ರಾಮಣ್ಣ ತಳೇವಾಡ ಉಚ್ಛಾಟನೆ: ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ
ಬಾಗಲಕೋಟೆ:ಬಿಡಿಸಿಸಿ ಬ್ಯಾಂಕ್ ನಿರ್ದೇಶಕ, ಮುಧೋಳದ ಬಿಜೆಪಿ ನಾಯಕ ರಾಮಣ್ಣ ತಳೇವಾಡ ಉಚ್ಛಾಟಣೆ ಪ್ರಶ್ನೆಸಿಸಿ ನೂರಾರು ಸಂಖ್ಯೆ ಜನ ನವನಗರದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಮುಧೋಳದಿಂದ ೫೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿರುವ ಜನ ಪಕ್ಷ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ ಅವರಿಗೆ ಉಚ್ಛಾಟಣೆಗೆ ಕಾರಣ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಬಿಜೆಪಿ ವಿಭಾಗ ಪ್ರಭಾರಿ ಬಸವರಾಜ ಯಂಕಂಚಿ ಮತ್ತಿತರರು ಇದ್ದಾರೆ.