ವೀರಣ್ಣ ಚರಂತಿಮಠ ಪರ ಸಚಿನ್ ಹೊಕ್ರಾಣಿ ಮತಯಾಚನೆ
ಬಾಗಲಕೋಟೆ: ಡಾ.ವೀರಣ್ಣ ಚರಂತಿಮಠ ಅವರು ನಗರದ ಆನಂದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರದ ವಿಜಯದ ಪಾದಯಾತ್ರೆಯನ್ನು ಪ್ರಾರಂಭಿಸಿದರು.
ನಗರದ 6 ಮತ್ತು 8 ನೇ ವಾರ್ಡಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆ ತೆರಳಿ ಮತಯಾಚನೆ ಮಾಡಿದರು.
ಪಾದಯಾತ್ರೆ ಉದ್ದಕ್ಕೂ ಬಾರಿ ಜನ ಬೆಂಬಲ ವ್ಯಕ್ತವಾಯಿತು.
ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರಿಗೆ ಪುಷ್ಪ ಮಳೆಯ ಸ್ವಾಗತ ದೊರೆಯಿತು.
ನಗರದ ಮನೆ ಮನೆಗಳಲ್ಲಿ ಮಹಿಳೆಯರಿಂದ ಹೂವಿನ ಹಾರ ಹಾಕಿ ಆರತಿ ಮಾಡಿ ವಿಜಯಶಾಲಿಯಾಗಲೆಂದು ಹರಸಿದರು.
ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ,
ಬೂಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ,ನಗಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಸದಸ್ಯರಾದ ರತ್ನಾ ಕೆರೂರ, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ವಾರ್ಡಿನ ಹಿರಿಯರಾದ ಮಲ್ಲಪ್ಪ ಡಾವನಗೇರಿ,ಈರಷ್ಣ ಕಲಬುರಗಿ, ರಾಜು ಅಕ್ಕಿ,ಮಹೇಶ ಕಮತಗಿ,ಶಂಕ್ರಯ್ಯ ಉಕ್ಕಲಿಮಠ,ಈರಣ್ಣ ಕಲ್ಯಾಣಿ ಸರ, ಪರಶುರಾಮ ಡಾವಣಗೆರೆ, ಶಂಕರ ಸಗರ,
ಗುರು ಹೊದ್ಲೂರ, ಮಲ್ಲಪ್ಪ ಅಂಕಲಗಿ, ಈಶ್ವರ ಮುಗಳೊಳ್ಳಿ, ಬಸವರಾಜ ಹುನಗುಂದ, ಮಹೇಶ ಅಂಗಡಿ, ವಿಜು ಅಂಗಡಿ, ಶರಣಪ್ಪ ಕೆರೂರ, ಪರಮೇಶ್ವರ ಮದ್ದೂರ, ಈರಪ್ಪ ಕಳಶ, ಅಶೋಕಪ್ರಬುಗೋಳ,ಈರಣ್ಣ ಕಲ್ಯಾಣ ಶೆಟ್ಟಿ,ರವಿ ಪಟ್ಡಣದ,ಪಂಡಿತ ಆರಾದ್ಯ,ಬಾಳು ಸೋರಟೂರ,ದ್ಯಾಮಪ್ಪಣ್ಣ ರಾಕುಂಪಿ,ಸಂಗಣ್ಣ ಅಂಬಿಗೇರ,ನಾಗಪ್ಪ ವಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.