ಗುಳೇದಗುಡ್ಡ ಗಲಭೆಗೆ ಸಂಚು: ಪ್ರಕರಣದ ಎಲ್ಲ ಆರೋಪಿಗಳ ಬಂಧನಕ್ಕೆ ಆಗ್ರಹ 

ಗುಳೇದಗುಡ್ಡ ಗಲಭೆಗೆ ಸಂಚು: ಪ್ರಕರಣದ ಎಲ್ಲ ಆರೋಪಿಗಳ ಬಂಧನಕ್ಕೆ ಆಗ್ರಹ 
ಬಾಗಲಕೋಟೆಗುಳೇದಗುಡ್ಡ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸುವAತೆ ಒತ್ತಾಯಿಸಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತ ಭವನ, ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
ಮುಖಂಡರಾದ ಮಹೇಶ ಹೊಸಗೌಡರ, ಸಂಜಯ ಬರಗುಂಡಿ ಅವರ ನೇತೃತ್ವದಲ್ಲಿ ಆಗಮಿಸಿದ್ದ ನೂರಾರು ಕಾರ್ಯಕರ್ತರು ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳು, ಪ್ರಕರಣದ ಹಿಂದಿನ ರೂವಾರಿಯನ್ನು ಬಂಧಿಸಬೇಕೆAದು ಒತ್ತಾಯಿಸಿದರು. ಸಚಿವ ಆರ್.ಬಿ.ತಿಮ್ಮಾಪೂರ, ಎಸ್‌ಪಿ ವೈ.ಅಮರನಾಥ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. 
ಆ.೩೦ರಂದು ಗುಳೇದಗುಡ್ಡ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಎ ಚುನಾವಣೆ ಸಂದರ್ಭದಲ್ಲಿ ಬಾಗಲಕೋಟೆ ನಗರದಿಂದ ಗೂಂಡಾಗಳನ್ನು ಕರೆಯಿಸಿ ವಾಹನಗಳಲ್ಲಿ ಮಾರಕಾಸ್ತçಗಳನ್ನು ಸಂಗ್ರಹ ಮಾಡಿಕೊಂಡು ಗಲಭೆ ಸೃಷ್ಟಿ ಮಾಡುವ ಹುನ್ನಾರ ನಡೆದಿತ್ತು. ಪೊಲೀಸರ ಸಸಮಯ ಪ್ರಜ್ಞೆಯಿಂದ ನಾಲ್ಕು ಜನರು ಸಿಕ್ಕಿಬಿದ್ದಿದ್ದು, ಇನ್ನುಳಿದ ನಾಲ್ವರು ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವಾಹನ ಮಾಲೀಕರು ಸಹ ಸ್ಥಳದಲ್ಲಿ ಹಾಜರಿದ್ದರೂ ಅವರ ಬಂಧನವಾಗಿ ಕೂಡಲೇ ಅವರನ್ನು ಬಂಧಿಸಬೇಕೆAದು ಆಗ್ರಹಿಸಿದರು. 
ಚುನಾವಣೆ ಸಂದರ್ಭದಲ್ಲಿ ಸಮಾಜಘಾತಕ ರೌಡಿಗಳನ್ನು ಕರೆಯಿಸಿದವರು ಯಾರು, ಈ ರೌಡಿಗಳ ಹಿಂದಿರುವ ಪ್ರಭಾವಿ ವ್ಯಕ್ತಿಗಳು ಯಾರು ಹಾಗೂ ಶಾಂತಿ ಸುವ್ಯವಸ್ಥೆಯಿಂದ ಇರುವ ಗುಳೇದಗುಡ್ಡ ಪಟ್ಟಣ್ಣ ಭಯಾನ ವಾತಾವರಣ ಸೃಷ್ಟಿಸಲು ಲಾಂಗು, ಮಚ್ಚು, ತಲ್ವಾರ್, ಡ್ರಾö್ಯಗನ್ ತರಿಸಿದ ಪ್ರಭಾವಿ ವ್ಯಕ್ತಿ ಯಾರೆಂಬುದು ಬಹಿರಂಗಗೊಳ್ಳಬೇಕೆAದು ಒತ್ತಾಯಿಸಿದರು. 
ಅಪ್ಪಣವರ ಹಣಮಂತ, ಪಾಂಡು ಕಟ್ಟಿಮನಿ, ಭೀಮಶಿ ಕಮ್ಮಾರ, ಮಂಜು ಹೊಸಮನಿ, ವೈ.ಆರ್.ಹೆಬ್ಬಳ್ಳಿ, ಬಾಲಪ್ಪ ನಂದೆಪ್ಪನವರ ಇತರರು ನೇತೃತ್ವ ವಹಿಸಿದ್ದರು.