BEER: ಬಿಯರ್ ಕುಡಿಯೋರು ಚಿಯರ್ಸ್ ಹೇಳುವಂತ್ತಿಲ್ಲ..!

ಬಿಯರ್ ಬೆಲೆ ಹೆಚ್ಚಳಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಬಿಯರ್ ಪ್ರಿಯರಿಗೆ ಆ ಮೂಲಕ ಶಾಕ್ ನೀಡಿದೆ. ಹೀಗಾಗಿ ಬಿಯರ್ ಪ್ರಿಯರು ಚಿಯರ್ಸ್ ಹೇಳುವುದಕ್ಕೂ ಚಿಂತಿಸಬೇಕಿದೆ.

BEER: ಬಿಯರ್ ಕುಡಿಯೋರು ಚಿಯರ್ಸ್ ಹೇಳುವಂತ್ತಿಲ್ಲ..!

ಬಾಗಲಕೋಟೆ: ರಾಜ್ಯದಲ್ಲಿ ಬಿಯರ್ ಬೆಲೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿರುವುದರಿಂದ ಬಿಯರ್ ಪ್ರಿಯರ್ ಚಿಯರ್ಸ್ ಹೇಳಿ ಎಂಜಾಯ್ ಮಾಡಲು ಯೋಚಿಸಬೇಕಾಗಲಿದೆ.

ರಾಜ್ಯದಲ್ಲಿನ ಶೇ.೧೦ ಬಿಯರ್ ಬೆಲೆ ಹೆಚ್ಚಿಸಲಾಗುತ್ತದೆ.‌ ಆದರೆ ಮದ್ಯದ ದರಗಳ ಏರಿಕೆಗೆ ಸದ್ಯಕ್ಕೆ ಪ್ರಸ್ತಾವನೆ ಇಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶೇ.೧೦ ಬಿಯರ್ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ. ಆದರೆ ಇತರ ಮದ್ಯದ ಬೆಲೆ ಹೆಚ್ಚಳವಾಗುವುದಿಲ್ಲ. ಬಜೆಟ್‌ನಲ್ಲೂ ಮದ್ಯದ ಬೆಲೆ ಏರಿಕೆ ಪ್ರಸ್ತಾಪಿಸುವ ಚಿಂತನೆಯಿಲ್ಲ ಎಂದು ಸ್ಪಷ್ಟಪಡಿಸಿದರು. 

 ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರ ಪತನವಾಗುತ್ತದೆ ಎಂಬ ಬಿಜೆಪಿ ಮುಖಂಡರ ಹೇಳಿಕೆಗೆ ಉತ್ತರಿಸಿದ ಅವರು, ರಾಜ್ಯದ ಜನ ೧೩೬ ಜನರನ್ನು ಗೆಲ್ಲಿಸಿ ಪೂರ್ಣಬಹುಮತ ನೀಡಿದ್ದಾರೆ. ಸರ್ಕಾರವನ್ನು ಪತನ ಮಾಡುವುದು ಸುಲಭದ ಮಾತಲ್ಲ. ಬಿಜೆಪಿ ಅವರಿಗೆ ಹಣಕೊಟ್ಟು ಖರೀದಿಸುವ ಚಾಳಿಯಿದ್ದು, ಅಂಥ ಪ್ರಯತ್ನಕ್ಕೆ ಕೈ ಹಾಕಿದ್ದಾರಾ ಗೊತ್ತಿಲ್ಲ ಎಂದು ಹೇಳಿದರು. 
 ದಕ್ಷಿಣ ಭಾರತ ಪ್ರತ್ಯೇಕಗೊಳಿಸುವ ಡಿ.ಕೆ.ಸುರೇಶ ಹೇಳಿಕೆ ಕುರಿತಾಗಿ ಮಾತನಾಡಿದ ಅವರು, ಡಿ.ಕೆ.ಸುರೇಶ ಅವರು ದೇಶದವನ್ನು ಒಡೆಯುವ ಮಾತು ಹೇಳಿಲ್ಲ. ದಕ್ಷಿಣ ಭಾರತವನ್ನು ನಿರ್ಲಕ್ಷಿಸಿದರೆ ಜನ ಹಾಗೆ ಕೆರಳುತ್ತಾರೆ ಎಂಬ ಜನರ ಭಾವನೆಯನ್ನು ಮುಂದಿಡುವ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರ ಈ ಭಾಗಕ್ಕೆ ಏನು ಮಾಡಿದೆ ಎಂಬುದನು ಬಹಿರಂಗಪಡಿಸಲಿ. ಭೀಕರ ಬರವಿದ್ದರೂ ಕೇಂದ್ರ ಸರ್ಕಾರ ಏನೂ ನೀಡಿಲ್ಲ. ಈ ಬಗ್ಗೆ ಅಂಕಿ ಅಂಶಗಳನ್ನು ಅವರು ನೀಡಲಿ ಎಂದು ಸವಾಲೆಸೆದರು. 
 ಅಡ್ವಾಣಿಗೆ ಅವರಿಗೆ ಭಾರತರತ್ನ ನೀಡಿರುವುದರಲ್ಲಿ ತಪ್ಪಿಲ್ಲ. ಅವರು ಹಿರಿಯ ನಾಯಕರು ಆದರೆ ಬಿಜೆಪಿ ಅವರು ಚುನಾವಣೆ ಸಂದರ್ಭದಲ್ಲೇ ಇಂಥವುಗಳನ್ನು ಮಾಡುತ್ತಾರೆ ಎಂದು ಹೇಳಿದರು.