ಕಟ್ಟಡ ತೆರುವಿಗೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ವಿರೋಧ
ಬಾಗಲಕೋಟೆ: ಮುಳುಗಡೆ ಬಾಧಿತ ಕಟ್ಟಡಗಳನ್ನು ತೆರವುಗೊಳಿಸುವ ಸಂಬ0ಧ ಬಿಟಿಡಿಎ ನೀಡಿರುವ ನೋಟಿಸ್‌ಗೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ೫೨೧ ಮೀಟರ್ ವರೆಗೆ ನೀರು ಸಂಗ್ರಹಣೆ ಇಲ್ಲದಿರುವುದರಿಂದ ಕಟ್ಟಡಗಳ ತೆರವಿಗೆ ಮುಂದಾಗದAತೆ ಬಿಟಿಡಿಎ ಸಭಾಪತಿಗಳೂ ಆಗಿರುವ ಶಾಸಕ ಎಚ್.ವೈ.ಮೇಟಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಿದೆ.
ಈ ಸಂಬ0ಧ ಬುಧವಾರ ಸಂಜೆ ಕಿಲ್ಲಾ ಓಣಿಯಲ್ಲಿರುವ ಗ್ರಾಮದೇವತೆ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಹೋರಾಟಗಾರರು, ಮುಳುಗಡೆ ಸಂತ್ರಸ್ತರು ಭಾಗಿಯಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ನಗರ ಸಂಪೂರ್ಣ ಸ್ಥಳಾಂತರಕ್ಕೆ ಹಿಂದಿನಿ0ದಲೂ ಹೋರಾಟ ಸಮಿತಿ ಆಗ್ರಹಿಸುತ್ತ ಬಂದಿದೆ. ಈಗ ಬಿಟಿಡಿಎ ಅಧಿಕಾರಿಗಳು ನೀಡಿರುವ ನೋಟಿಸ್ ಆಶ್ಚರ್ಯ ಮೂಡಿಸಿದ್ದು, ಕಟ್ಟಡಗಳ ತೆರವಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡಬಾರದು. ಅಂಥ ಕ್ರಮಕ್ಕೆ ಮುಂದವರಿದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ನಾರಾ ಎಚ್ಚರಿಸಿದ್ದಾರೆ.
ಈಗ ನೋಟಿಸ್ ನೀಡಲು ಕಾರಣ ಏನು, ನಮ್ಮ ಬೇಡಿಕೆಗಳು ಏನೆಂಬುದಕ್ಕೆ ನಾಳೆಯೆ ಶಾಸಕರು ಹಾಗೂ ಸಂಬAಧಿಸಿದ ಅಧಿಕಾರಿಗಳ ದಿನಾಂಕವನ್ನು ಪಡೆದುಕೊಳ್ಳುತ್ತೇವೆ. ಅವರೊಂದಿಗೆ ಕುಳಿತು ಚರ್ಚಿಸುತ್ತೇವೆ. ನಗರದಲ್ಲಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ನಡುಗಡ್ಡೆಯೂ ಸೇರಿದಂತೆ ಸಂಪೂರ್ಣ ಸ್ಥಳಾಂತರ ನಮ್ಮ ಬೇಡಿಕೆಯಾಗಿದೆ. ಈಗ ಅನಗತ್ಯ ಒಕ್ಕಲೆಬ್ಬಿಸುವ ಗೊಂದಲಕ್ಕೆ ಬಿಟಿಡಿಎ ಅಧಿಕಾರಿಗಳು ಮುಂದಾಗಬಾರದು ಎಂದು ನಾರಾ ತಿಳಿಸಿದ್ದಾರೆ.
ನಗರದ ದೇವಸ್ಥಾನಗಳಿಗ ನಿವೇಶನ ಹಂಚಿಕೆಯಾಗಿಲ್ಲ. ಮೊದಲು ಮೂಲೆನಿವೇಶನಗಳನ್ನು ನೀಡುವುದಾಗಿ ಹೇಳಿ ಈಗ ಅವುಗಳನ್ನು ಹರಾಜಿಗೆ ಬಳಸಿಕೊಂಡು ಮನೆ ನಿವೇಶನಗಳನ್ನೇ ದೇಗುಲಗಳಿಗೆ ನೀಡುತ್ತೇವೆ ಎನ್ನುತ್ತಿದ್ದಾರೆ. ಅನೇಕ ಗೊಂದಲಗಳು ಇರುವುದರಿಂದ ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರವೇ ತೀರ್ಮಾನಕ್ಕೆ ಬರುವುದಾಗಿ ತಿಳಿಸಿದರು.
ನಡುಗಡ್ಡೆ ಪ್ರದೇಶದಲ್ಲಿನ ಕಟ್ಟಡಗಳಿಗೆ ಮಳೆ ಸೇರಿದಂತೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹಾನಿಯಾದರೆ ಜೆಎಂಸಿ ಆಗಿರುವ ಕಟ್ಟಡಗಳಿಗೆ ಪರಿಹಾರ ನೀಡಲು ಬರುವುದಿಲ್ಲ ಎಂದು ಸಾಗಿ ಹಾಕಲಾಗುತ್ತಿದೆ. ಇದರ ಬಗ್ಗೆಯೂ ಪ್ರಶ್ನಿಸುವ ಕೆಲಸವಾಗಬೇಕೆಂದು ಕಿಲ್ಲಾ ಭಾಗದ ನಗರಸಭೆ ಸದಸ್ಯ ಶ್ರೀನಾಥ ಸಜ್ಜನ ಸೇರಿ ಹಲವರು ಒತ್ತಾಯಿಸಿದರು
ಅಧ್ಯಕ್ಷ ಸಂಗಯ್ಯ ಸರಗಣಾಚಾರಿ, ಉಪಾಧ್ಯಕ್ಷರಾದ ಗುಂಡುರಾವ ಶಿಂಧೆ, ಬಾಬು ಮುದ್ದೆಬಿಹಾಳ ಪದಾಧಿಕಾರಿಗಳಾದ ಮಹೇಶ ಕಮತಗಿ, ಸಾಗರ ಬಂಡಿ, ಸುರೇಶ ಮಜ್ಜಗಿ, ಬಸವರಾಜ ನಾಶಿ, ಅಬ್ದುಲಸತಾರ ಮನಿಯಾರ ಮತ್ತಿತರರು ಇದ್ದರು.