ನವನಗರ ಬೈಕ್ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ..!

ನವನಗರ ಬೈಕ್ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ..!

ಬಾಗಲಕೋಟೆ: ನವನಗರದಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 
 ನವನಗರ ಬೈಪಾಸ್ ರಸ್ತೆಯ ಅಬಕಾರಿ ಭವನದ ಬಳಿ ಗುರುವಾರ ರಾತ್ರಿ ಸ್ಕೂಟಿ ಹಾಗೂ ಆರ್೧೫ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಮೃತಪಟ್ಟವರನ್ನು ಶೃತಿ ವಂದಕುದರಿ, ರಜನಿ ವಂದಕುದರಿ ಹಾಗೂ ಅಭಿಷೇಕ ದೋತ್ರಿ ಎಂದು ಗುರುತಿಸಲಾಗಿದೆ. ಶೃತಿ ಹಾಗೂ ರಜನಿ ಸ್ಕೂಟಿ ವಾಹನದಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅತೀವೇಗದಲ್ಲಿ ಆರ್೧೫ ಬೈಕ್‌ನಲ್ಲಿ ಬಂದ ಯುವಕರು ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದರು, ಆರ್೧೫ ಬೈಕ್ ಚಲಾಯಿಸುತ್ತಿದ್ದ ಸಂದೀಪ ಹುಲಸಗೇರಿ ಎಂಬಾತ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.