ಪಾಕ್ ಧ್ವಜದ ರೀಲ್ಸ್: ಯುವಕ ವಶಕ್ಕೆ, ನಾಳೆ ಪ್ರತಿಭಟನೆ
ಬಾಗಲಕೋಟೆ:ವಾಟ್ಸಪ್ ಸ್ಟೇಟಸ್ ನಲ್ಲಿ ಪಾಕ್ ಧ್ವಜವಿರುವ ರೀಲ್ಸ್ ಹಾಕಿದ ಯುವಕನನ್ನು ಕಲಾದಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತೌಸೀಫ್ ಮೆಹತರ್(೨೧) ಪೊಲೀಸ್ ವಶದಲ್ಲಿರುಚ ವ್ಯಕ್ತಿ. ಈತ ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ಪಾಕ್ ಧ್ವಜದ ರೀಲ್ಸ್ ಇಟ್ಟಿದ್ದ, ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬುಧವಾರ ಪ್ರತಿಭಟನೆ: ಕಲಾದಗಿಯಲ್ಲಿ ಯುವಕ ಪಾಕ್ ಧ್ವಜದ ಸ್ಟೇಟಸ್ ಇಟ್ಟಿರುವ ಘಟನೆ ಖಂಡಿಸಿ ಸಮಸ್ತ ಹಿಂದೂ ಸಮಾಜದಿಂದ ಬುಧವಾರ ಕಲಾದಗಿಯ ರಂಗಮAದಿರದ ಬಳಿ ಪ್ರತಿಭಟನೆ ಏರ್ಪಡಿಸಲಾಗಿದೆ. ಬೆಳಗ್ಗೆ ೧೧ಕ್ಕೆ ಪ್ರತಿಭಟನೆ ಜರುಗಲಿದೆ.