ಹಬ್ಬಗಳು ಉಳಿದರೆ ಸಂಸ್ಕೃತಿ ಗಟ್ಟಿಯಾಗಲು ಸಾಧ್ಯ: ಶ್ರೀಸದಾಶಿವಾನಂದಶ್ರೀ

ಹಬ್ಬಗಳು ಉಳಿದರೆ ಸಂಸ್ಕೃತಿ ಗಟ್ಟಿಯಾಗಲು ಸಾಧ್ಯ: ಶ್ರೀಸದಾಶಿವಾನಂದಶ್ರೀ


ಬಾಗಲಕೋಟೆ: ಹಬ್ಬಗಳು ಗಟ್ಟಿಯಾಗಿ ಉಳಿದರೆ ಮಾತ್ರವೇ ಸಂಸ್ಕೃತಿಯೂ ಗಟ್ಟಿಯಾಗಿ ಉಳಿಯಲಿದೆ ಎಂದು ಗದುಗಿನ ಶ್ರೀಶಿವಾನಂದ ಬೃಹನ್ಮಠದ ಶ್ರೀಸದಾಶಿವಾನಂದ ಸ್ವಾಮೀಜಿ ಹೇಳಿದ್ದಾರೆ. 
 ಸಾರ್ವಜನಿಕ ಶ್ರೀಗಣೇಶ ಉತ್ಸವ ಆಚರಣೆಯ ಉದ್ದೇಶ ಮತ್ತು ಮಹತ್ವ ಕುರಿತು ಹಿಂದೂ ಜಾಗರಣ ವೇದಿಕೆ ನಗರದ ಬಸವೇಶ್ವರ ಕಲಾಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. 
 ಭಾರತಕ್ಕೆ ಸ್ವಾತಂತ್ರö್ಯ ತಂದುಕೊಟ್ಟ ದೇವರು ಇದ್ದರೆ ಅದು ಗಣಪತಿ. ಬಾಲಗಂಗಾಧರ ತಿಲಕರ ಪ್ರಯತ್ನದ ಫಲವಾಗಿ ಸಾರ್ವಜನಿಕ ಮಂಡಳಿಗಳು ಆರಂಭಗೊAಡು ಸ್ವಾತಂತ್ರö್ಯ ಚಳವಳಿಗೆ ಹೊಸಸ್ಪರ್ಶ ಸಿಕ್ಕಿತು. ನಮ್ಮಲ್ಲಿರು ಜಾತಿ, ಮತ, ಪಂಥಗಳು ಕಣ್ಮರೆಯಾಗಿ ಒಂದೇ ಧ್ವಜದ ಅಡಿ ನಮಗೆ ಒಂದಾಗಲು ಸಾಧ್ಯವಿದ್ದರೆ ಅದು ಗಣೇಶೋತ್ಸವದಿಂದ ಮಾತ್ರ ಎಂದು ಹೇಳಿದರು. 
 ಸಾವರ್ಕರ್‌ನ್ನು ಓದಿಕೊಂಡ ನಾವುಗಳು ಶಕ್ತಿ ಆರಾಧಕರಾಗಬೇಕು. ಗಣಪತಿ ನಂತರ ಸುಮ್ಮನಾಗದೆ ನವರಾತ್ರಿಯಲ್ಲಿ ೯ ದಿನಗಳ ಧರ್ಮಾಚರಣೆ ಮಾಡಬೇಕು. ಗಣೇಶೋತ್ಸವಕ್ಕೆ ಅದರದೆಯಾದ ಮಹತ್ವವಿದೆ. ಹಬ್ಬಗಳು ಉಳಿದಾಗ ಮಾತ್ರವೇ ಸನಾತನ ಸಂಸ್ಕೃತಿ ಗಟ್ಟಿಯಾಗಿ ಬೇರೂರಲಿದೆ ಎಂದು ಹೇಳಿದರು. 
 ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ ಯುವವಾಹಿನಿ ಪ್ರಮುಖ ಕುಮಾರಸ್ವಾಮಿ ಹಿರೇಮಠ, ಅಂಬಿಗರ ಸೇವಾ ಸಂಘದ ತಾಲೂಕಾಧ್ಯಕ್ಷ ರಾಮಣ್ಣ ರಾಜಪ್ಪ ರಾಮೋಡಗಿ, ಸಂಕಲ್ಪ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಭಾಸ್ಕರ ಶ್ರೀನಿವಾಸ ಮನಗೂಳಿ ಮತ್ತಿತರರು ಇದ್ದರು.