ಕಾಂಗ್ರೆಸ್‌ನಿ0ದ ಧರೆಯಪ್ಪ ಸಾಂಗ್ಲಿಕರ ಉಚ್ಛಾಟನೆ

ಕಾಂಗ್ರೆಸ್‌ನಿ0ದ ಧರೆಯಪ್ಪ ಸಾಂಗ್ಲಿಕರ ಉಚ್ಛಾಟನೆ

 

ಬಾಗಲಕೋಟೆ: 
ಬೆಳಗಲಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ ಆರೋಪದ ಮೇಲೆ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರೆಯಪ್ಪ ಸಾಂಗ್ಲಿಕರ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ೬ ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. 
ಮಂಗಳವಾರ ಬೆಳಗಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ವಿರೋಧಿಸಲು ಹೇಳಿದಲ್ಲದೇ, ತಮ್ಮ ಪುತ್ರನ ಪತ್ನಿಯನ್ನು ಬಿಜೆಪಿಗೆ ಕಳುಹಿಸಿ ಉಪಾಧ್ಯಕ್ಷರನ್ನಾಗಿ ಮಾಡಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ ಎಂದು ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ದೂರಿ ಉಚ್ಛಾಟಿಸಿದ್ದಾರೆ.

 
ಮತ್ತೊಂದು ಕಡೆ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಪತ್ರ ಬರೆದಿರುವ ಧರೆಯಪ್ಪ ಸಾಂಗ್ಲಿಕರ ಅವರು ೨೦೨೧ರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದೇನೆ. ಆದರೆ ಸಚಿವ ಆರ್.ಬಿ.ತಿಮ್ಮಾಪುರ ಅವರ ಸರ್ವಾಧಿಕಾರಿ ಧೋರಣೆ ಹಾಗೂ ದುರವರ್ತನೆಯಿಂದ ಪಕ್ಷದ ಕಾರ್ಯಕರ್ತರು, ನಿಷ್ಠಾವಂತರಿಗೆ ನೋವಾಗಿದೆ. ಕಾಂಗ್ರೆಸ್ ತಮ್ಮ ಮನೆಯ ಸ್ವತ್ತು ಎಂಬAತೆ ತಿಮ್ಮಾಪುರ ಕುಟುಂಬಸ್ಥರು ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿ ಈ ಎಲ್ಲ ಹಿನ್ನೆಲೆಯಲ್ಲಿ ಲಿಂಗಾಯತ-ಪ0ಚಮಸಾಲಿ ಸಮಾಜದ ಅಧ್ಯಕ್ಷನಾಗಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.