ಉರಗ ತಜ್ಞ ಡ್ಯಾನಿಯಲ್ ನ್ಯೂಟನ್ ಹಾವು ಕಡಿತದಿಂದ ಸಾವು

ಉರಗ ತಜ್ಞ ಡ್ಯಾನಿ‌ ಹಾವು ಕಡಿತದಿಂದ ಮೃತಪಟ್ಟಿದ್ದಾರೆ.

ಉರಗ ತಜ್ಞ ಡ್ಯಾನಿಯಲ್ ನ್ಯೂಟನ್ ಹಾವು ಕಡಿತದಿಂದ ಸಾವು

ನಾಡನುಡಿ ನ್ಯೂಸ್

ಬಾಗಲಕೋಟೆ: 
ತುರ್ತು ಸಂದರ್ಭದಲ್ಲಿ ಯಾವುದೇ ಫಲಾಪೇಕ್ಷೆಯೂ ಇಲ್ಲದೆ ಹಾಜರಾಗಿ ಉರಗಗಳನ್ನು ಸಂರಕ್ಷಿಸುತ್ತಿದ್ದ ಡ್ಯಾನಿಯಲ್ ನ್ಯೂಟ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗಷ್ಟೇ ಪ್ರೀತಿಸಿದ್ದ ಹುಡುಗಿಯನ್ನು ವರಸಿದ್ದ ಅವರು ನೆಮ್ಮದಿಯ ದಾಂಪತ್ಯ ಜೀವನ ಸಾಗಿಸುತ್ತಿದ್ದರು.

ಮಂಗಳವಾರ ಬೆಳಗ್ಗೆ ಹಾವು ಹಿಡಿಯುವ ಸಂದರ್ಭದಲ್ಲಿ ಅವರನ್ನು ಕಚ್ಚಿ‌ ಗಾಯಗೊಳಿಸಿತ್ತು. 

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕರೆತರುವ ವೇಳೆ ಅವರು ಮಂಗಳವಾರ ಮಧ್ಯಾಹ್ನ ೧೨ ಗಂಟೆಗೆ ನಿಧನ ಹೊಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ನಾಡನುಡಿಗೆ ಖಚಿತ ಪಡಿಸಿವೆ.