ಬವಿವ ಸಂಘದಲ್ಲಿ ಅಪಪ್ರಚಾರ ಇಬ್ಬರು ವಶಕ್ಕೆ ..!
ಬಾಗಲಕೋಟೆ: ಬವಿವ ಸಂಘಕ್ಕೆ ತೆರಳಿ ಅನಾಮಧೇಯ ಕರಪತ್ರ ಹಂಚಲು ಮುಂದಾಗಿದ್ದ ಇಬ್ಬರು ಯುವಕರು ಪೊಲೀಸರ ಅತಿಥಿಯಾಗಿದ್ದಾರೆ.
ಸಂಘದ ಹಾನಗಲ್ಲ ಶ್ರೀಕುಮಾರೇಶ್ವರ ಆಸ್ಪತ್ರೆಗೆ ತೆರಳಿರುವ ಇಬ್ಬರು ಯುವಕರು ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ ಅವರ ತೇಜೋವಧೆ ಮಾಡುವ ರೀತಿಯಲ್ಲಿ ಮುದ್ರಿಸಲಾಗಿರುವ ಕರಪತ್ರ ಹಂಚುವ ವೇಳೆ ಅಲ್ಲಿನ ಸಿಬ್ಬಂದಿ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕರಪತ್ರ ಮುದ್ರಣ ಮಾಡಿದವರು, ಮುದ್ರಿತ ಕರಪತ್ರಗಳ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದೆ. ಆದರೆ ಅದನ್ನು ಗಾಳಿಗೆ ತೂರಿ ಸಂಘದ ಬಗ್ಗೆ ಮತ್ತು ಕಾರ್ಯಾಧ್ಯಕ್ಷರ ಬಗ್ಗೆ ಅಪಪ್ರಚಾರ ಮಾಡುವ ಕರಪತ್ರವನ್ನು ಹಂಚಲಾಗಿದೆ ಎಂದು ತಿಳಿದು ಬಂದಿದೆ.
ಕರಪತ್ರದಲ್ಲಿ ಸಂಘದಲ್ಲಿ ದಬ್ಬಾಳಿಕೆಯಿದ್ದು, ಸ್ವತಾ ಶಾಸಕರ ಸಹೋದರ ಬಮಡಾಯವಾಗಿ ಸ್ಪರ್ಧಿಸಿದ್ದು, ನಿಮ್ಮ ಮತ ಸಂಘದ ದುರ್ಬಳಕೆಯನ್ನು ತಡೆಯುತ್ತದೆ ಎಂದು ಉಲ್ಲೇಖಿಸಿ ಪರೋಕ್ಷವಾಗಿ ಮಲ್ಲಿಕಾರ್ಜುನ ಚರಂತಿಮಠ ಅವರಿಗೆ ಮತ ನೀಡುವಂತೆ ಉಲ್ಲೇಖಿಸಲಾಗಿದೆ. ಇಬ್ಬರು ಯುವಕರನ್ನು ನವನಗರ ಠಾಣೆ ಪೊಲೀಸರು ಠಾಣೆಗೆ ಕರೆದೊಯ್ದಿದ್ದು, ಕರಪತ್ರ ಮುದ್ರಣಗೊಂಡಿರುವುದು ಎಲ್ಲಿ, ಮುದ್ರಣ ಮಾಡಿಸಿದ್ದು ಯಾರೆಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
(advertisment)