ನಿಲ್ಲದ ಬಸ್ : ವಿದ್ಯಾರ್ಥಿಗಳ ಪ್ರತಿಭಟನೆ
ಬಾಗಲಕೋಟೆ: ಬಸ್ ನಿಲುಗಡೆಗೆ ಒತ್ತಾಯಿಸಿ ತಾಲೂಕಿನ ತಿಮ್ಮಾಪೂರ ಗ್ರಾಮದ ಬಳಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ. ಈ ವೇಳೆ ಅಸಭ್ಯ ವರ್ತನೆ ತೋರಿದ ಪ್ರಯಾಣಿಕನೋರ್ವನನ್ನು ಥಳಿಸಿರುವ ಬಗ್ಗೆ ದೂರು ಕೇಳಿ ಬಂದಿದೆ.
ತಿಮ್ಮಾಪೂರ ಬಳಿ ಲಕ್ಷಿö್ಮÃ ದೇವಸ್ಥಾನದ ಬಳಿ ದಿಢೀರ್ ರಸ್ತೆ ತಡೆದು ಪ್ರತಿಭಟಿಸಿರುವ ವಿದ್ಯಾರ್ಥಿಗಳು ತಿಮ್ಮಾಪೂರ ಗ್ರಾಮದೊಳಗೆ ಬಸ್‌ಗಳು ಬರಬೇಕು, ಕ್ರಾಸಿನಲ್ಲಿ ನಿಂತರೂ ಬಸ್‌ಗಳು ನಿಲ್ಲುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.
ಕೊನೆಗೆ ವಿಭಾಗೀಯ ಅಧಿಕಾರಿ ಪಿ.ವಿ.ಮೇತ್ರಿ ಅವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ ನಂತರ ಹೋರಾಟವನ್ನು ಕೈಬಿಡಲಾಯಿತು. ಗ್ರಾಮೀಣ ಠಾಣೆ ಪೊಲೀಸರು ಸ್ಥಳದಲ್ಲಿದ್ದು, ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.