ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿದ ಮೇಟಿ
ಬಾಗಲಕೋಟೆ: ಶಾಸಕರು ಹಾಗೂ ಬಿ.ಟಿ.ಡಿ.ಎ ಅದ್ಯಕ್ಷರಾದ ಎಚ್.ವಾಯ್.ಮೇಟಿ ಶುಕ್ರವಾರ 20 ಜನ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಣೆ ಮಾಡಿದರು.
ಬಿಟಿಡಿಎ ಸಭಾಭವನದಲ್ಲಿ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಗೊಂಡ ಸಂತ್ರಸ್ತರ ಪುನರ ವಸತಿ ಮತ್ತು ಪುನರ್‌ನಿರ್ಮಾಣಕ್ಕೆ ಬಿಟಿಡಿಎ ಕಟಿಬದ್ದವಾಗಿದೆ . ಮೂಲ ಸಂತ್ರಸ್ತರಿಗೆ ಮತ್ತು ಬಾಡಿಗೆದಾರಿಗೆ ಹಕ್ಕು ಪತ್ರ ನೀಡುವ ಮೂಲಕ ಹಂತ ಹಂತವಾಗಿ ಪ್ರತಿ ತಿಂಗಳು ಅರ್ಹ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಲಾಗುವುದೆಂದು ಹೇಳಿದರು.
ಸಂದರ್ಭದಲ್ಲಿ ಮುಖ್ಯ ಅಭಿಯಂತರ ಬಸವರಾಜ, ಕಾರ್ಯನಿರ್ವಾಹಕ ಅಭಿಯಂತರ ವಿಜಯಶಂಕರ ಹೆಬ್ಬಳ್ಳಿ,ಎಸ್. ಎಸ್. ಡೊಳ್ಳಿ,ಪುನರ್ವಸತಿ ಅಧಿಕಾರಿ ಪ್ರಶಾಂತ ಬಾರಿಗಿಡದ ಉಪಸ್ಥಿತರಿದ್ದರು.