ಹೆಚ್ಚುತ್ತಿರುವ ಹಣಕಾಸು ಅವ್ಯವಹಾರ: ಜಿಲ್ಲೆಯಲ್ಲಿ ೧೭ ಪ್ರಕರಣ ಸಿಐಡಿಗೆ..!
ಹೆಚ್ಚುತ್ತಿರುವ ಹಣಕಾಸು ಅವ್ಯವಹಾರ: ಜಿಲ್ಲೆಯಲ್ಲಿ ೧೭ ಪ್ರಕರಣ ಸಿಐಡಿಗೆ..!
ಬಾಗಲಕೋಟೆ:
ಜಿಲ್ಲೆಯಲ್ಲಿ ಹಣಕಾಸು ಅವ್ಯವಹಾರದ ಪ್ರಕರಣಗಳು ಹೆಚ್ಚಾಗುತ್ತಿವೆ. ನಾಲ್ಕು ವರ್ಷದಲ್ಲಿ ಹದಿನೇಳು ಪ್ರಕರಣಗಳನ್ನು ಸಿಐಡಿಗೆ ವಹಿಸಲಾಗಿದೆ.
೨೦೨೦ ರಿಂದ ೨೦೨೪ರವರೆಗೆ ಒಟ್ಟು ೧೭ ಪ್ರಕರಣ ಸಿಐಡಿಗೆ ನೀಡಲಾಗಿದೆ. ಈ ಪೈಕಿ ಐದರಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಆಗಿದೆ.
ಪ್ರಕರಣಗಳ ವಿವರ:
ಪವರ್ ಬ್ಯಾಂಕ್ ಎಂಬ ಆಪ್ ನಲ್ಲಿ ೨.೦೫ ಲಕ್ಷ ರೂ. ದುರುಪಯೋಗವೂ ಸೇರಿ ೧೦ ಪ್ರಕರಣಗಳಲ್ಲಿ ೨೯.೪೦ ಕೋಟಿ ರೂ. ಅವ್ಯವಹಾರವಾಗಿದೆ.
ಈ ಪೈಕಿ ಡಿಸಿಸಿ ಬ್ಯಾಂಕ್ ಜವಾನ ಪ್ರವೀಣ ಪತ್ರೆ ಪ್ರಕರಣದ ೧೨.೨೭ ಕೋಟಿ ರೂ. ಅವ್ಯವಹಾರ. ಐಡಿಬಿಐ ಬ್ಯಾಂಕ್ ನಲ್ಲಿ ೫ ಇಲಾಖೆಗಳ ೬.೦೮ ಕೋಟಿ ಅಕ್ರಮ ವರ್ಗಾವಣೆ, ಕೆವಿಜಿ ಹಾಗೂ ಐಸಿಐಸಿ ಬ್ಯಾಂಕ್ ಗಳಲ್ಲಿ ಅಂದಾಜು ೧೧ ಕೋಟಿಯಷ್ಟು ಅಕ್ರಮ ಹಣ ವರ್ಗಾವಣೆ, ಅವ್ಯವಹಾರ ಪ್ರಕರಣಗಳೂ ಇವೆ.