ಬಾಕಿ ಬಿಲ್ ವಿಚಾರ: ನಿರ್ಮಿತಿ ಕೇಂದ್ರದ ನಿರ್ದೇಶಕರ ಅಪಹರಣಕ್ಕೆ ಯತ್ನ..!

ಮರಳು ಪೂರೈಸಿದ ಬಿಲ್ ಗೆ ಸಂಬಂಧಿಸಿದ ವಿಚಾರಕ್ಕೆ ಅಧಿಕಾರಿಯ ಅಪಹರಣಕ್ಕೆ ಯತ್ನಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಕಿ ಬಿಲ್ ವಿಚಾರ: ನಿರ್ಮಿತಿ ಕೇಂದ್ರದ ನಿರ್ದೇಶಕರ ಅಪಹರಣಕ್ಕೆ ಯತ್ನ..!

ನಾಡನುಡಿ ನ್ಯೂಸ್
ಬಾಗಲಕೋಟೆ:
ವಿದ್ಯಾಗಿರಿಯಲ್ಲಿರುವ ನಿರ್ಮಿತಿ ಕೇಂದ್ರದ ನಿರ್ದೇಶಕ ಶಂಕರಲಿಂಗ ಗೋಗಿ ಅವರನ್ನು  ಅಪಹರಣಕ್ಕೆ ಯತ್ನಿಸಿರುವ ಘಟನೆ ನಡೆದಿದೆ.

೮ ವರ್ಷಗಳ ಹಿಂದಿನ ಮರಳು ಪೂರೈಕೆಗೆ ಸಂಬಂಧಿಸಿದ ೩೫ ಲಕ್ಷ ರೂ.ಗಳ ಬಾಕಿ ಬಿಲ್ ಗೆ ಸಂಬಂಧಿಸಿದಂತೆ ಆರೋಪಿಗಳು ನನ್ನ ಅಪಹರಿಸಲು ಯತ್ನಿಸಿದ್ದಾರೆ ಎಂದು ನವನಗರ ಠಾಣೆಗೆ ಶಂಕರಲಿಂಗ ಗೋಗಿ ದೂರು ದಾಖಲಿಸಿದ್ದಾರೆ.

ಈರಣ್ಣ ಅಂಬಿಗೇರ ಸೇರಿ ಮೂವರ ವಿರುದ್ಧ ಶಂಕರಲಿಂಗ ಗೋಗಿ ದೂರು ದಾಖಲಿಸಿದ್ದು  ಇತ್ತೀಚೆಗಷ್ಟೇ ಅಮಾನತುಗೊಂಡಿರುವ ಪೊಲೀಸ್ ಪೇದೆಯೂ ಇದರಲ್ಲಿ ಶಾಮೀಲಾಗಿದ್ದಾನೆ ಎನ್ನಲಾಗಿದೆ.

ಮನೆಯಿಂದ ವಿದ್ಯಾಗಿರಿಯಲ್ಲಿರುವ ತಮ್ಮ ಕಾರಿನಲ್ಲಿ ಕಚೇರಿಗೆ ಗೋಗಿ ಹೊರಟಾಗ ಇನೋವಾ ಕಾರಿನಲ್ಲಿ ಬಂದ ಆರೋಪಿಗಳು ಅವರನ್ನು ಅಡ್ಡಗಟ್ಟಿದ್ದು, ಅವರನ್ನು ಅಪಹರಿಸಲು ಪ್ರಯತ್ನಿಸಿದ್ದಾರೆ ಈ ಸಂದರ್ಭದಲ್ಲಿ ಗೋಗಿ ಅವರ ಚಾಲಕ ತೋರಿದ ಧರ್ಯದಿಂದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಗೋಗಿ ತಿಳಿಸಿದ್ದಾರೆ.

ನಾನೊಬ್ಬ ಹಿರಿಯ ಅಧಿಕಾರಿಯಾಗಿದ್ದು, ಮರಳು ಪೂರೈಕೆ ಸೇರಿದಂತೆ ಇತರ ವಿಚಾರಗಳು ಕೆಳಸ್ತರದ ಅಧಿಕಾರಿಗಳಿಗೆ ಸಂಬಂಧಿಸಿದಾಗಿರುತ್ತದೆ. ಇಷ್ಟಾಗಿಯೂ ಆರೋಪಿಗಳು ಹೇಳುವಂತೆ ನಿರ್ಮಿತಿ ಕೇಂದ್ರದಲ್ಲಿ ಅವರಿಗೆ ಪಾವತಿಸಬೇಕಾದ ಯಾವ ಬಾಕಿಯೂ ಉಳಿದಿಲ್ಲ. ೮ ವರ್ಷದಿಂದ ಬಾಕಿ ಇದೆ ಎಂದು ಆರೋಪಿಗಳು ಹೇಳುತ್ತಿದ್ದಾರೆ.  ಪರಿಶೀಲಿಸಿದಾಗ  ಬಾಕಿ ಇರುವ ಬಗ್ಗೆ ಯಾವುದೇ ದಾಖಲೆಗಳು ಲಭಿಸಿಲ್ಲ ಎಂದು ಗೋಗಿ ತಿಳಿಸಿದ್ದಾರೆ.