೀತಿಯ ಹಣ, ಮದ್ಯ, ಉಡುಗೊರೆಗೆ ಸಂಬAಧಪಟ್ಟAತೆ ಅಕ್ರಮ ಚಟುವಟಿಕೆಗಳು ನಡೆದಲ್ಲಿ ತಕ್ಷಣ ದೂರು ಸಲ್ಲಿಸಬಹುದಾಗಿದೆ. ದೂರು ಸಲ್ಲಿಸುವವರ ಹೆಸರನ್ನು ಗೌಪ್ಯವಾಗಿ ಸಹ ಇಡಲಾಗುತ್ತದೆ. ಸಿವಿಜಿಲ್ ಮೂಲಕ ದೂರು ಸ್ವೀಕರಿಸಲು ಚುನಾವಣಾ ಘೋಷಣೆಯಾದ ಮಾರ್ಚ ೧೬ ರಿಂದಲೇ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ. 

ಬಾಕ್ಸ್ 
ಪ್ರಾರಂಭದಿAದ ಇಲ್ಲಿಯವರೆಗೆ ಒಟ್ಟು ೧೨೯೯ ದೂರುಗಳು ದಾಖಲಾಗಿದ್ದು, ಈ ಪೈಕಿ ೧೨೯೨ ದೂರುಗಳಿಗೆ ಉತ್ತರ ಸಹ ನೀಡಲಾಗಿದೆ. ಪ್ರಾರಂಭದಲ್ಲಿ ದಿನಕ್ಕೆ ೭೦ ರಿಂದ ೮೦ ದೂರುಗಳು ಮಾತ್ರ ದಾಖಲಾಗುತ್ತಿದ್ದು, ಸದ್ಯ ೨ ನೂರಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತಿವೆ. ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸಲು ಮೂರು ಸರತಿಯಂತೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಪ್ರತಿ ಸರತಿಯಲ್ಲಿ ತಲಾ ಒಬ್ಬರಂತೆ ಮೇಲ್ವಿಚಾರಕ, ಐಟಿ ಸಿಬ್ಬಂದಿ, ಆಪರೇಟರ್ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕೇಂದ್ರಕ್ಕೆ ಓರ್ವ ನೋಡಲ್ ಅಧಿಕಾರಿಯನ್ನು ಸಹ ನೇಮಿಸಲಾಗಿದೆ.  
- ಅಮರೇಶ ನಾಯಕ, ಜಿ.ಪಂ ಉಪಕಾರ್ಯದರ್ಶಿ, ನಿಯಂತ್ರಣ ಕೋಶದ ನೋಡಲ್ ಅಧಿಕಾರಿ