ಜೂ.೨೮ರಿಂದ ಪಾರುನ ಹಾರಾಟ ಹನುಮನ ಚಲ್ಲಾಟ ನಾಟಕ ಪ್ರದರ್ಶನ
ಜೂ.೨೮ರಿಂದ ಪಾರುನ ಹಾರಾಟ ಹನುಮನ ಚಲ್ಲಾಟ ನಾಟಕ ಪ್ರದರ್ಶನ
ಬಾಗಲಕೋಟೆ: ಕಲ್ಲೂರ ಶ್ರೀಗುರು ಮಲ್ಲಿ ಕಾರ್ಜುನ ನಾಟ್ಯ ಸಂಘದಿ0ದ ಬಾಗಲಕೋಟೆ ನಗರದಲ್ಲಿ ಪ್ರಪ್ರಥಮ ಬಾರಿಗೆ ಪಾರುನ ಹಾರಾಟ ಹನುಮನ ಚಲ್ಲಾಟ ನಾಟಕ ಪ್ರದರ್ಶನ ಜೂ.೨೮ ರಿಂದ ಪ್ರಾರಂಭಗೊಳ್ಳಲಿದೆ ಎಂದು ನಾಟಕ ಕಂಪನಿ ಮಾಲಿಕ ಮಂಟೇಶ ದಂಡಿನ ತಿಳಿಸಿದರು.
ನವನಗರದ ಪತ್ರಿಕಾಭವನದಲ್ಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಸವೇಶ್ವರ ಸರ್ಕಲ್ ಬಳಿ ಇರುವ ದರ್ಬಾರ ಅವರ ಜಾಗೆಯಲ್ಲಿ ಪ್ರತಿದಿನ ಮಧ್ಯಾಹ್ನ ೨.೩೦ ಹಾಗೂ ಸಾಯಂಕಾಲ ೬.೩೦ ಕ್ಕೆ ನಾಟಕ ಪ್ರದರ್ಶನ ಆರಂಭಗೊಳ್ಳಲಿದ್ದು, ಈ ನಾಟಕವು ಸಂಸಾರ ಸಮೇತ ನೋಡುವಂತಹ ಫುಲ್ ಕಾಮಿಡಿ ನಾಟಕವಾಗಿದ್ದು, ಕಲಾಭಿಮಾನಿಗಳು ರಂಗಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಕಲಾವಿದರಿಗೆ ಪ್ರೋತ್ಸಾಹಿಸುವ ಮೂಲಕ ನಾಟಕವನ್ನು ನೋಡಬೇಕು ಎಂದು ಮನವಿ ಮಾಡಿಕೊಂಡರು.
ಉತ್ತರ ಕರ್ನಾಟಕದಲ್ಲಿ ರಂಗಭೂಮಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಕಲಾವಿದರ ಪ್ರೋತ್ಸಾಹವೇ ಸಾಕ್ಷಿಯಾಗಿದೆ. ಈ ಭಾಗದಲ್ಲಿ ನಾಟಕ ಕಂಪನಿಗಳು ಚನ್ನಾಗಿ ನಡೆದುಕೊಂಡು ಬರುತ್ತಿದ್ದು ಆ ಹಿನ್ನೆಲೆಯಲ್ಲಿ ನಮ್ಮ ಕಂಪನಿಯ ನಾಟಕ ನಗರಕ್ಕೆ ಬಂದಿದೆ.
ಈ ನಾಟಕದಲ್ಲಿ ಉತ್ತರ ಕರ್ನಾಟಕದ ಸೌಂದರ್ಯ ಬದಾಮಿ ಹಾಗೂ ಜ್ಯೂನಿಯರ್ ರಾಜು ತಾಳಿಕೋಟಿ ದಾವಲ್ ಅವರು ಹಾಸ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎ ಂದರು.
ಸುದ್ದಿಗೋಷ್ಠಿಯಲ್ಲಿ ವಿಜಯಶೇಖರ, ಸಂಜೀವ ಜೋಶಿ, ರುದ್ರೇಶ ಕೋಮಾಲಿ, ಸಾಗರ ಕಮತಗಿ, ಭರಮಪ್ಪ ಚಿಕ್ಕಕೊಪ್ಪ ಇದ್ದರು.
ಕೋಟ್..
ಇಂದಿನ ಕಂಪ್ಯೂಟರ ಹಾಗೂ ಇಂಟರನೆಟ್ ಯುಗದಲ್ಲಿ ನಾಟಕಗಳು ತೆರೆಗೆ ನಶಿಸಿ ಹೋಗುತ್ತಿದ್ದು ರಂಗಭೂಮಿ ಕಲಾವಿದರ ಬದುಕು ದು:ಸ್ಥರವಾಗಿದೆ. ೨೦ಕ್ಕೂ ಹೆಚ್ಚು ನಾಟಕ ಕಂಪನಿಗಳು ನಿರಂತರ ನಾಟಕ ಪ್ರದರ್ಶನ ಮಾಡುತ್ತಿದ್ದವು ಆದರೆ ಈಗ ಹತ್ತ ಕಂಪನಿಗಳು ಮಾತ್ರ ನಾಟಕ ಪ್ರದರ್ಶನ ಮಾಡುತ್ತಿವೆ. ನಶಿಸಿ ಹೋಗುವ ನಾಟಕ ಭೂಮಿಯನ್ನು ಉಳಿಸಬೇಕಾದರೆ ಕಲಾಪ್ರೇಮಿಗಳ ಕೈಯಲ್ಲಿದೆ.