ವಿಧಾನಸಭೆ: ಜಿ.ವಿ.ಮಂಟೂರ ನಿಧನಕ್ಕೆ ಸದನದಲ್ಲಿ ಸಂತಾಪ
ನಾಡನುಡಿ ನ್ಯೂಸ್
ಬಾಗಲಕೋಟೆ:
ಬಾಗಲಕೋಟೆ ಮಾಜಿ ಶಾಸಕ, ದಿವಂಗತ ಜಿ.ಎಸ್.ಮಂಟೂರ ಅವರ ನಿಧನಕ್ಕೆ ಮೌನಾಚರಣೆ ನಡೆಸಿ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚಕ ನಿರ್ಣಯ ಮಂಡಿಸಿದರು.
ಜಿ.ಎಸ್.ಮಂಟೂರ ಅವರೊಂದಿಗಿನ ಒಡನಾಟ ನೆನೆದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ೮೫ರಲ್ಲಿ ನಾನು ಶಾಸಕನಾದಾಗಿನಿಂದಲೂ ನನಗೆ ಅತ್ಯಾಪ್ತರಾಗಿದ್ದರು. ಕಳೆದ ನಾಲ್ಕೈದು ವರ್ಷಗಳಿಂದ ಅವರೊಂದಿಗಿನ ಸಂಪರ್ಕ ಕಡಿಮೆ ಆಗಿತ್ತು.ಮುಂಚೆ ಅವರೊಂದಿಗೆ ಸದಾ ಒಡನಾಡವಿತ್ತು ಎಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ೧೯೮೫ರಲ್ಲಿ ಮಂಟೂರ ಅವರು ಜನತಾ ಪಕ್ಷದಿಂದ ಶಾಸಕರಾಗಿದ್ದರು, ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದರು, ಇಂರು ಅಂಥ ರಾಜಕಾರಣಿಗಳು ಕಾಣಸಿಗುವುದು ಅಪರೂಪ ಎಂದರು.
ಬಾಗಲಕೋಟೆ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಜಿ.ವಿ.ಮಂಟೂರ ಅವರು ೧೯೮೩ ಹಾಗೂ ೮೫ರಲ್ಲಿ ಎರಡು ಬಾರಿ ಶಾಸಕರಾಗಿದ್ದರು. ಮುಂದೆ ಸ್ಪರ್ಧಿಸದಿರಲು ನಿರ್ಧರಿಸಿ ಬೇರೆಯವರಿಗೆ ಅವಕಾಶ ಮಾಡಿಕೊಟ್ಟರು, ಅವರು ಅತ್ಯುತ್ತಮ ಕ್ರೀಡಾಪಟು ಸಹ ಆಗಿದ್ದರು ಎಂದು ಸ್ಮರಿಸಿದರು.
ಬವಿವ ಸಂಘದ ವಿಜ್ಞಾನ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿದ್ದು ಹೆಮ್ಮೆಯ ಸಂಗತಿ ಎಂದರು. ಸಂತಾಪ ಸೂಚಕ ನಿರ್ಣಯವನ್ನು ಮಂಟೂರ ಅವರ ಕುಟುಂಬಕ್ಕೆ ತಲುಪಿಸಲಾಗುವುದು ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.