NADANUDI_EXCLUSIVE:ಹಿಜಾಬ್ ವಿವಾದ ಪೂರ್ವನಿಯೋಜಿತವೇ..!: ಟ್ವಟ್ಟರ್ ನಲ್ಲಿ ಬಯಲಾದ ಸತ್ಯವೇನು?
ಉಡುಪಿಯಿಂದ ಶುರುವಾದ ಹಿಜಾಬ್ ವಿವಾದ ಇದ್ದಕ್ಕಿದ್ದಂತ ಶುರುವಾಗಿದಲ್ಲ. ಅದು ಪೂರ್ವನಿಯೋಜಿತ ಎನ್ನುತ್ತಿದೆ ಟ್ವಿಟ್ಟರ್. ನಾಲ್ವರು ವಿದ್ಯಾರ್ಥಿನಿಯರು ಈ ವಿಚಾರದಲ್ಲಿ ಮಾಡಿದ ಟ್ಬಿಟಗಳು ಇಲ್ಲಿವೆ.
ನಾಡನುಡಿ ನ್ಯೂಸ್
ಬಾಗಲಕೋಟೆ:
ರಾಜ್ಯದಲ್ಲಿ ಹಿಜಾಬ್ ವಿವಾದ ಶುರುವಾಗಿದ್ದು ಇದ್ದಕ್ಕಿದ್ದಂತಲ್ಲ. ಅದು ಪೂರ್ವನಿಯೋಜಿತ ಕೃತ್ಯ ಎಂಬುದು ವಿವಾದಕ್ಕೆ ಕಾರಣವಾಗಿರುವ ವಿದ್ಯಾರ್ಥಿನಿಯರು ಮಾಡಿದ ಟ್ವಟ್ ಗಳಿಂದಲ ಬಯಲಾಗಿದೆ.
https://twitter.com/vijaygajera/status/1491728209200783360?s=19
ಅ.೧೧ರಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಸದಸ್ಯತ್ವ ಅಭಿಯಾನ ಮಾಡಿದ್ದು, ನಂತರ ನಾಲ್ವರು ವಿದ್ಯಾರ್ಥಿನಿಯರು ತಾವು "ಬುರ್ಖಾ ನಿಷೇಧದಿಂದ ಅನ್ಯಾಯಕ್ಕೆ ಒಳಗಾದವರು" ಎಂಬ ಟ್ಯಾಗ್ ಲೈನ್ ನಲ್ಲಿ ಅಂದೇ ತಮ್ಮ ಖಾತೆಗಳನ್ನು ತೆರೆದಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ವಿವಾದ ಸೃಷ್ಟಿಸಿದ ವಿದ್ಯಾರ್ಥಿನಿಯರು ಹಿಜಾಬ್ ಗೆ ಕಾಲೇಜಿನಲ್ಲಿ ನಿರ್ಬಂಧಿಸಿದ ನಂತರವೇ ನಾವು ಸಿಎಫ್ಐ ಸಂಪರ್ಕಿಸಿದೇವೆ ಅಲ್ಲಿಯವರೆಗೂ ನಮಗೂ ಆ ಸಂಘಟನೆಗೂ ಸಂಪರ್ಕವೇ ಇಲ್ಲ ಎಂದಿದ್ದರು. ಆದರೆ ಅವರೇ ಮಾಡಿರುವ ಟ್ವಿಟ್ ಗಳು ಅವರ ಹೇಳಿಕೆ ಸುಳ್ಳು ಎಂಬುದನ್ನು ಸಾಬೀತುಪಡಿಸಿವೆ.
ಸಾಮಾಜಿಕ ಕಾರ್ಯಕರ್ತ ವಿಜಯ ಪಟೇಲ್ ಎಂಬುವವರು ಸಿಎಫ್ಐ ಈ ಹೋರಾಟವನ್ನು ಅಕ್ಟೋಬರ್- ನವೆಂಬರ್ ತಿಂಗಳಿನಿಂದಲೇ ರೂಪಿಸುತ್ತ ಬಂದಿತ್ತು ಎಂಬುದನ್ನು ಆ ಸಂಘಟನೆ ಹಾಗೂ ವಿದ್ಯಾರ್ಥಿನಿಯರು ಮಾಡುತ್ತ ಬಂದಿರುವ ಟ್ವಿಟ್ ಗಳ ಮೂಲಕವೇ ಸಾಬೀತುಪಡಿಸಿದ್ದಾರೆ.
ಸಿಎಫ್ಐ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿ ಅಭಿಯಾನ ಹಾಗೂ ಬಾಬರಿ ಮಸೀದಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಹೋರಾಟ ನಡೆಸಿದೆ. ಆ ಅಭಿಯಾನಗಳಲ್ಲಿ ಸಂಘಟನೆ ನೀಡಿದ ಪೋಸ್ಟರ್ ಹಾಗೂ ಲೇಖನಗಳನ್ನು ಈ ವಿದ್ಯಾರ್ಥಿನಿಯರು ಶೇರ್ ಮಾಡಿದ್ದಾರೆ.
ಹಿಜಾಬ್ ವಿಚಾರವಾಗಿಯೂ ನಾಲ್ವರು ಶೇರ್ ಮಾಡಿದ ವಿಷಯ ಒಂದೇ ಥರನಾಗಿದ್ದು, ಸಿಎಫ್ಐ ಕೂಡ ಅದನ್ನೇ ಪ್ರತಿಪಾದಿಸಿದೆ.
ಇವರುಗಳ ಹೋರಾಟದ ಅಜೆಂಡ್ ರೂಪಿಸುತ್ತಲೇ ಕೆಲ ಎಡಪಂಥೀಯ ಮಾಧ್ಯಮಗಳು ಅದನ್ನು ರಾಷ್ಟ್ರಮಟ್ಟದಲ್ಲಿ ದಿಢೀರ್ ಸುದ್ದಿ ಮಾಡಿದ್ದು , ಇಡೀ ಎರಡ್ಮೂರು ತಿಂಗಳ ಬೆಳವಣಿಗೆಗಳನ್ನು ವಿಜಯ ಪಟೇಲ್ ಎಳೆಎಳೆಯಾಗಿ ಸಾಕ್ಷಿ ಸಮೇತ ವಿವರಿಸಿದ್ದಾರೆ. ಅವರ ಟ್ವಿಟ್ ಲಿಂಕಗಳನ್ನು ಸಹ ವರದಿಯಲ್ಲಿ ನೀಡಲಾಗಿದೆ. ವಿಜಯ ಟ್ವಟ್ಟ್ ಗಳನ್ನು ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲೂ ಸದ್ದು ಮಾಡಿವೆ.