ಬಸವೇಶ್ವರ ಬ್ಯಾಂಕ್ ಗೆ ೩.೫೦ ಕೋಟಿ ರೂ. ನಿವ್ವಳ ಲಾಭ: ಪ್ರಕಾಶ ತಪಶೆಟ್ಟಿ

ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ಬ್ಯಾಂಕ್ ಇನ್ನು‌ ಮುಂದೆ ಯುಪಿಐ ಆ್ಯಪ್ ಗಳಲ್ಲೂ ಲಭ್ಯವಾಗಲಿದೆ.

ಬಸವೇಶ್ವರ ಬ್ಯಾಂಕ್ ಗೆ ೩.೫೦ ಕೋಟಿ ರೂ. ನಿವ್ವಳ  ಲಾಭ: ಪ್ರಕಾಶ ತಪಶೆಟ್ಟಿ

ನಾಡನುಡಿ ನ್ಯೂಸ್
ಬಾಗಲಕೋಟೆ:
ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘ ೨೦೧೯-೨೦ನೇ ಸಾಲಿನ 3.50 ಕೋಟಿ ರೂ.ಗಳ  ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ತಿಳಿಸಿದ್ದಾರೆ.

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ಮಧ್ಯೆಯೂ ಬ್ಯಾಂಕ್ ಅತ್ಯುತ್ತಮ ಸಾಧನೆ ತೋರಿದೆ. ಇದಕ್ಕೆ ಸದಸ್ಯರು, ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ತಿಳಿಸಿದರು.

ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಪ್ರಗತಿ ಪಥದಲ್ಲಿ ಸಾಗುತ್ತಿದೆ. ೧೯೮೪ರಲ್ಲಿ ಬ್ಯಾಂಕಿಗೆ 3349 ಸದಸ್ಯರಿದ್ದರು, ಈಗ ಸದಸ್ಯರ ಸಂಖ್ಯೆ 42543ಕ್ಕೆ ಹೆಚ್ಚಳಗೊಂಡಿದೆ ಎಂದರು.

ಬ್ಯಾಂಕ್ ಈಗಾಗಲೇ ಡಿಜಿಟಲ್ ನಲ್ಲೂ ಸಾಕಷ್ಟು ಮುಂದುವರದಿದ್ದು ಈಗ ಯುಪಿಐಗೆ ಸೇರ್ಪಡೆಗೊಂಡಿದೆ ಬ್ಯಾಂಕ್ ಗ್ರಾಹಕರಿಗೆ ಫೋನ್ ಪೇ, ಗೂಗಲ್ ಪೇ ಆ್ಯಪ್ ನಲ್ಲೂ ಬ್ಯಾಂಕ್ ಸೇವೆ ದೊರೆಯಲಿದೆ ಎಂದರು.