ಐಡಿಬಿಐ ಹಗರಣ: ತನಿಖೆಗೆ ಸಿಐಡಿ ಅಧಿಕಾರಿಗಳು ಎಂಟ್ರಿ..!

ಐಡಿಬಿಐ ಹಗರಣ: ತನಿಖೆಗೆ ಸಿಐಡಿ ಅಧಿಕಾರಿಗಳು ಎಂಟ್ರಿ..!
ಬಾಗಲಕೋಟೆ: 
ಐಡಿಬಿಐ ಬ್ಯಾಂಕ್‌ನಲ್ಲಿ ವಿವಿಧ ಇಲಾಖೆಗಳು ಇರಿಸಿದ್ದ ೬.೦೮ ಕೋಟಿ ರೂ. ವಂಚನೆ ಪ್ರಕರಣದ ತನಿಖೆಗೆ ಈಗ ಸಿಐಡಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಒಟ್ಟು ೫ ಇಲಾಖೆಗಳಿಗೆ ಸಂಬAಧಿಸಿದAತೆ ಪ್ರತ್ಯೇಕ ದೂರು ದಾಖಲಾಗಿದ್ದು, ಇಲಾಖಾವಾರು ತನಿಖೆಗೆ ಪ್ರತ್ಯೇಕ ತಂಡಗಳನ್ನೇ ರಚಿಸಲಾಗಿದೆ. 
ಐಡಿಬಿಐಬ್ಯಾಂಕ್‌ನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಇರಿಸಿದ್ದ ೨.೪೭ ಕೋಟಿ ರೂ.ಗಳು ಅಕ್ರಮ ವರ್ಗಾವಣೆ ಆಗಿರುವುದು ಕಂಡು ಬಂದು ಜು.೧೧ರಂದು ದೂರು ದಾಖಲಾಗಿತ್ತು. ಮುಂದೆ ಜಿಲ್ಲಾಧಿಕಾರಿಗಳು ಐಡಿಬಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಎಲ್ಲ ಇಲಾಖೆಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದಾಗ ಪ್ರವಾಸೋದ್ಯಮವೂ ಸೇರಿ ಅಲ್ಪಸಂಖ್ಯಾತ ಇಲಾಖೆ, ಜವಳಿ ಮತ್ತು ಕೈಮಗ್ಗ ಇಲಾಖೆ, ಪಂಚಾಯತರಾಜ್ ಇಂಜನಿಯರಿAಗ್ ವಿಭಾಗ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ೬.೦೮ ಕೋಟಿ ರೂ.ಗಳು ಅಕ್ರಮವಾಗಿ ವರ್ಗಾವಣೆ ಆಗಿರುವುದು ಕಂಡು ಬಂದಿತ್ತು. ಐದು ಇಲಾಖೆಗಳ ಮುಖ್ಯಸ್ಥರು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು. 
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ವೈ.ಅಮರನಾಥ ರೆಡ್ಡಿ ಅವರು ಸಿಪಿಐ ಎಂ.ನಾಗರೆಡ್ಡಿ ನೇತೃತ್ವದಲ್ಲಿ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು. ಅದರಂತೆ ಐಡಿಬಿಐ ಬ್ಯಾಂಕ್‌ನ ೯ ಸಿಬ್ಬಂದಿ, ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿ ಒಟ್ಟು ೨೧ ಜನರನ್ನು ಪ್ರಕರಣದ ಸಂಬAಧ ಬಂಧಿಸಲಾಗಿತ್ತು. ನಂತರ ಪೊಲೀಸ್ ಮಹಾನಿರ್ದೇಶಕರಿಗೆ ಶಿಫಾರಸ್ಸು ಮಾಡಿ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರಿಂದ ಮಂಗಳವಾರ ಇಬ್ಬರು ಅಧಿಕಾರಿಗಳ ತಂಡ ನಗರಕ್ಕೆ ಆಗಮಿಸಿ ಸಿಇಎನ್ ಠಾಣೆಯಲ್ಲಿ ದಾಖಲೆಗಳನ್ನು ಸಂಗ್ರಹಿಸಿದೆ. ಬೆಳಗಾವಿಯಲ್ಲಿರುವ ಐಜಿಪಿ ವಿಕಾಸ್‌ಕುಮಾರ್ ವಿಕಾಸ್ ಅವರನ್ನು ಭೇಟಿ ಮಾಡಲು ಸಿಐಡಿ ಅಧಿಕಾರಿಗಳು ತೆರಳಿದ್ದು, ಐಡಿಬಿಐ ಬ್ಯಾಂಕ್‌ನಲ್ಲೂ ದಾಖಲೆಗಳ ಪರಿಶೀಲನೆ ಜರುಗಲಿದೆ. 
