ಅಯೋಧ್ಯೆ ಆಯ್ತು: ಕಾಶಿ, ಮಥುರಾ ನಮ್ಮ ಮುಂದಿನ ಗುರಿ: ವೀರಣ್ಣ ಚರಂತಿಮಠ

ರಾಮ ಮಂದಿರದ ನಂತರ ಕಾಶಿ, ಮಥುರಾ ಹೋರಾಟಗಳು ಕಣ್ಣ ಮುಂದೆ ಇದ್ದು, ಅದು ಕೂಡ ಮುಂದಿನ ಗುರಿ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದ್ದಾರೆ

ಅಯೋಧ್ಯೆ ಆಯ್ತು: ಕಾಶಿ, ಮಥುರಾ ನಮ್ಮ ಮುಂದಿನ ಗುರಿ: ವೀರಣ್ಣ ಚರಂತಿಮಠ

ಬಾಗಲಕೋಟೆ: ಭಾರತೀಯ ಜನತಾ ಪಾರ್ಟಿಯ ಅಸಂಖ್ಯಾತ ಕಾರ್ಯಕರ್ತರ ಹೋರಾಟದ ಫಲ ಇಂದು ಅಯೋಧ್ಯೆ ಶ್ರೀ ರಾಮ ಮಂದಿರ ನಾಡಿಗೆ ಮುಕ್ತವಾಗಿದೆ,ಮುಂದೆ ಕಾಶಿ,ಮಥುರಾ ಕೂಡಾ ಮುಕ್ತವಾಗಲಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಅಯೋದ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಟಾಪನೆ ನಿಮಿತ್ಯ ಶುಕ್ರವಾರ ವಿದ್ಯಾಗಿರಿಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ವಿಧಾನಸಭಾ ಮತಕ್ಷೇತ್ರ ಬಾಗಲಕೋಟೆ ವತಿಯಿಂದ ಹಮ್ಮಿಕೊಂಡ 108 ದಂಪತಿಗಳಿಂದ ಸಾಮೂಹಿಕ ಶ್ರೀರಾಮನಾಮ ತಾರಕ ಹೋಮದಲ್ಲಿ ಪಾಲ್ಗೋಂಡು ಶ್ರೀರಾಮನಿಗೆ 108 ನಾಮಾವಳಿ ಮೂಲಕ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಹೋಮಕ್ಕೆ ಚಾಲನೆ ನೀಡಿ ಮಾತನಾಡಿದರು.
 ಇದೆ ದಿನಾಂಕ 22ರಂದು ಅಯೋಧ್ಯಯಲ್ಲಿ ನಡೆಯುವ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ದೇಶ ವಿದೇಶಗಳಲ್ಲಿ ಪೂಜಾ ಕೈಂಕರ್ಯಗಳು ಜರುಗುತ್ತಿದ್ದು, ಅಯೋದ್ಯಯಲ್ಲಿ ಇಂದು 25 ಸಾವಿರ ಹೋಮ ಕುಂಡದಲ್ಲಿ ಶ್ರೀರಾಮನಾಮ ತಾರಕ ಹೋಮ ನಡೆಯುವ ಶುಭ ಸಂಧರ್ಭದಲ್ಲಿ ಬಾಗಲಕೋಟೆಯಲ್ಲಿಯೂ ನಮ್ಮೆಲ್ಲ ಕಾರ್ಯಕರ್ತರ ಉತ್ಸಾಹದಿಂದ 108 ಹೋಮ ಕುಂಡಗಳಲ್ಲಿ ಸಕಲ ಸಮಾಜದ 108 ದಂಪತಿಗಳಿಂದ ಶ್ರೀರಾಮ ನಾಮ ತಾರಕ ಹೋಮ ಯಶಸ್ವಿಯಾಗಿದೆ, ದೇಶದಲ್ಲಿ ಶ್ರೀರಾಮ ಮಂದಿರ ಇದಿಗ ಮುಕ್ತವಾಗಿದ್ದು ಇದೆ ರಿತಿಯಲ್ಲಿ ಕಾಶಿ,ಮಥುರಾ ಕೂಡಾ ಮುಂದಿನ ದಿನಮಾನದಲ್ಲಿ ಮುಕ್ತವಾಗಲಿ ಎಂದ ಅವರು ಪ್ರಧಾನಿ ನರೇಂದ್ರ ಮೋದಿಯವರು ಸಮುದ್ರ ಸ್ನಾನದ ಜೋತೆಗೆ 11 ದಿನಗಳ ಕಠಿಣ ಉಪವಾಸ ವೃತ ಕೈಗೊಂಡು ದೇಶದ ಪ್ರಮುಖ ದೇವಸ್ಥಾನಗಳ ಬೇಟಿ ನಿಡುತ್ತಿದ್ದು 22ರಂದು ಅಯೋದ್ಯಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಪಾಲ್ಗೋಳ್ಳಲಿದ್ದಾರೆ, ಅವರಿಗೆ ಭಗವಂತ ಇನ್ನು ಹೆಚ್ಚಿನ ಆಯು ಆರೋಗ್ಯ ದಯಪಾಲಿಸಲಿ, ಇನ್ನು ಹೆಚ್ಚು ಕಾಲ ಭಾರತದ ಪ್ರಧಾನಿಯಾಗಿ ದೇಶವನ್ನು ಮುನ್ನೆಡಸಲಿ ಎಂದರು, ಅಲ್ಲದೆ 22 ರಂದು ಎಲ್ಲರೂ ದೇವಸ್ಥಾನಗಳಲ್ಲಿ ಬೇಳಗ್ಗೆ ವಿಶೇ಼ ಪೂಜೆ, ಭಜನೆ, ಪ್ರಾರ್ಥನೆಗಳನ್ನು ಸಲ್ಲಿಸಿ, ಮನೆಯಲ್ಲಿ ಹಬ್ಬದ ವಾತವರಣದಂತೆ ಸಿಹಿ ಪದಾರ್ಥಗಳನ್ನು ಮಾಡ ಬೇಕು, ಸಂಜೆ ದೀಪಾವಳಿಯ ಆಚರಣೆಯಂತೆ ಮನೆ ಮುಂದೆ 5 ದೀಪಗಳನ್ನು ಬೇಳಗುವ ಮೂಲಕ ಶ್ರೀರಾಮನ ದೀಪೋತ್ಸವವದಲ್ಲಿ ಪಾಲ್ಗೋಳ್ಳಬೇಕೆಂದರು.
ಶ್ರೀರಾಮ ನಾಮ ತಾರಕ ಹೋಮ ನೇತೃತ್ವ ವಹಿಸಿದ ಪಂಡಿತೋತ್ತಮ ಬಿಂಧುಮಾದವಾಚಾರ್ಯ ನಾಗಸಂಪಿಗೆ ಮಾತನಾಡಿ ಸಕಲ ಸಮುದಾಯದ  ಭಕ್ತರ ಉಪಾಸಕ ಶ್ರೀರಾಮಚಂದ್ರ ಪ್ರಭು ಎಲ್ಲರಿಗೂ ಅದರ್ಶವಾಗಿದ್ದು, ಅಯೋದ್ಯಯಲ್ಲಿ 500 ವರ್ಷಗಳ ನಂತರ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡಯುತ್ತಿರುವುದು ದೈವ ಸಂಕಲ್ಪವಾಗಿದೆ, ಭಕ್ತರ ಸ್ವರೂಪದಲ್ಲಿ ಶ್ರೀ ಆಂಜನೆಯ ಇಂದು ಶ್ರೀರಾಮ ಎಲ್ಲ ಪೂಜಾ ಕಾರ್ಯಗಳಲ್ಲಿ ಪಾಲ್ಘೋಂಡಿದ್ದಾನೆ ಎಂದರು, 22ರಂದು ಎಲ್ಲ ಗ್ರಾಮೀಣ ನಗರದ ಎಲ್ಲ ದೇವಸ್ಥಾನಗಳ್ಳಿ ವಿಶೇಷ ಪೂಜಾ ಕಾರ್ಯಗಳು ದೀಪಾವಳಿಯ ಹಬ್ಬದಂತೆ ಆಚರಿಸಲಾಗುತ್ತಿದೆ ಎಂದರು.