ಟಿಸಿಎಸ್ ನಲ್ಲಿ ಅಂದು ಟೆಕ್ಕಿ, ಬಾಗಲಕೋಟೆಗೆ ಇಂದು ಡಿಸಿ: ಇದು ಪಿ.ಸುನೀಲಕುಮಾರ್ ಹಿಸ್ಟರಿ
ಭಾರತ ಹಾಗೂ ಹೊರದೇಶಲ್ಲಿ ೭ ವರ್ಷಗಳ ಕಾಲ ಟೆಕ್ಕಿಯಾಗಿ ಸೇವೆ ಸಲ್ಲಿಸಿರುವ ಪಿ.ಸುನೀಲಕುಮಾರ ಜನಪರ ಅಧಿಕಾರಿ ಎಂದು ಹೆಸರು ಮಾಡಿದ್ದಾರೆ. ಅವರ ಕುರಿತಾದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ಬಾಗಲಕೋಟೆ:
ಇಂಜನಿಯರಿಂಗ್ ಪದವಿ ಪಡೆದು ಭರ್ತಿ ೭ ವರ್ಷಗಳ ಕಾಲ ಟೆಕ್ಕಿಯಾಗಿ ದೇಶ, ವಿದೇಶದಲ್ಲಿ ಸೇವೆ ಸಲ್ಲಿಸಿದ ಬಾಗಲಕೋಟೆ ನೂತನ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರದು ಇಂಟರೆಸ್ಟಿಂಗ್ ಜರ್ನಿ. ೨೦೧೧ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಅವರು ಕೊಪ್ಪಳ, ವಿಜಯಪುರದಲ್ಲಿ ಡಿಸಿಯಾಗಿ ಸೇವೆ ಸಲ್ಲಿಸಿ ಛಾಪು ಮೂಡಿಸಿದ್ದಾರೆ.
ಪಿ.ಸುನೀಲ್ಕುಮಾರ ಅವರು ಮೂಲತಃ ಆಂಧ್ರಪ್ರದೇಶ ರಾಜ್ಯದವರಾಗಿದ್ದು, ವಾರಂಗಲ್ನ ನ್ಯಾಷನಲ್ ಇಸ್ಟಿಟ್ಯೂಟ್ ಆಪ್ ಟೆಕ್ನಾಲಜಿ (ಎನ್ಐಟಿ) ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಷಯದಲ್ಲಿ ಇಂಜಿನೀಯರಿಂಗ್ ಪದವಿಧರರಾಗಿದ್ದಾರೆ. ವಿದ್ಯಾಬ್ಯಾಸ ಬಳಿಕ 2002 ರಿಂದ 2009 ವರೆಗೆ ಟಾಟಾ ಕನ್ಸಲ್ಟಂಟ್ ಸಾಪ್ಟವೇರ್ ಕಂಪನಿಯ ಸಾಪ್ಟವೇರ್ ಇಂಜಿನೀಯರಾಗಿ 3 ವರ್ಷ ಭಾರತ ಮತ್ತು 4 ವರ್ಷ ವಿದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ.
ವಿದೇಶ ಸೇವೆಯ ನಂತರ ಭಾರತಕ್ಕೆ ಮರಳಿ ಯುಪಿಎಸ್ಸಿ ಪರೀಕ್ಷೆ ಬರೆದು 2011ರಲ್ಲಿ ಐ.ಎ.ಎಸ್ ತೇರ್ಗಡೆಹೊಂದಿರುತ್ತಾರೆ. ನಂತರ ಹಾಸನದಲ್ಲಿ 2 ವರ್ಷ ಪ್ರೊಬೇಷನರಿ ಅವಧಿ ಮುಗಿಸಿ, ಹೊಸಪೇಟೆಯಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಯಾದಗಿರಿ ಜಿಲ್ಲೆ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಬೆಂಗಳೂರಿನ ಕಾರ್ಮಿಕ ಇಲಾಖೆ, ಬಿಬಿಎಂಪಿಂ, ಪಾಲಿಕಾ ಆಡಳಿತದಲ್ಲಿ ಹಾಗೂ ರಿಯಲ್ ಎಸ್ಟೇಟ್ ರೆಗ್ಯೂಲೇಟರಿ ಅಥಾರಿಟಿ (ರೈರಾ) ಈ ವಿಭಾಗದಲ್ಲ್ಲಿ ಕಾರ್ಯನಿರ್ವಹಿಸಿ, ಕೊಪ್ಪಳ ಜಿಲ್ಲಾಧಿಕಾರಿಯಾಗಿ ಬಳಿಕ ವಿಜಯಪುರ ಜಿಲ್ಲಾಧಿಕಾರಿಯಾಗಿ ಕೂಡಾ ಸೇವೆ ಸಲ್ಲಿಸಿ ಈಗ ಬಾಗಲಕೋಟೆ ಜಿಲ್ಲಾಧಿಕಾರಿಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಜಿಲ್ಲಾಧಿಕಾರಿಗಳು ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿ ಶ್ರಮಿಸುವುದಾಗಿ ತಿಳಿಸಿದ ಅವರು ಮೊದಲು ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರದ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಎಂದರು. ಜಿಲ್ಲೆಯಲ್ಲಿ ಮೂವರು ಐ.ಎ.ಎಸ್ ಅಧಿಕಾರಿಗಳಾಗಿದ್ದ ಜಿ.ಪಂ ಸಿಇಓ ಟಿ.ಭೂಬಾಲನ್, ಯುಕೆಪಿಯ ಮಹಾ ವ್ಯವಸ್ಥಾಪಕ ಸ್ನೇಹಲ್ ಲೋಖಂಡೆ, ಹಾಗೂ ತಾವೂ ಸೇರಿ ಬಾಗಲಕೋಟೆ ಜಿಲ್ಲೆಯನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲಾಗುವುದು ಎಂದರು.