ಕೊಡುವದಾದರೆ ಪುಸ್ತಕವನ್ನೇ ಕೊಡಿ: ಶಾಸಕ ಎಚ್.ವೈ.ಮೇಟಿ

ಕೊಡುವದಾದರೆ ಪುಸ್ತಕವನ್ನೇ ಕೊಡಿ: ಶಾಸಕ ಎಚ್.ವೈ.ಮೇಟಿ

ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭಾಪತಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಶಾಸಕ ಎಚ್.ವೈ.ಮೇಟಿ ಅವರು ತಮ್ಮನ್ನು ಅಭಿನಂದಿಸಲು ಬರುವವರ ಹಾರ, ಶಾಲು, ಹಣ್ಣಿನ ಬದಲಾಗಿ ಪುಸ್ತಕ ತರುವಂತೆ ಮನವಿ ಮಾಡಿದ್ದಾರೆ.

ಈ ಕುರಿತಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಬ್ದುಲರಜಾಕ ಬೆಣ್ಣೂರ, ಎಸ್.ಎನ್.ರಾಂಪೂರ ಅವರು ಪ್ರಕಟಣೆ ನೀಡಿದ್ದು, ಪಕ್ಷದ ಕಾರ್ಯಕರ್ತರು, ವ್ಯಾಪಾರಸ್ಥರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘಟನೆಗಳು ಶಾಸಕರನ್ನು ಅಭಿನಂದಿಸುವುದಾದರೆ ಪುಸ್ತಕಗಳನ್ನು ನೀಡಿ ಅಭಿನಂದಿಸಲು ಕೋರಿದ್ದಾರೆ. ಬಂದ ಪುಸ್ತಕಗಳನ್ನು ಭವಿಷ್ಯದಲ್ಲಿ ಅಗತ್ಯವಿದ್ದವರಿಗೆ ನೀಡುವ ಯೋಚನೆಯನ್ನು ಶಾಸರಕರು ಹೊಂದಿದ್ದಾರೆ.