ಇಬ್ಬರು ಅಧಿಕಾರಿಗಳ ತಂಡ ಆಗಮನ: 
ಪ್ರವಾಸೋದ್ಯಮ ಇಲಾಖೆ, ಅಲ್ಪಸಂಖ್ಯಾತ ಇಲಾಖೆ, ಜವಳಿ ಮತ್ತು ಕೈಮಗ್ಗ ಇಲಾಖೆ, ಪಂಚಾಯತರಾಜ್ ಇಂಜನಿಯರಿ0ಗ್ ವಿಭಾಗ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ದೂರು ದಾಖಲಾದ ಹಿನ್ನೆಲೆಯಲ್ಲಿ ಐದೂ ಇಲಾಖೆಗಳ ತನಿಖೆಯನ್ನು ಪ್ರತ್ಯೇಕವಾಗಿ ನಡೆಸಲು ಸಿಐಡಿ ನಿರ್ಧರಿಸಿದೆ. ಅದಕ್ಕಾಗಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.
ಸಿಐಡಿ ಡಿವೈಎಸ್‌ಪಿ ಮಂಜುನಾಥ ನೇತೃತ್ವದ ತಂಡಕ್ಕೆ ಅಲ್ಪಸಂಖ್ಯಾತ ಇಲಾಖೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿದ್ದು, ಪಂಚಾಯತ್ ರಾಜ್ ಇಲಾಕೆಯ ಜವಾಬ್ದಾರಿಯನ್ನು ಸಿಐಡಿ ಇನ್ಸೆ÷್ಪಕ್ಟರ್ ಸಿ.ನಾಗಪ್ಪ ಅವರಿಗೆ ವಹಿಸಲಾಗಿದೆ. ಇನ್ನುಳಿದ ಮೂರು ಇಲಾಖೆಗಳ ತನಿಖೆಗಾಗಿ ಇತರ ತಂಡಗಳು ಬುಧವಾರ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ. 
ಬಾಕ್ಸ್
   ಕಳೆದುಕೊಂಡ ಹಣ ಬ್ಯಾಂಕ್‌ನಿ0ದಲೇ ವಸೂಲಿ..!
೬,೦೮,೬೨,೫೬೮ ಕೋಟಿ ರೂ.ಗಳು ಅಕ್ರಮವಾಗಿ ವರ್ಗಾವಣೆ ಆಗಿತ್ತು. ಬ್ಯಾಂಕಿನ ಕೆಲ ಸಿಬ್ಬಂದಿ ಕೃತ್ಯದಲ್ಲಿ ಭಾಗಿಯಾಗಿದ್ದರು. ಪ್ರಕರಣಕ್ಕೆ ಸಂಬ0ಧಿಸಿದ0ತೆ ಒಟ್ಟು ೨೧ ಜನರನ್ನು ಬಂಧಿಸಲಾಗಿದೆ. ಈ ಪೈಕಿ ೪,೭೯,೯೯,೪೯೯ ಕೋಟಿ ರೂ.ಗಳು ಆಯಾ ಇಲಾಖೆ ಖಾತೆಗಳಿಗೆ ಮರು ಜಮೆಯಾಗಿದೆ. ಇನ್ನೂ ೧,೨೮,೬೩,೦೬೯ ಕೋಟಿ ರೂ. ಬರಬೇಕಿದೆ. ಪ್ರವಾಸೋದ್ಯಮ ಇಲಾಖೆಗೆ ಸಂಬ0ಧಿಸಿದ0ತೆ ೨.೪೭ ಕೋಟಿ ರೂ.ಗಳ ಪೈಕಿ ಇಲಾಖಾ ಖಾತೆಗೆ ೧.೪೬ ಕೋಟಿ ರೂ.ಗಳು ಮರುಸಂದಾಯವಾಗಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸಂಬ0ಧಿಸಿದ0ತೆ ೭೯.೭೫ ಲಕ್ಷ ರೂ.ಪೈಕಿ ಅಷ್ಟು ಮೊತ್ತ ಮರಳಿ ಬಂದಿದೆ. ಪಂಚಾಯತ್ ರಾಜ್ ಇಲಾಖೆ ಇಂಜನಿಯರಿAಗ್ ವಿಭಾಗದ ೮೬.೪೦ ಲಕ್ಷ ರೂ. ಪೈಕಿ ಅಷ್ಟೂ ಮೊತ್ತ ವಾಪಸ್ ಬಂದಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬAಧಿಸಿದAತೆ ೧.೭೬ ಕೋಟಿ ರೂ.ಗಳ ಪೈಕಿ ೧.೬೫ ಕೋಟಿ ರೂ. ಮೊತ್ತ ಇಲಾಖಾ ಖಾತೆಗೆ ಜಮೆ ಆಗಿದೆ.
ಕೈಮಗ್ಗ ಮತ್ತು ಜವಳಿ ಇಲಾಖೆಗೆ ಸಂಬ0ಧಿಸಿದ0ತೆ ೧೮.೧೫ ಲಕ್ಷ ರೂ.ಗಳ ಪೈಕಿ ೨.೭೨ ಲಕ್ಷ ರೂ. ಮರು ಜಮೆ ಮಾಡಿಸಲಾಗಿದೆ.